ಬಕ್ರೀದ್ ಹಿನ್ನಲೆ ಚಾಮರಾಜಪೇಟೆಯಲ್ಲಿ ಮೇಕೆಗಳ‌ ಮೇಳ; ಬಾಲಿವುಡ್ ನಟರ ಹೆಸರಿನಲ್ಲಿ‌ ಮಿಂಚಿದ ಮೇಕೆ- ಟಗರು

ಬಕ್ರೀದ್ ಹಬ್ಬ ಬಂದ್ರೆ ಸಾಕು ನಗರದ ಚಾಮರಾಜಪೇಟೆ ಈದ್ಗ ಮೈದಾನದಲ್ಲಿ ಮೇಕೆಗಳ‌ ಸಂತೆ ಮಾಡಲಾಗುತ್ತೆ. ಈ ವರ್ಷವು ಅದ್ದೂರಿಯಾಗಿ ಸಂತೆ ನಡೆದಿದ್ದು, ಬಾಲಿವುಡ್ ಹಿರೋಗಳ‌ ಹೆಸರನ್ನು ಕುರಿಗಳಿಗೆ ಇಟ್ಟು ವ್ಯಾಪಾರಸ್ಥರು ಭರ್ಜರಿ ವ್ಯಾಪಾರ ಮಾಡಿದ್ರು.‌

ಬಕ್ರೀದ್ ಹಿನ್ನಲೆ ಚಾಮರಾಜಪೇಟೆಯಲ್ಲಿ ಮೇಕೆಗಳ‌ ಮೇಳ; ಬಾಲಿವುಡ್ ನಟರ ಹೆಸರಿನಲ್ಲಿ‌ ಮಿಂಚಿದ ಮೇಕೆ- ಟಗರು
ಮೇಕೆಗಳ‌ ಮೇಳ
Follow us
| Updated By: ಆಯೇಷಾ ಬಾನು

Updated on: Jun 10, 2024 | 9:13 AM

ಬೆಂಗಳೂರು, ಜೂನ್.10: ಮುಸ್ಲಿಂ‌ ಬಾಂಧವರ ಪವಿತ್ರ ಹಬ್ಬ ಬಕ್ರೀದ್​ಗೆ (Bakrid) ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಈ ಹಬ್ಬದ ಸಲುವಾಗಿ ಮೇಕೆ- ಕುರಿಗಳಿಗೆ ಬಾರಿ ಡಿಮ್ಯಾಂಡ್ ಶುರುವಾಗಿದ್ದು, ಬಕ್ರೀದ್ ಸಲುವಾಗಿಯೇ ಚಾಮರಾಜಪೇಟೆ ಈದ್ಗ ಮೈದಾನದಲ್ಲಿ (Chamrajpet Idgah Maidan) ಕುರಿ- ಮೇಕೆಗಳ‌ ಸಂತೆ ನಡೆಯಿತು. ಮೇಳದಲ್ಲಿ ವಿವಿಧ ಬಗೆಯ ಮೇಕೆಯ ತಳಿಗಳು ಇದ್ದುದರಿಂದ ಲಕ್ಷಾಂತರ ರೂಪಾಯಿಯ ವಹಿವಾಟು ಸಹ ನಡೆಯಿತು.

ಪ್ರತಿವರ್ಷ ಬಕ್ರೀದ್ ಹಬ್ಬದ ಸಲುವಾಗಿ ನಗರದ ಚಾಮರಾಜಪೇಟೆಯ ಈದ್ಗ ಮೈದಾನದಲ್ಲಿ ದೊಡ್ಡ ಮಟ್ಟದ ಮೇಕೆ, ಕುರಿ, ಟಗರು ಮೇಳದ ಸಂತೆ ನಡೆಯುತ್ತೆ.‌ ಈ ವರ್ಷವು ಕುರಿ- ಮೇಕೆಗಳ‌ ಸಂತೆ ನಡೆಯುತ್ತಿದ್ದು ಮೇಳದಲ್ಲಿ ವಿವಿಧ ತಳಿಯ ಮೇಕೆ, ಕುರಿ, ಟಗರುಗಳಿಗೆ ಭಾರಿ ಡಿಮ್ಯಾಂಡ್ ಇತ್ತು.‌ ಇನ್ನು ಮೇಳದಲ್ಲಿ 7 ಬಗೆಯ ಕುರಿಗಳು ಮೂರು ಬಗೆಯ ಮೇಕೆಗಳು ಗಮನ ಸೆಳೆದ್ವು. ಅದರಲ್ಲಿ ಬಂಡೂರ್ ಕುರಿ, ಅಮಿನ್ ಗಾಡ್, ನಾಟಿ ತಳಿ, ಕರಿ ಕುರಿ, ಪಾವಗಡ, ಶಿರ ಕುರಿ, ಜಮುನ ಪುರಿ, ನಾಟಿ ಹೋತಕ್ಕೆ ಭಾರಿ ಡಿಮ್ಯಾಂಡ್‌ ಇತ್ತು. ಹೀಗಾಗಿ ನಿನ್ನೆ 20 ಸಾವಿರಕ್ಕೂ ಹೆಚ್ಚು ಮೇಕೆ, ಕುರಿ, ಟಗರುಗಳನ್ನ ತರಿಸಲಾಗಿತ್ತು. ಇವುಗಳಿಗೆ 10 ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿವರೆಗೂ ಹಣ ನಿಗದಿ ಮಾಡಲಾಗಿತ್ತು.

ಯಾವ ಯಾವ ಕುರಿ ಎಷ್ಟೆಷ್ಟು ಬೆಲೆ

  • ಬಂಡೂರ್ ಕುರಿಗೆ -ಒಂದೂವರೆ ಲಕ್ಷ
  • ಕಿಲಾರಿ ಕುರಿಗೆ – 80 ಸಾವಿರ
  • ನಾಟಿ ಕುರಿ- 60 ಸಾವಿರ
  • ಕರಿ ಕುರಿ – 40 ಸಾವಿರ
  • ಬಾಗೇವಾಡಿ ಕುರಿ- ಒಂದೂವರೆ ಲಕ್ಷ
  • ಅಮಿನ್ ಗಾಡ್ – 40 ರಿಂದ 60 ಸಾವಿರ
  • ಪಾವಗಡ ಮತ್ತು ಶಿರ ಟಗರಿಗೆ – 20 ರಿಂದ 30 ಸಾವಿರ
  • ಮೈಲಾರಿ ಟಗರು – 70 ಸಾವಿರ
  • ಬಾಗೇವಾಡಿ ಟಗರು – 15 ಸಾವಿರ ನಿಗದಿ
  • ಕಾಶ್ಮಿರಿ‌ ಕುರಿಗೆ – 1 ಲಕ್ಷದ 10 ಸಾವಿರ
  • ಹೈದರಾಬಾದಿ ಕುರಿಗೆ – 70 ಸಾವಿರ ನಿಗದಿ ಮಾಡಲಾಗಿದೆ.

    ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ, ಯುವತಿ ಮೇಲೆ ಪಾನಮತ್ತ ಪುಂಡರಿಂದ ಹಲ್ಲೆ; ಸ್ಥಳೀಯರಿಂದ ರಕ್ಷಣೆ

ಇನ್ನು ಮೇಳಕ್ಕೆ ರಾಜ್ಯದ ರಾಮನಗರ, ಮಂಡ್ಯ, ಮದ್ದೂರು, ಚೆನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಬಾಗೇಪಲ್ಲಿ, ತುಮಕೂರು, ನೆಲಮಂಗಲ, ಹೊಸಕೋಟೆ, ಹರಿಹರ, ದಾವಣಗೆರೆ, ಮಳವಳ್ಳಿ, ಕೊಳ್ಳೆಗಾಲ, ಹಾಸನ, ಅರಸಿಕೆರೆ ಸೇರಿದಂತೆ ಒಟ್ಟು 25 ತಾಲೂಕು ಹಾಗೂ ಜಿಲ್ಲೆಗಳಿಂದ‌ ಸಂತೆಗೆ 3 ಸಾವಿರದಷ್ಟು ವ್ಯಾಪಾರಸ್ಥರು ಬಂದಿದ್ರು.‌ ಜೊತೆಗೆ 20 ರಿಂದ 25 ಸಾವಿರದಷ್ಟು ಮೇಕೆಗಳನ್ನ ಸಂತೆಗೆ ತರಿಸಲಾಗಿತ್ತು.‌ ಆದರೆ ಈ ಬಾರಿ ಕುರಿ, ಮೇಕೆ ಟಗರುಗಳ ಬೆಲೆ‌ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ವ್ಯಾಪಾರ ಕಡಿಮೆ‌ ಇದೆ ಅಂತ ವ್ಯಾಪಾರಸ್ಥರು ತಿಳಿಸಿದರು.

ಇದು ಒಂದು ಕಡೆಯಾದ್ರೆ ಮತ್ತೊಂದೆಡೆ ಸಂತೆಯಲ್ಲಿ ಬೇಡಿಕೆ ಇದ್ದಂತಹ ಕುರಿ, ಮೇಕೆ, ಟಗರುಗಳಿಗೆ ಬಾಲಿವುಡ್ ಹಿರೋ ಹಾಗೂ ಟಗರುಗಳ ಹೆಸರಿಟ್ಟು ವ್ಯಾಪಾರಸ್ಥರು ವ್ಯಾಪಾರ ಮಾಡಿದ್ರು.‌ ಹೈದರಾಬಾದಿ ತಳಿಗೆ ಶಾರುಖ್ ಖಾನ್, ಬನ್ನೂರ್ ಕುರಿಗೆ ಸಲ್ಮಾನ್ ಖಾನ್, ಅಮಿನ್ ಗಡ್ ಟಗರಿಗೆ ಅಮಿರ್ ಖಾನ್, ಮುದುವಾಳ್ ಕುರಿಗೆ ಅಮಿತಾ ಬಚ್ಚನ್, ಕೆರೂರ್ ಕುರಿಗೆ ಆತಿಫ್ ಅಸ್ಲಾಂ, ರೈಬಾಗ್ ಕುರಿಗೆ ಸೈಫ್ ಅಲಿ ಖಾನ್ ಹೆಸರಿಟ್ಟಿದ್ದು ಆಕರ್ಷಣಿಯವಾಗಿತ್ತು.

ಇನ್ನು, ಬಕ್ರೀದ್ ಹಬ್ಬ ಮುಸ್ಲಿಮರಿಗೆ ಪವಿತ್ರ ಹಬ್ಬ.‌ ಈ ಹಬ್ಬಕ್ಕೆ ನಾವು ಕುರಿಗಳನ್ನ ಖರೀದಿ ಮಾಡೇ ಮಾಡ್ತೀವಿ.‌ ಹೀಗಾಗಿ ವ್ಯಾಪಾರಸ್ಥರು ಬೆಲೆಯನ್ನ ಜಾಸ್ತಿ ಮಾಡಿದ್ದಾರೆ.‌ ಆದ್ರೆ ಹಬ್ಬ ಮಾಡುವ ಅನಿವಾರ್ಯತೆ ಇದೆ. ಹೀಗಾಗಿ ಮೇಕೆಗಳನ್ನ ಖರೀದಿ ಮಾಡ್ತಿದಿವಿ ಅಂತ ಗ್ರಾಹಕ ಖಲೀಮ್ ಉಲ್ಲಾ ತಿಳಿಸಿದರು.

ಒಟ್ನಲ್ಲಿ, ಇಂದಿನ ಕುರಿಗಳ ಸಂತೆಯಲ್ಲಿ ಲಕ್ಷಾಂತರ ರೂಪಾಯಿಯ ವ್ಯಾಪಾರ ವಹಿವಾಟು ನಡೆದಿದ್ದು, ಇನ್ನು‌ ಒಂದು ವಾರಗಳ ಕಾಲ ಸಂತೆ ಇರಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ