Shobha Karandlaje: ಮತ್ತೊಮ್ಮೆ ಮೋದಿ ಸಂಪುಟದಲ್ಲಿ ಶೋಭಾ ಕರಂದ್ಲಾಜೆಗೆ ಮಂತ್ರಿಗಿರಿ: ದಿಟ್ಟ ಮಹಿಳೆಯ ರಾಜಕೀಯ ಪಥ ಹೀಗಿದೆ

ಕರ್ನಾಟಕದ ಐವರು ಸಂಸದರಿಗೆ ಮಂತ್ರಿಗಿರಿ ಒಲಿದಿದೆ. ಅದರಲ್ಲಿ ರಾಜ್ಯ ಖಾತೆ ಸಚಿವರಾಗಿ ಶೋಭಾ ಕರಂದ್ಲಾಜೆ ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ ಸಂಪುಟದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸಂಪುಟದಲ್ಲಿ ಶೋಭಾ ಕರಂದ್ಲಾಜೆ ಅವರು ಏಕೈಕ ಮಹಿಳಾ ಸಚಿವರಾಗಿದ್ದರು. ಅವರ ರಾಜಕೀಯ ಜೀವನ ಹೇಗಿದೆ ತಿಳಿಯಿರಿ.

Shobha Karandlaje: ಮತ್ತೊಮ್ಮೆ ಮೋದಿ ಸಂಪುಟದಲ್ಲಿ ಶೋಭಾ ಕರಂದ್ಲಾಜೆಗೆ ಮಂತ್ರಿಗಿರಿ: ದಿಟ್ಟ ಮಹಿಳೆಯ ರಾಜಕೀಯ ಪಥ ಹೀಗಿದೆ
ಮತ್ತೊಮ್ಮೆ ಮೋದಿ ಸಂಪುಟದಲ್ಲಿ ಶೋಭಾ ಕರಂದ್ಲಾಜೆಗೆ ಮಂತ್ರಿಗಿರಿ: ದಿಟ್ಟ ಮಹಿಳೆಯ ರಾಜಕೀಯ ಪಥ ಹೀಗಿದೆ
Follow us
|

Updated on:Jun 09, 2024 | 10:45 PM

ಬೆಂಗಳೂರು, ಜೂನ್ 09: ಇಂದಿನಿಂದ ನರೇಂದ್ರ ಮೋದಿ 3ನೇ ಯುಗ ಆರಂಭವಾಗಿದೆ. ದೆಹಲಿಯಲ್ಲಿ ಅದ್ಧೂರಿಯಾಗಿ ಮೋದಿ ಪಟ್ಟಾಭಿಷೇಕವಾಗಿದೆ. ಕರ್ನಾಟಕದ ಐವರು ಸಂಸದರಿಗೆ ಮಂತ್ರಿಗಿರಿ ಒಲಿದಿದೆ. ಅದರಲ್ಲಿ ರಾಜ್ಯ ಖಾತೆ ಸಚಿವರಾಗಿ ಶೋಭಾ ಕರಂದ್ಲಾಜೆ (Shobha Karandlaje) ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ ಸಂಪುಟದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಆದರೆ ಅವರು ಈ ಹಂತಕ್ಕೆ ಬರಲು ಸಾಕಷ್ಟು ಶ್ರಮ ವಹಿಸಿದ್ದು, ಸಾಕಷ್ಟು ರಾಜಕೀಯ ಏಳು ಬೀಳುಗಳನ್ನು ಕಂಡಿದ್ದಾರೆ. ಅವರ ಒಟ್ಟಾರೆ ರಾಜಕೀಯ ಜೀವನ ಹೀಗಿದೆ.

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸಂಪುಟದಲ್ಲಿ ಶೋಭಾ ಕರಂದ್ಲಾಜೆ ಅವರು ಏಕೈಕ ಮಹಿಳಾ ಸಚಿವರಾಗಿದ್ದರು. 1996ರಲ್ಲಿ ಬಿಜೆಪಿಯ ಉಡುಪಿ ಮಹಿಳಾ ಮೋರ್ಚಾದಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಬಲ ಪ್ರಚಾರಕಿಯಾಗಿ, ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡ ಮಹಿಳೆಯಾಗಿ, ಬಿಜೆಪಿಯ ಹಿರಿಯ ನಾಯಕ ವಿಶ್ವಾಸ ಗಳಿಸಿದ್ದರು.

ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಕರ್ನಾಟಕದಿಂದ ಕೇಂದ್ರ ಸಚಿವರಾಗುವವರು ಇವರೇ ನೋಡಿ

ಶೋಭಾ ಕರಂದ್ಲಾಜೆ ಅವರು ಕರ್ನಾಟಕದಲ್ಲಿ ತಮ್ಮ ರಾಜಕೀಯ ವೃತ್ತಿಜೀವನದಲ್ಲಿ ಒಂದು ಹಂತಕ್ಕೆ ಬೆಳೆಯಲು ಆರಂಭಿಸಿದ್ದರು. ಒಂದಾದರೊಂದರಂತೆ ಅವರಿಗೆ ಅವಕಾಶಗಳು ಸಿಗಲಾರಂಭಿಸಿದವು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿದ್ದಾರೆ. ರಾಜ್ಯ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ಯ ಸಚಿವೆ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ಅನುಭವ ಮತ್ತು ನಾಯಕತ್ವದ ಕೌಶಲ್ಯಗಳು ಅವರ ಯಶಸ್ಸಿಗೆ ಕಾರಣವಾಗಿದೆ.

ಯಡಿಯೂರಪ್ಪ ಮತ್ತು ಅವರ ಸರ್ಕಾರದ ವಿರುದ್ಧ ಬಂಡಾಯವೆದ್ದ ಪ್ರಬಲ ರೆಡ್ಡಿ ಸಹೋದರರ ನಡುವಿನ ರಾಜಿ ಸೂತ್ರದ ಭಾಗವಾಗಿ ಶೋಭಾ ಕರಂದ್ಲಾಜೆ ಅವರು ನವೆಂಬರ್ 9,2009 ರಂದು ರಾಜೀನಾಮೆ ನೀಡಬೇಕಾಯಿತು. “ಈ ಇಡೀ ಪ್ರಸಂಗದಲ್ಲಿ ನನಗೆ ನೋವಾಗಿಲ್ಲ ಎಂದು ನಾನು ಹೇಳುವುದಿಲ್ಲ. ಆದಾಗ್ಯೂ, ನನ್ನನ್ನು ಸರ್ಕಾರದಿಂದ ಹೊರಹಾಕಲು ಬಯಸಿದ್ದ ಕೇಂದ್ರ ಮತ್ತು ರಾಜ್ಯದ ನಾಯಕರು ನನ್ನನ್ನು ಹೊರಹಾಕಲು ನಿಖರವಾದ ಕಾರಣವನ್ನು ನನಗೆ ತಿಳಿಸಿಲ್ಲ ಎಂಬುದು ನನಗೆ ಹೆಚ್ಚು ನೋವುಂಟು ಮಾಡಿದೆ. ಅವರು ನನ್ನನ್ನು ಏಕೆ ಹೊರಹಾಕಲು ಬಯಸಿದ್ದರು ಎಂಬುದು ಕೂಡ ನನಗೆ ತಿಳಿದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ಕರ್ನಾಟಕದ ನಾಲ್ವರಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ, ಡಾ. ಮಂಜುನಾಥ್‌ಗೆ ಜಸ್ಟ್ ಮಿಸ್

2008ರಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ ಅವರು ಗೆದ್ದು ಸಚಿವೆ ಸಹ ಆಗಿದ್ದರು. ಆದರೆ 2013ರಲ್ಲಿ ಕೆಜೆಪಿ ಟಿಕೆಟ್​ನಿಂದ ರಾಜಾಜಿನಗರದಲ್ಲಿ ಸ್ಪರ್ಧಿಸಿ ಬಿಜೆಪಿಯ ಸುರೇಶ್ ಕುಮಾರ್ ವಿರುದ್ಧ ಸೋಲುಂಡಿದ್ದರು. ಬಳಿಕ 2014ರಲ್ಲಿ ಮತ್ತೆ ಬಿಜೆಪಿ ಸೇರಿ ಉಡುಪಿ-ಚಿಕ್ಕಮಗಳೂರು ಸಂಸರಾಗಿದ್ದರು.

ಆರ್​ಎಸ್​ಎಸ್​ ನಂಟು

ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದ ಶೋಭಾ ಅವರು ಬಿಜೆಪಿಯ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮಹಿಳಾ ವಿಭಾಗವಾದ ರಾಷ್ಟ್ರ ಸೇವಿಕಾ ಸಮಿತಿಯಲ್ಲಿದ್ದರು. ಕರಾವಳಿ ಕರ್ನಾಟಕದಲ್ಲಿ ಬಿಜೆಪಿಯ ಮಹಿಳಾ ಮೋರ್ಚಾವನ್ನು ಕಟ್ಟಿದರು. ಅವರು 1996 ರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದರು ಮತ್ತು ಕರಾವಳಿ ಕರ್ನಾಟಕದ ಮಹಿಳೆಯರಿಗೆ ರಾಜಕೀಯ ಜೀವನವನ್ನು ಮನವರಿಕೆ ಮಾಡಲು ಶ್ರಮಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:43 pm, Sun, 9 June 24

ತಾಜಾ ಸುದ್ದಿ
ಚನ್ನಪಟ್ಟಣ ತಾಲೂಕು ಪಂಚಾಯತಿ ಸಭಾಂಗಣದಲ್ಲೇ ವಿದ್ಯುತ್ ಸಮಸ್ಯೆ
ಚನ್ನಪಟ್ಟಣ ತಾಲೂಕು ಪಂಚಾಯತಿ ಸಭಾಂಗಣದಲ್ಲೇ ವಿದ್ಯುತ್ ಸಮಸ್ಯೆ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು
ವಿಭಿನ್ನತೆಯಿಂದಲೇ ಜನರ ಮನ ಗೆದ್ದ ಈ ಕೋಳಿಯನ್ನೊಮ್ಮೆ ನೋಡಿ
ವಿಭಿನ್ನತೆಯಿಂದಲೇ ಜನರ ಮನ ಗೆದ್ದ ಈ ಕೋಳಿಯನ್ನೊಮ್ಮೆ ನೋಡಿ
ಬಸ್​​ಲ್ಲಿ ಸಿಕ್ತು 2.5 ಲಕ್ಷ ರೂ ಹಣ: ಹಿಂದಿರುಗಿಸಿದ KSRTC ಸಿಬ್ಬಂದಿ
ಬಸ್​​ಲ್ಲಿ ಸಿಕ್ತು 2.5 ಲಕ್ಷ ರೂ ಹಣ: ಹಿಂದಿರುಗಿಸಿದ KSRTC ಸಿಬ್ಬಂದಿ
ದರ್ಶನ್ ಅಂಧಾಭಿಮಾನಿ ಜೊತೆಗಿನ ಫೋನ್ ಮಾತುಕತೆ ಬಿಚ್ಚಿಟ್ಟ ಪ್ರಥಮ್
ದರ್ಶನ್ ಅಂಧಾಭಿಮಾನಿ ಜೊತೆಗಿನ ಫೋನ್ ಮಾತುಕತೆ ಬಿಚ್ಚಿಟ್ಟ ಪ್ರಥಮ್
ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ
ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ
KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ
KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ