ಕಾಂಗ್ರೆಸ್ ಅಭ್ಯರ್ಥಿ ಪರ ಬಿ ಫಾರಂ ಪಡೆದ ಸರ್ಕಾರಿ ಅಧಿಕಾರಿ; ಚುನಾವಣಾ ಆಯೋಗ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಗೆ ಬಿ. ಎಂ. ಸುನೀಲ್ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರಿಂದ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡರ ಪರವಾಗಿ ಬಿ-ಫಾರಂ ಪಡೆದು ಅಭ್ಯರ್ಥಿಗೆ ನೀಡಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಕಾಂಗ್ರೆಸ್ ಅಭ್ಯರ್ಥಿ ಪರ ಬಿ ಫಾರಂ ಪಡೆದ ಸರ್ಕಾರಿ ಅಧಿಕಾರಿ; ಚುನಾವಣಾ ಆಯೋಗ ಠಾಣೆಯಲ್ಲಿ ಪ್ರಕರಣ ದಾಖಲು
ಕಾಂಗ್ರೆಸ್ ಅಭ್ಯರ್ಥಿ ಪರ ಬಿ ಫಾರಂ ಪಡೆದ ಸರ್ಕಾರಿ ಅಧಿಕಾರಿ

ಬೆಂಗಳೂರು: ಅಭ್ಯರ್ಥಿ ಪರ ಸರ್ಕಾರಿ ಅಧಿಕಾರಿ ಬಿ ಫಾರಂ ಸ್ವೀಕಾರ ವಿಚಾರವಾಗಿ ಚುನಾವಣಾ ಆಯೋಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಬೆಂಗಳೂರಿನ ಹೈಗ್ರೌಂಡ್ಸ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಬಕಾರಿ ಅಧಿಕಾರಿ ಬಿ.ಎಂ. ಸುನಿಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಬಕಾರಿ ಅಧಿಕಾರಿ ಬಿ.ಎಂ. ಸುನಿಲ್ ಗಾಯತ್ರಿ ಶಾಂತೇಗೌಡ ಪರವಾಗಿ ಬಿ ಫಾರಂ ಸ್ವೀಕರಿಸಿದ್ದರು. ಕೆಪಿಸಿಸಿ ಕಚೇರಿಗೆ ಹಾಜರಾಗಿ ಬಿ ಫಾರಂ ಪಡೆದಿದ್ದರು.

ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಬಿ ಫಾರಂ ಸ್ವೀಕರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಹಿನ್ನೆಲೆ, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಗೆ ಬಿ. ಎಂ. ಸುನೀಲ್ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರಿಂದ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡರ ಪರವಾಗಿ ಬಿ ಫಾರಂ ಪಡೆದು ಅಭ್ಯರ್ಥಿಗೆ ನೀಡಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಸರ್ಕಾರಿ ಅಧಿಕಾರಿ ಬಿ ಫಾರಂ ಪಡೆಯುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಕುರಿತು ಫೋಟೊ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗಿತ್ತು. ಸರ್ಕಾರಿ ಅಧಿಕಾರಿ ರಾಜಕೀಯದಲ್ಲಿ ಗುರುತಿಸಿಕೊಳ್ಳಬಾರದು ಎಂದು ನಿಯಮ ಇದ್ದರೂ ಬಿ ಫಾರಂ ಪಡೆದು ಸುನಿಲ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ಪರಿಷತ್ ಚುನಾವಣೆ: ಸೂರಜ್ ರೇವಣ್ಣ ಹಾಗೂ ಬೆಂಗಳೂರು ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಹೊಂದಿರುವ ಆಸ್ತಿ ಎಷ್ಟು?!

ಇದನ್ನೂ ಓದಿ: ರಾಜಕಾರಣಿಗಳು ನಿಜವಾದ ಗೂಂಡಾಗಳು; ಚುನಾವಣೆ ಬಂದಾಗ ಹಿಂದೂಗಳ ಬಳಸಿಕೊಳ್ತಾರೆ, ಆ ಮೇಲೆ ರೌಡಿಶೀಟರ್ ಹಾಕ್ತಾರೆ: ಮುತಾಲಿಕ್ ವಾಗ್ದಾಳಿ

Click on your DTH Provider to Add TV9 Kannada