ಸರಳೀಕೃತ ಇ-ಖಾತಾ ವ್ಯವಸ್ಥೆ ಆರಂಭಕ್ಕೆ ಮುಂದಾದ ಜಿಬಿಎ: ಇ-ಆಸ್ತಿ 2.0 ಆರಂಭಕ್ಕೆ ತಯಾರಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆಸ್ತಿ ನೋಂದಣಿ ಸೇವೆಗಳನ್ನು ಪಾರದರ್ಶಕಗೊಳಿಸಲು ಉನ್ನತೀಕರಿಸಿದ 'ಇ-ಆಸ್ತಿ 2.0' ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಹಂತ-ಹಂತವಾಗಿ ಸೇವೆಗಳು ಲಭ್ಯವಾಗಲಿವೆ. ನಾಗರಿಕರು ವಿವಿಧ ಇ-ಖಾತಾ ಸಂಬಂಧಿತ ಸೇವೆಗಳನ್ನು ಸುಲಭವಾಗಿ ಪಡೆಯುವಂತೆ ಹೊಸ ವ್ಯವಸ್ಥೆಯನ್ನು ಈ ಮೂಲಕ ರೂಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಸೇವೆಗಳನ್ನು ಸ್ವಯಂಚಾಲಿತಗೊಳಿಸಲಾಗಿದೆ.

ಸರಳೀಕೃತ ಇ-ಖಾತಾ ವ್ಯವಸ್ಥೆ ಆರಂಭಕ್ಕೆ ಮುಂದಾದ ಜಿಬಿಎ: ಇ-ಆಸ್ತಿ 2.0 ಆರಂಭಕ್ಕೆ ತಯಾರಿ
ಸಾಂದರ್ಭಿಕ ಚಿತ್ರ
Image Credit source: Tv9 Kannada

Updated on: Sep 18, 2026 | 8:21 AM

ಬೆಂಗಳೂರು, ಸೆಪ್ಟೆಂಬರ್​​ 18: ಆಸ್ತಿ ಸಂಬಂಧಿತ ಸೇವೆಗಳನ್ನು ವೇಗವಾಗಿ, ಸರಳವಾಗಿ ಹಾಗೂ ಹೆಚ್ಚು ಪಾರದರ್ಶಕವಾಗಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸರಳೀಕೃತ ‘ಇ-ಆಸ್ತಿ 2.0’ (e-Aasthi 2.0) ಇ-ಖಾತಾ ವ್ಯವಸ್ಥೆಯನ್ನು ಸೋಮವಾರದಿಂದ (ಸೆ.21) ಆರಂಭಿಸಲು ಮುಂದಾಗಿದೆ. GBA ಪ್ರಕಾರ, ಇ-ಆಸ್ತಿ 2.0 ಈಗಾಗಲೇ 25 ಲಕ್ಷಕ್ಕೂ ಹೆಚ್ಚು ಇ-ಖಾತಾಗಳನ್ನು ಆನ್‌ಲೈನ್ ಮೂಲಕ ವಿತರಿಸಿರುವ ಪ್ರಶಸ್ತಿ ಪುರಸ್ಕೃತ ವ್ಯವಸ್ಥೆಯ ಉನ್ನತೀಕರಿಸಿದ ಆವೃತ್ತಿಯಾಗಿದೆ.

ಇ-ಆಸ್ತಿ 2.0 ಪ್ರಮುಖ ವೈಶಿಷ್ಟ್ಯಗಳು

  • ಸರಳ ಹಾಗೂ ಬಳಕೆದಾರ ಸ್ನೇಹಿ ಇಂಟರ್‌ಫೇಸ್
  • ಪ್ರಮುಖ ಇ-ಖಾತಾ ಮತ್ತು ಆಸ್ತಿ ಸಂಬಂಧಿತ ಸೇವೆಗಳು ಒಂದೇ ವೇದಿಕೆಯಲ್ಲಿ
  • ಖಾತಾ ಮ್ಯುಟೇಶನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು KAVERI ವ್ಯವಸ್ಥೆಯೊಂದಿಗೆ ನೇರ ಏಕೀಕರಣ
  • ಅರ್ಜಿಯ ಸ್ಥಿತಿಯನ್ನು ನೈಜ ಸಮಯದಲ್ಲಿ ಆನ್‌ಲೈನ್ ಮೂಲಕ ಪರಿಶೀಲಿಸುವ ಸೌಲಭ್ಯ

ಇದನ್ನೂ ಓದಿ: ಬಹುತೇಕ ಸರ್ಕಾರಿ ವಿಶ್ವ ವಿದ್ಯಾಲಯಗಳಲ್ಲಿಲ್ಲ ಖಾಯಂ ಪ್ರಾಧ್ಯಾಪಕರು: ರಾಜ್ಯದಲ್ಲಿ 4,000ಕ್ಕೂ ಹೆಚ್ಚು ಬೋಧಕರ ಹುದ್ದೆಗಳು ಖಾಲಿ!

ಸೆಪ್ಟೆಂಬರ್ 21ರಿಂದ ಲಭ್ಯವಾಗುವ ಸೇವೆಗಳು

  • ಡ್ರಾಫ್ಟ್ ಇ-ಖಾತಾವನ್ನು ಅಂತಿಮ ಇ-ಖಾತಾವಾಗಿ ಪರಿವರ್ತಿಸುವುದು
  • ಮ್ಯುಟೇಶನ್‌ನೊಂದಿಗೆ ಅಂತಿಮ ಇ-ಖಾತಾ ವಿತರಣೆ
  • KAVERI-ಮ್ಯುಟೇಶನ್ ಏಕೀಕರಣ
  • ಅರ್ಜಿಯ ಸ್ಥಿತಿಯನ್ನು ನೈಜ ಸಮಯದಲ್ಲಿ ಆನ್‌ಲೈನ್ ಮೂಲಕ ಟ್ರ್ಯಾಕ್ ಮಾಡುವುದು
  • ಬಿ-ಖಾತಾವನ್ನು ಎ-ಖಾತಾವಾಗಿ ಪರಿವರ್ತಿಸುವುದು

ಮುಂದಿನ ಹಂತದಲ್ಲಿ ಲಭ್ಯವಾಗಲಿರುವ ಸೇವೆಗಳು

  • ಹೊಸ ಖಾತಾ ನೋಂದಣಿ
  • ಅಪಾರ್ಟ್‌ಮೆಂಟ್‌ಗಳು ಮತ್ತು ಬಹುಮಹಡಿ ಕಟ್ಟಡಗಳಿಗೆ ಬಲ್ಕ್ ಖಾತಾ ಪ್ರಕ್ರಿಯೆ
  • ಸಂಪೂರ್ಣ/ಅಂತಿಮ ಇ-ಖಾತಾಗಳಲ್ಲಿನ ತಿದ್ದುಪಡಿಗಳು
  • ಸೈಟ್ ವಿಭಜನೆ ಮತ್ತು ವಿಲೀನಗೊಳಿಸುವಿಕೆ

ನಾಗರಿಕರು ವಿವಿಧ ಇ-ಖಾತಾ ಸಂಬಂಧಿತ ಸೇವೆಗಳನ್ನು ಸುಲಭವಾಗಿ ಪಡೆಯುವಂತೆ ಹೊಸ ವ್ಯವಸ್ಥೆಯನ್ನು ಈ ಮೂಲಕ ರೂಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಸೇವೆಗಳನ್ನು ಸ್ವಯಂಚಾಲಿತಗೊಳಿಸಲಾಗಿದೆ. ಅರ್ಜಿಗಳ ಸ್ಥಿತಿಯನ್ನು ನಾಗರಿಕರು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದಾಗಿದೆ ಎಂದು GBA ಪ್ರಕಟಣೆಯಲ್ಲಿ ತಿಳಿಸಿದೆ. ಇ-ಖಾತಾ ಸೇವೆಗಳನ್ನು ಮತ್ತಷ್ಟು ಸರಳ, ಪಾರದರ್ಶಕ ಹಾಗೂ ನಾಗರಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ಮಹತ್ವದ ಹೆಜ್ಜೆಯಾಗಿದೆ ಎಂದು GBA ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಕೂಡ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us