ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಕಿರುಕುಳ: ಮುಸ್ಲಿಂ ಆಗಿದ್ರೆ ಮಾತ್ರ ಗಾಡಿ ಬಿಡ್ತೀವಿ ಎಂದು ಧಮ್ಕಿ
ಸೋಮವಾರ(ಮಾ.27) ರಾತ್ರಿ 11 ಗಂಟೆಯ ಸುಮಾರಿಗೆ ಬೆಂಗಳೂರಿನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಬಳಿ ಲೋನ್ ರಿಕವರಿ ಏಜೆಂಟ್ಗಳು ಎಂದುಕೊಂಡು ಬಂದು ಆಟೋ ಚಾಲಕನಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ನಂತರ ಆಟೋ ಕಸಿದುಕೊಂಡು ಆಟೋ ಜೊತೆಯೇ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಹಿನ್ನಲೆ ಆಟೋ ಚಾಲಕ ಜಗನ್ನಾಥ್ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ತಿಲಕ ನಗರ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಬೆಂಗಳೂರು, ಮಾ.27: ಲೋನ್ ರಿಕವರಿ ಏಜೆಂಟ್ಗಳು ಎಂದುಕೊಂಡು ಆಟೋ ಚಾಲಕನಿಗೆ ಕಿರುಕುಳ ನೀಡಿದ ಘಟನೆ ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಬೆಂಗಳೂರಿನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಬಳಿ ನಡೆದಿದೆ. ರಾತ್ರಿ ಜಯನಗರ ಕಡೆ ಹೊರಟಿದ್ದ ಜಗನ್ನಾಥ್ ಎಂಬ ಆಟೋ ಚಾಲಕನನ್ನ(Auto Driver) ತಡೆದು, ನಾವು ರಿಕವರಿ ಏಜೆಂಟ್ಗಳು ಎಂದುಕೊಂಡು ಬರೊಬ್ಬರಿ ಒಂದು ಗಂಟೆಗಳ ಕಾಲ ಆಟೋ ಚಾಲಕನನ್ನು ಇರಿಸಿಕೊಂಡು ಕಿರಿಕ್ ಮಾಡಿದ್ದಾರೆ. ಜೊತೆಗೆ ‘ನೀನು ಮುಸ್ಲಿಂ ಆಗಿದ್ದರೆ ಮಾತ್ರ ಗಾಡಿ ಬಿಡುತ್ತಿದ್ದೇವೂ, ನೀನು ಹಿಂದು, ಅದಕ್ಕೆ ಆಟೋ ಬಿಡೋದಿಲ್ಲ ಎಂದು ಪಠಾಣ್ ,ಸಲ್ಮಾನ್ ಮತ್ತು ಇನ್ನಿತರೆ ಪುಂಡರು ದಮ್ಕಿ ಹಾಕಿದ್ದಾರೆ.
ಘಟನೆ ವಿವರ
ಆಟೋ ಫೈನಾನ್ಸ್ನಲ್ಲಿ ಜಗನ್ನಾಥ್ ಲೋನ್ ಪಡೆದಿದ್ದ. ಫೈನಾನ್ಸ್ನಲ್ಲಿ ಆಟೋ ಪಡೆದರೆ, ಅದಕ್ಕೆ ಅಂತಾನೆ ರಿಕವರಿ ಏಜೆನ್ಸಿ ಇರುತ್ತದೆ. ಒಂದು ವೇಳೆ ಆಟೋ ಲೋನ್ ಪಾವತಿ ಮಾಡಿಲ್ಲ ಎಂದರೆ ರಿಕವರಿ ಏಜೆಂಟ್ಗಳು ಮನೆ ಬಳಿ ಬಂದು ಹಣ ಪಡೆಯುತ್ತಾರೆ. ಆದ್ರೆ, ಸೋಮವಾರ(ಮಾ.25) ರಾತ್ರಿ 11 ಗಂಟೆಯ ಸುಮಾರಿಗೆ ಇದ್ದಕ್ಕಿದ್ದಂತೆ ಪುಂಡರು ಬಂದು ಆಟೋ ಅಡ್ಡ ಹಾಕಿ ಗಲಾಟೆ ಮಾಡಿದ್ದಾರೆ.
ಇದನ್ನೂ ಓದಿ:ಆಟೋ ಚಾಲಕನನ್ನು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜನೆ ಮಾಡಿ ಹಲ್ಲೆ ಆರೋಪ; ವೈದ್ಯನನ್ನು ಬಂಧಿಸಿದ ಪೊಲೀಸ್
ಆಗ ಮೊಬೈಲ್ನಲ್ಲಿ ವಿಡಿಯೋ ಚಿತ್ರಿಕರಣ ಮಾಡಲು ಮುಂದಾಗಿದ್ದ ಚಾಲಕ ಜಗನ್ನಾಥ್ ಅವರ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲಿಟ್ ಮಾಡಿದ್ದಾರೆ. ನಂತರ ಆಟೋ ಕಸಿದುಕೊಂಡು ಆಟೋ ಜೊತೆಯೇ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಹಿನ್ನಲೆ ಆಟೋ ಚಾಲಕ ಜಗನ್ನಾಥ್ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ತಿಲಕ ನಗರ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ