ಮತ್ತೆ ಧಾರಕಾರ ಮಳೆ! ತೊಯ್ದು ತೊಪ್ಪೆಯಾದ ಬೆಂಗಳೂರಿಗರು; ರಾಜ್ಯದಲ್ಲಿ ಇನ್ನೂ 5 ದಿನ ವ್ಯಾಪಕ ಮಳೆಯಂತೆ!

ಮುಂಗಾರು ಆರಂಭಕ್ಕೆ 2 ವಾರ ಬಾಕಿ ಇರುವಾಗಲೇ, ವರುಣರಾಯ ಪ್ರತಾಪ ಶುರು ಮಾಡಿದ್ದಾನೆ. ನಿರಂತರ ಮಳೆಗೆ ಬೆಂಗಳೂರು ಅಷ್ಟೇ ಅಲ್ಲದೆ ರಾಜ್ಯದ ಅನೇಕ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.

ಮತ್ತೆ ಧಾರಕಾರ ಮಳೆ! ತೊಯ್ದು ತೊಪ್ಪೆಯಾದ ಬೆಂಗಳೂರಿಗರು; ರಾಜ್ಯದಲ್ಲಿ ಇನ್ನೂ 5 ದಿನ ವ್ಯಾಪಕ ಮಳೆಯಂತೆ!
ಮಳೆImage Credit source: Indian Express
Follow us
| Updated By: ಆಯೇಷಾ ಬಾನು

Updated on:May 17, 2022 | 10:14 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಹಾನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ(Bengaluru Rain) ಶುರುವಾಗಿದೆ. ಮೆಜೆಸ್ಟಿಕ್, ಕಾರ್ಪೊರೇಷನ್‌, ಶಾಂತಿನಗರ, ಚಾಮರಾಜಪೇಟೆ, ಕೋರಮಂಗಲ, ಬಿಟಿಎಂ ಲೇಔಟ್, ಹೆಚ್‌ಎಸ್‌ಆರ್ ಲೇಔಟ್‌, ಜಯನಗರ, ಜೆ.ಪಿ.ನಗರ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಸದಾಶಿವನಗರ, ಮಲ್ಲೇಶ್ವರಂ, ಪೀಣ್ಯ, ಜಾಲಹಳ್ಳಿ, ಸುಂಕದಕಟ್ಟೆ, ಗೊರಗುಂಟೆಪಾಳ್ಯ ಸೇರಿದಂತೆ ಬೆಂಗಳೂರಿನ ಹಲವೆಡೆ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದ್ದು ಸವಾರರು ಪರದಾಡುವಂತಾಗಿದೆ. ಇನ್ನೂ 4 ದಿನ ಇದೇ ರೀತಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಆರಂಭಕ್ಕೆ 2 ವಾರ ಬಾಕಿ ಇರುವಾಗಲೇ, ವರುಣರಾಯ ಪ್ರತಾಪ ಶುರು ಮಾಡಿದ್ದಾನೆ. ನಿರಂತರ ಮಳೆಗೆ ಬೆಂಗಳೂರು ಅಷ್ಟೇ ಅಲ್ಲದೆ ರಾಜ್ಯದ ಅನೇಕ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಸತತ 2 ಗಂಟೆಯಿಂದ ಮಳೆ ಸುರಿಯುತ್ತಿದ್ದು ಮಂಡ್ಯ, ನಾಗಮಂಗಲ, ಕೆ.ಆರ್ ಪೇಟೆ, ಮದ್ದೂರು, ಸುತ್ತಾ ಮುತ್ತ ಭಾರಿ ಮಳೆಗೆ ಜನರು ಪರದಾಡುತ್ತಿದ್ದಾರೆ. ಧಾರವಾಡದಲ್ಲಿ ಮಳೆಯಿಂದ ಜ್ಯುಬಿಲಿ ಸರ್ಕಲ್ ಹೊಂಡದಂತಾಗಿದೆ. ಕಾಲುವೆಗಳು ತುಂಬಿ ಮಳೆ ನೀರೆಲ್ಲ ಮನೆಗಳತ್ತ ನುಗ್ಗಿವೆ. ಜನರೆಲ್ಲ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ. ಇದನ್ನೂ ಓದಿ: ಪಾರ್ಟಿಯಲ್ಲಿ ಈ ವ್ಯಕ್ತಿಗೆ ಪದೇಪದೇ ಕಿಸ್ ಮಾಡಿದ ಕಂಗನಾ; ಫ್ಯಾನ್ಸ್​ಗೆ ಮೂಡಿತು ಅನುಮಾನ

ಮುಂದಿನ 5 ದಿನ ರಾಜ್ಯಾದ್ಯಂತ ವ್ಯಾಪಕ ಮಳೆ ಅರಬ್ಬಿಸಮುದ್ರದಲ್ಲಿ ಚಂಡಮಾರುತ ಎದ್ದಿದ್ದು, ಮುಂದಿನ ಐದು ದಿನ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ.. ಉತ್ತರ ಕರ್ನಾಟಕ, ದಕ್ಷಿಣದ ಜಿಲ್ಲೆಗಳು ಮತ್ತು ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಂಭವವಿದೆ ಅಂತ ಹವಾಮಾನ ತಜ್ಞರು ಹೇಳಿದ್ದಾರೆ.

ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:01 pm, Tue, 17 May 22