Karnataka Rain: ರಾಜ್ಯದಲ್ಲಿ ಮುಂದುವರೆಯಲಿದೆ ಮಳೆ ಆರ್ಭಟ; ವಿವಿಧ ಜಿಲ್ಲೆಗಳಿಗೆ ಅಲರ್ಟ್​​ ಘೋಷಣೆ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Rain: ರಾಜ್ಯದಲ್ಲಿ ಮುಂದುವರೆಯಲಿದೆ  ಮಳೆ ಆರ್ಭಟ; ವಿವಿಧ ಜಿಲ್ಲೆಗಳಿಗೆ ಅಲರ್ಟ್​​ ಘೋಷಣೆ
ಮಳೆImage Credit source: NDTV
Follow us
TV9 Web
| Updated By: ವಿವೇಕ ಬಿರಾದಾರ

Updated on: Jul 10, 2022 | 4:03 PM

ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಇಂದು ಸೇರಿ ಮುಂದಿನ ನಾಲ್ಕು ದಿನ  ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹೀಗಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ,  (Udupi) ಉತ್ತರ ಕನ್ನಡ (Uttar Kannada), ದಕ್ಷಿಣ ಕನ್ನಡ (Dakshin Kannada) ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ.

ಉತ್ತರ ಕರ್ನಾಟಕ ಭಾಗದ 5 ಜಿಲ್ಲೆಗಳು, ಮಲೆನಾಡಿನ 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇರುವ ಹಿನ್ನೆಲೆ ಆರೆಂಜ್​ ಅಲರ್ಟ್​ ಘೋಷಣೆ ಮಾಡಿದ್ದಾರೆ. ಯಾದಗಿರಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ.

ಅರಬ್ಬೀ ಸಮುದ್ರ, ಒಡಿಶಾ ಭಾಗದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮನ ಇಲಾಖೆ ತಿಳಿಸಿದೆ.

ಕಾಫಿನಾಡಲ್ಲಿ ಮುಂದುವರೆದ ವರುಣನ ಅಬ್ಬರ, ಪ್ರವಾಸಿಗರಿಗೆ ನಿರ್ಬಂಧ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರಿಗೆ ಕೆಲವೊಂದು ನಿರ್ಬಂಧ ಹೇರಿದೆ.  ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ಸ್ಥಳಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಝರಿ ಫಾಲ್ಸ್ , ಮಾಣಿಕ್ಯಧಾರ ಸ್ಥಳಕ್ಕೆ ಹೋಗುವ ಪ್ರವಾಸಿಗರಿಗೆ ಕೆಲವೊಂದು ನಿರ್ಭಂದ ಹೇರಿದೆ.

1200 ಕೆಜಿ ಮೇಲ್ಪಟ್ಟ ವಾಹನಗಳ ಸಂಚಾರಕ್ಕೆ ನಿಷೇಧ, ಬೆಳಗ್ಗೆ 6 ರಿಂದ 9 ಹಾಗೂ ಸಂಜೆ 2 ರಿಂದ 4 ಗಂಟೆವರೆಗೆ ಮಾತ್ರ ಪ್ರವೇಶ, ತಲಾ 150 ವಾಹನಗಳಂತೆ ದಿನಕ್ಕೆ 300 ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಧಿಕೃತ ಹೊಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಗಿರಿಸಾಲಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೆಲ ನಿರ್ಬಂಧ ಹೇರಲಾಗಿದೆ. ಆದರೆ ಗಿರಿ ಭಾಗದ ಸ್ಥಳೀಯರಿಗೆ ಯಾವುದೇ ನಿರ್ಬಂಧವಿಲ್ಲ.

ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು
ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು
ಮನೆಗೆ ನುಗ್ಗಿದ ಚಿರತೆಯಿಂದ ನಾಯಿಯ ಮೇಲೆ ಅಟ್ಯಾಕ್; ಶಾಕಿಂಗ್ ವಿಡಿಯೋ ವೈರಲ್
ಮನೆಗೆ ನುಗ್ಗಿದ ಚಿರತೆಯಿಂದ ನಾಯಿಯ ಮೇಲೆ ಅಟ್ಯಾಕ್; ಶಾಕಿಂಗ್ ವಿಡಿಯೋ ವೈರಲ್
ಮದುವೆ ಹಿಂದಿನ ರಾತ್ರಿ ಡ್ಯಾನ್ಸ್​ ಮಾಡುವಾಗ ಹೃದಯಾಘಾತದಿಂದ ಮದುಮಗ ಸಾವು!
ಮದುವೆ ಹಿಂದಿನ ರಾತ್ರಿ ಡ್ಯಾನ್ಸ್​ ಮಾಡುವಾಗ ಹೃದಯಾಘಾತದಿಂದ ಮದುಮಗ ಸಾವು!
ಶಿವಣ್ಣನ ರೀತಿ ಡೈಲಾಗ್ ಹೇಳಲು ಯಾರಿಗೆ ಸಾಧ್ಯ? ವೇದಿಕೆಯಲ್ಲಿ ಎಲ್ಲರೂ ಸುಸ್ತ್
ಶಿವಣ್ಣನ ರೀತಿ ಡೈಲಾಗ್ ಹೇಳಲು ಯಾರಿಗೆ ಸಾಧ್ಯ? ವೇದಿಕೆಯಲ್ಲಿ ಎಲ್ಲರೂ ಸುಸ್ತ್
‘ಭೈರತಿ ರಣಗಲ್ ಸೀಕ್ವೆಲ್ ಬರಲಿದೆ’: ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಮಾಹಿತಿ
‘ಭೈರತಿ ರಣಗಲ್ ಸೀಕ್ವೆಲ್ ಬರಲಿದೆ’: ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಮಾಹಿತಿ
ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ
ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ
ಒಟ್ಟಿಗೆ ಸ್ನಾನಕ್ಕೆ ಹೋದ ಹನುಮ, ಧನರಾಜ್; ಕಣ್ಣು ಮುಚ್ಚಿಕೊಂಡ ಮನೆ ಮಂದಿ
ಒಟ್ಟಿಗೆ ಸ್ನಾನಕ್ಕೆ ಹೋದ ಹನುಮ, ಧನರಾಜ್; ಕಣ್ಣು ಮುಚ್ಚಿಕೊಂಡ ಮನೆ ಮಂದಿ
ವಿಕ್ರಂಗೌಡ ಮೊದಲು ವಿಮೋಚನಾರಂಗದೊಂದಿಗೆ ಗುರುತಿಸಿಕೊಂಡಿದ್ದ: ಗ್ರಾಮಸ್ಥ
ವಿಕ್ರಂಗೌಡ ಮೊದಲು ವಿಮೋಚನಾರಂಗದೊಂದಿಗೆ ಗುರುತಿಸಿಕೊಂಡಿದ್ದ: ಗ್ರಾಮಸ್ಥ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?