ಚಿಕಿತ್ಸೆಗೆ ಅಬುಧಾಬಿಗೆ ತೆರಳಲು ಡಾ.B.R.ಶೆಟ್ಟಿಗೆ ಹೈಕೋರ್ಟ್ ಅನುಮತಿ

ಬ್ಯಾಂಕುಗಳ‌ ಸಾಲ ವಸೂಲಾತಿ ಪ್ರಕ್ರಿಯೆ ಬಾಕಿ ಹಿನ್ನೆಲೆ ಡಾ.B.R.ಶೆಟ್ಟಿ ಅವರಿಗೆ ವಿದೇಶಕ್ಕೆ ತೆರಳದಂತೆ ಇಮ್ಮಿಗ್ರೇಷನ್ ಅಧಿಕಾರಿಗಳು ನಿರ್ಬಂಧಿಸಿದ್ದರು. ಸದ್ಯ ಈಗ ಹೈಕೋರ್ಟ್ ಡಾ.B.R.ಶೆಟ್ಟಿಗೆ ಅಬುಧಾಬಿಗೆ ತೆರಳಲು ಅನುಮತಿ ನೀಡಿದೆ. ಬೇರೆ ಪ್ರಕರಣಗಳಿಲ್ಲದಿದ್ದರೆ ವಿದೇಶ ಪ್ರಯಾಣಕ್ಕೆ ಅನುಮತಿಸಬಹುದು ಎಂದು ನ್ಯಾ.ಕೃಷ್ಣ.ಎಸ್ ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಚಿಕಿತ್ಸೆಗೆ ಅಬುಧಾಬಿಗೆ ತೆರಳಲು ಡಾ.B.R.ಶೆಟ್ಟಿಗೆ ಹೈಕೋರ್ಟ್ ಅನುಮತಿ
ಡಾ.B.R.ಶೆಟ್ಟಿ
Follow us
TV9 Web
| Updated By: ಆಯೇಷಾ ಬಾನು

Updated on:Feb 09, 2024 | 11:52 AM

ಬೆಂಗಳೂರು, ಫೆ.09: ಚಿಕಿತ್ಸೆಗೆ ಅಬುಧಾಬಿಗೆ ತೆರಳಲು ಡಾ.B.R.ಶೆಟ್ಟಿಗೆ ಹೈಕೋರ್ಟ್ ಅನುಮತಿ ನೀಡಿದೆ. ಬ್ಯಾಂಕುಗಳ‌ ಸಾಲ ವಸೂಲಾತಿ ಪ್ರಕ್ರಿಯೆ ಬಾಕಿ ಹಿನ್ನೆಲೆ ಡಾ.B.R.ಶೆಟ್ಟಿ ಅವರಿಗೆ ನಿರ್ಬಂಧವಿತ್ತು. ಬ್ಯಾಂಕುಗಳ ಮನವಿ ಮೇರೆಗೆ ಲುಕ್ ಔಟ್ ಸರ್ಕುಲರ್ ಹೊರಡಿಸಲಾಗಿತ್ತು. ವಿದೇಶಕ್ಕೆ ತೆರಳದಂತೆ ಇಮ್ಮಿಗ್ರೇಷನ್ ಅಧಿಕಾರಿಗಳು ನಿರ್ಬಂಧಿಸಿದ್ದರು. ಸದ್ಯ ಈಗ ಹೈಕೋರ್ಟ್ ಡಾ.B.R.ಶೆಟ್ಟಿಗೆ ಅಬುಧಾಬಿಗೆ ತೆರಳಲು ಅನುಮತಿ ನೀಡಿದೆ.

ಶೆಟ್ಟಿ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ, ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದು ಕೋರ್ಟ್​ಗಳ ಆದೇಶದಂತೆ ಸಾಲ ವಸೂಲಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಡಾ.ಬಿ.ಆರ್.ಶೆಟ್ಟಿ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್​​ಗಳಿಲ್ಲ. ಭಾರತೀಯ ಪ್ರಜೆ, 80 ವರ್ಷ ವಯಸ್ಸಾಗಿರುವುದನ್ನು ಪರಿಗಣಿಸಬೇಕು ಎಂದು ವಾದ ಮಂಡಿಸಿದ್ದಾರೆ. ವಾದ ಪರಿಗಣಿಸಿ ಹೈಕೋರ್ಟ್ ಲುಕ್ ಔಟ್ ಸರ್ಕುಲರ್ ಅಮಾನತ್ತಿನಲ್ಲಿಟ್ಟಿದೆ. ಡಾ.ಬಿ.ಆರ್.ಶೆಟ್ಟಿ ಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಬೇಕು. ಪ್ರಪಂಚದ ಯಾವುದೇ ಭಾಗದ ಆಸ್ತಿಗಳ ಪರಭಾರೆ ಮಾಡಬಾರದು. 1 ಕೋಟಿ ರೂ. ಮೊತ್ತದ ಶ್ಯೂರಿಟಿ ಒದಗಿಸಬೇಕು. ಬೇರೆ ಪ್ರಕರಣಗಳಿಲ್ಲದಿದ್ದರೆ ವಿದೇಶ ಪ್ರಯಾಣಕ್ಕೆ ಅನುಮತಿಸಬಹುದು ಎಂದು ನ್ಯಾ.ಕೃಷ್ಣ.ಎಸ್ ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಎಲ್ಒಸಿ ನೀಡುವ ಅಧಿಕಾರ ಹಸ್ತಾಂತರಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಇದನ್ನು ಓದಿ: BR Shetty: ಸಾವಿರ ಕೋಟಿ ರೂ ಬಜೆಟ್​ನಲ್ಲಿ ಮಹಾಭಾರತ ಸಿನಿಮಾ ನಿರ್ಮಿಸಲು ಹೊರಟಿದ್ದ ಈ ಕನ್ನಡಿಗನಿಗೆ ಈಗ ದಿಕ್ಕುತೋಚದ ಸ್ಥಿತಿ

ಏನಿದು ಪ್ರಕರಣ?

ಉದ್ಯಮಿ B.R.ಶೆಟ್ಟಿ 2 ಬ್ಯಾಂಕ್​ಗಳಿಂದ ಸುಮಾರು 2,800 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಪಡೆದಿದ್ದ ಸಾಲ ತೀರಿಸದ ಕಾರಣಕ್ಕೆ ಉದ್ಯಮಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಹೀಗಾಗಿ, ಅಬುದಾಭಿಗೆ ಪ್ರಯಾಣಿಸಲು ಶೆಟ್ಟಿಗೆ ಅನುಮತಿ ನೀಡಿರಲಿಲ್ಲ.

ಇದನ್ನು ಪ್ರಶ್ನಿಸಿ B.R.ಶೆಟ್ಟಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ, ಭದ್ರತೆ ಇಲ್ಲದೆ ಭಾರಿ ಸಾಲ ವಿತರಣೆಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ದೇಶದ ನಾಗರಿಕರಿಗೆ ಪ್ರಯಾಣಿಸುವ ಹಕ್ಕಿರುವುದು ನಿಜ. ಆದರೆ ಪಡೆದ ಸಾಲ ತೀರಿಸುವುದು ಅವರ ಆದ್ಯ ಕರ್ತವ್ಯ. ಸಾಲ ನೀಡುವುದಕ್ಕೂ ಮುನ್ನ ಭದ್ರತೆ ಖಾತ್ರಿಗೊಳಿಸಬೇಕು. RBI ಈ ಬಗ್ಗೆ ಅಗತ್ಯ ನಿಯಮಾವಳಿ ರೂಪಿಸಬೇಕು ಎಂದು ಹೈಕೋರ್ಟ್ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದರು.

B.R.ಶೆಟ್ಟಿಯ ಎನ್‌ಎಂಸಿ ಹೆಲ್ತ್‌ಕೇರ್ ಕಂಪನಿಗೆ ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ 7,500 ಕೋಟಿ ರೂ.ಗೂ ಹೆಚ್ಚು ಸಾಲ ನೀಡಿತ್ತು. ಆದ್ರೆ ಬಿ.ಆರ್.ಶೆಟ್ಟಿ ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ 2020ರ ಏ.15ರಂದು ಬಿ.ಆರ್.ಶೆಟ್ಟಿ ಸೇರಿ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಆಗ ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ ಇಂಗ್ಲೆಂಡ್ ನ್ಯಾಯಾಲಯದ ಮೊರೆ ಹೋಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:49 am, Fri, 9 February 24

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು