AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡ್ತಾ ಪಂಜಾಬ್​​ನಂತೆ ಬೆಂಗಳೂರು ಆಗುವ ಭಯ ಇತ್ತು: ಗೃಹ ಸಚಿವ ಪರಮೇಶ್ವರ್

ಕರ್ನಾಟಕ ಪೊಲೀಸ್ ಇಲಾಖೆ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಡ್ರಗ್ಸ್, ಗಾಂಜಾ ಕುರಿತು ಮಾತನಾಡಿದರು. ಪಂಜಾಬ್​ನಲ್ಲಿ ಅತಿ ಹೆಚ್ಚು ಗಾಂಜಾ ಬಳಸಲಾಗುತ್ತದೆ. ಅದು ಉಡ್ತಾ ಪಂಜಾಬ್ ಆಗಿಬಿಟ್ಟಿದೆ. ಅದೇ ರೀತಿ ಬೆಂಗಳೂರು ಕೂಡ ಆಗುವ ಆತಂಕ ಇದೆ. ಆದರೆ ಇತ್ತೀಚೆಗೆ ಕಮ್ಮಿಯಾಗಿದೆ ಎಂದರು.

ಉಡ್ತಾ ಪಂಜಾಬ್​​ನಂತೆ ಬೆಂಗಳೂರು ಆಗುವ ಭಯ ಇತ್ತು: ಗೃಹ ಸಚಿವ ಪರಮೇಶ್ವರ್
ವಶಪಡಿಸಿಕೊಂಡ ಮಾದಕ ವಸ್ತುಗಳ ವಿನಾಶ ಕಾರ್ಯಕ್ರಮದಲ್ಲಿ ಭಾಗಿಯಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬಿ ಮೂರ್ತಿ, ನೆಲಮಂಗಲ
| Edited By: Rakesh Nayak Manchi|

Updated on: Feb 09, 2024 | 12:48 PM

Share

ನೆಲಮಂಗಲ, ಫೆ.9: ಪಂಜಾಬ್​ನಲ್ಲಿ ಅತಿ ಹೆಚ್ಚು ಗಾಂಜಾ ಬಳಸಲಾಗುತ್ತದೆ. ಅದು ಉಡ್ತಾ ಪಂಜಾಬ್ ಆಗಿಬಿಟ್ಟಿದೆ. ಅದೇ ರೀತಿ ಬೆಂಗಳೂರು ಕೂಡ ಆಗುವ ಆತಂಕ ಇದೆ. ಆದರೆ ಇತ್ತೀಚೆಗೆ ಕಮ್ಮಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಹೇಳಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುಗಳ ವಿನಾಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಕೊಲೇಟ್ ಮೂಲಕ ಡ್ರಗ್ ಸಪ್ಲೈ ಮಾಡುತ್ತಿದ್ದರು. ಇತ್ತೀಚೆಗೆ ಇದು ಕಮ್ಮಿ ಆಗಿದೆ ಎಂದರು.

ಬಾರ್ ಅಂಡ್ ರೆಸ್ಟೋರೆಂಟ್ ಕ್ಲಬ್, ಪಾರ್ಟಿಗಳಲ್ಲೂ ಸಹ ಡ್ರಗ್ ಸಪ್ಲೈ ಮಾಡುವುದನ್ನು ಕೇಳಿದ್ದೇವೆ. ಇದು‌ ನಿಲ್ಲಬೇಕು, ಯುವಕರು ಮಕ್ಕಳನ್ನು ಉಳಿಸಬೇಕು ಎಂಬುದು ನಮ್ಮ ಕಳಕಳಿ. ನಮ್ಮ ಪೊಲೀಸರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ ಪೆಡ್ಲರ್​​ಗಳು ಸಿಕ್ಕಿದಾಗ ಅವರ ಆಸ್ತಿಗಳನ್ನು ಮುಟ್ಟುಗೋಲು ಮಾಡಿಕೊಳ್ಳುವ ಕೆಲಸವಾಗುತ್ತದೆ ಎಂದರು.

ಡ್ರಗ್ಸ್ ಪ್ರಕರಣ ಸಂಬಂಧ ರಾಜ್ಯದಲ್ಲಿ 2023ರಲ್ಲಿ 6764 ಕೇಸ್ ದಾಖಲಾಗಿದೆ. 9645 ಕೆಜಿ ಗಾಂಜಾ ಸೀಜ್ ಮಾಡಲಾಗಿದೆ. 233 ಕೆಜಿ ಸಿಂಥೆಟಿಕ್ ಡ್ರಗ್ ಸೀಜ್ ಮಾಡಲಾಗಿದೆ. ಪ್ರಕರಣದಲ್ಲಿ 7400 ಮಂದಿ ಭಾರತೀಯರು, 136 ಮಂದಿ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಒಟ್ಟು 128 ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಕೆ ಸುಧಾಕರ್ ವಾಪಸ್ಸು ಬಂದರೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಸಿಗುವುದೇ ಅಂದಾಗ ಪರಮೇಶ್ವರ್ ಸಿಡುಕಿದರು!

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಇಡೀ ರಾಜ್ಯವನ್ನು ಡ್ರಗ್ ಮುಕ್ತ ಮಾಡಲು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಜಿಲ್ಲೆಯಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದರೆ ಇಡೀ ಕರ್ನಾಟಕ ಡ್ರಗ್ ಮುಕ್ತವಾಗುತ್ತದೆ. 3885 ಕೆಜಿ, 55 ಕೆಜಿ ಎಂಡಿಎಂಎ, ಆಶಿಶ್ ಆಯಿಲ್ ಸೇರಿ 36 ಕೋಟಿ ಮೌಲ್ಯದ ಡ್ರಗ್ ನಾಶಪಡಿಸುತ್ತೇವೆ ಎಂದರು.

ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಸುವರ್ಣ ಸಂಭ್ರಮ ಆಚರಣೆ ನಡೆಸುತ್ತಿದೆ. ಸಂಕಲ್ಪ ಮಾಡಿದಂತೆ ಪೊಲೀಸ್ ಇಲಾಖೆಯ ಜನಸಮುದಾಯದಲ್ಲಿ ನೆನಪಾಗಿ ಉಳಿಯಬೇಕು. ಇಡೀ ರಾಜ್ಯವನ್ನು ಡ್ರಗ್ ಮುಕ್ತ ಮಾಡಲು ಯೋಜಿಸಲಾಗಿತ್ತು. ಡ್ರಗ್ ದೊಡ್ಡ ಆಂದೋಲನ, ಯುದ್ಧವನ್ನ ಮಾಡಬೇಕು ಎಂದುಕೊಂಡಿದ್ದೇವು. ಹೀಗಾಗಿ ಪೊಲೀಸರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.

ಡ್ರಗ್ ಬಹಳ ದೊಡ್ಡ ಸವಾಲು

ನಾನು ಮೂರನೇ ಬಾರಿ ರಾಜ್ಯದ ಗೃಹ ಸಚಿವನಾಗಿದ್ದೇನೆ. ವಿಧಾನಸಭೆ, ವಿಧಾನಪರಿಷತ್​ನಲ್ಲಿ ಅತೀ ಹೆಚ್ಚು ಪ್ರಶ್ನೆಗಳು ಡ್ರಗ್ಸ್ ಬಗ್ಗೆ ಬಂದಿದೆ. ಮಾದಕ ವಸ್ತುಗಳು ಇಡೀ ಸಮುದಾಯವನ್ನು ನಾಶಪಡಿಸುವ ಕೆಲಸ ಮಾಡುತ್ತೇವೆ. ಯುವ ಸಮುದಾಯದ ಆರೋಗ್ಯ ಜೀವನ ಹಾಳಾಗುತ್ತಿದೆ. ನಮಗೆ ಡ್ರಗ್ ಬಹಳ ದೊಡ್ಡ ಸವಾಲಾಗಿ ನಿಂತಿದೆ. ಕೆಲ ದೇಶಗಳು ಡ್ರಗ್ ವಿರುದ್ಧ ಸೋತುಬಿಟ್ಟಿವೆ ಎಂದು ಆತಂಕ ಹೊರಹಾಕಿದರು.

ನಮ್ಮ ಸಂಸ್ಕೃತಿಯಲ್ಲಿ ಉತ್ತರ ಭಾರತದಲ್ಲಿ ಭಾಂಗ್ ಎಂಬುಂದನ್ನು ಬಳಸುತ್ತಾರೆ. ಇತಿಹಾಸ, ಪುರಾಣವನ್ನು ಗಮನಿಸಿದಾಗ ಇದನ್ನು ನಾವು ನೋಡಬಹುದು. ನಾನು ಕಾಲೇಜಿನಲ್ಲಿ ಇದ್ದಾಗ ಅನೇಕ ಮಂದಿ ಸಿಗರೇಟ್​ನಲ್ಲಿ ಗಾಂಜಾ ಸೇದುತ್ತಿದ್ದರು. ನಾನು ಸ್ವತಃ ಅದನ್ನು ನೋಡಿದ್ದೇನೆ, ನಾನು ಯಾವತ್ತು ಸಿಗರೇಟ್ ಸೇದಿಲ್ಲ. ಡ್ರಗ್ ಅನೇಕ ಜನರ ಜೀವ ತೆಗೆದಿದೆ. ಆಫ್ರಿಕಾ ಪ್ರಜೆಗಳು ಇಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಾರೆ. ಅನೇಕ ಅಧಿಕಾರಿಗಳು ಶ್ರೇಷ್ಠ ಕೆಲಸ ಮಾಡಿದ್ದಾರೆ. ಅಧಿಕಾರಿಗಳಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿ ಮೂರ್ತಿ, ನೆಲಮಂಗಲ
ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು