ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಶಾಕ್​​: ಬಸ್​​ಗಳ ಟಿಕೆಟ್​​ ದರ ದುಪ್ಟಟ್ಟು ಏರಿಕೆ

ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲಕರಿಂದ ದರ ಹೆಚ್ಚಳದ ಶಾಕ್ ಎದುರಾಗಿದೆ. KSRTC ಹೆಚ್ಚುವರಿ ಬಸ್ ಬಿಟ್ಟಿದ್ದರೂ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದು, ಸೀಟಿಗಾಗಿ ಪರದಾಟ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಶಾಕ್​​: ಬಸ್​​ಗಳ ಟಿಕೆಟ್​​ ದರ ದುಪ್ಟಟ್ಟು ಏರಿಕೆ
ಸಾಂದರ್ಭಿಕ ಚಿತ್ರ
Edited By:

Updated on: Mar 18, 2026 | 5:30 PM

ಬೆಂಗಳೂರು, ಮಾರ್ಚ್​​ 18: ಯುಗಾದಿ ಮತ್ತು ರಂಜಾನ್​​ ಹಬ್ಬಗಳನ್ನು ಮನೆಯವರ ಜೊತೆ ಸೇರಿಕೊಂಡು ಆಚರಿಸಬೇಕು ಎಂಬ ಆಸೆಯಲ್ಲಿ ಬೆಂಗಳೂರಿನಿಂದ ಊರುಗಳತ್ತ ಮುಖ ಮಾಡುತ್ತಿರುವ ಪ್ರಯಾಣಿಕರಿಗೆ ಭರ್ಜರಿ ಶಾಕ್​​ ಎದುರಾಗಿದೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್​​ ಮಾಲಕರು ದುಪ್ಪಟ್ಟು ದರ ವಸೂಲಿಗೆ ಇಳಿದಿದ್ದಾರೆ. ನಾಳೆ ಯುಗಾದಿ ಹಬ್ಬವಾದರೆ, ಶುಕ್ರವಾರ ಹೊಸ ತೊಡಕು ಆಚರಣೆ ಇದೆ. ಶನಿವಾರ ರಂಜಾನ್​​ ಬಂದಿದ್ದು, ಭಾನುವಾರ ಎಂದಿನಂತೆ ವಾರದ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನ ಊರುಗಳತ್ತ ಹೊರಟು ನಿಂತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ KSRTC 2,325 ಹೆಚ್ಚುವರಿ ಬಸ್​​ಗಳನ್ನು ಬಿಟ್ಟಿರುವ ನಡುವೆಯೂ ಪ್ರಯಾಣಿಕರ ಪರದಾಟ ಮುಂದುವರಿದಿದೆ.

ಖಾಸಗಿ ಬಸ್​​ಗಳ ಟಿಕೆಟ್​​ ದರ ಗಣನೀಯ ಏರಿಕೆ

ಬಸ್​​ಗಳ ಟಿಕೆಟ್​​ ದರ
ಎಲ್ಲಿಂದ ಎಲ್ಲಿಗೆ? ಹಿಂದಿನ ದರ (ರೂ.ಗಳಲ್ಲಿ) ಇಂದಿನ ದರ
(ರೂ.ಗಳಲ್ಲಿ)
ಬೆಂಗಳೂರು-ಚಿಕ್ಕಮಗಳೂರು 366-650 999-1498
ಬೆಂಗಳೂರು-ಮಂಗಳೂರು 600-900 1212-2999
ಬೆಂಗಳೂರು-ಧಾರವಾಡ 389-1300 1400-4500
ಬೆಂಗಳೂರು-ಹುಬ್ಬಳ್ಳಿ 409-1248 1000-4500
ಬೆಂಗಳೂರು- ಕಾರವಾರ 542-900 1500-4500
ಬೆಂಗಳೂರು-ಕಲಬುರಗಿ 599-1300 1398-2800
ಬೆಂಗಳೂರು-ಶಿವಮೊಗ್ಗ 416-999 1109-2799
ಬೆಂಗಳೂರು-ಧರ್ಮಸ್ಥಳ 495-801 1011-3600
ಬೆಂಗಳೂರು-ಕೊಡಗು 450-600 899-3000

ಇದನ್ನೂ ಓದಿ: ಯುಗಾದಿಯ ಆಚರಣೆ ಹೇಗೆ ಮಾಡಬೇಕು? ಈ ವರ್ಷ ಯಾವೆಲ್ಲ ಬದಲಾವಣೆಗಳು?

ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ಮೆಜೆಸ್ಟಿಕ್ ಬಸ್​​ ನಿಲ್ದಾಣ

ಇಂದು ಮಧ್ಯಾಹ್ನದಿಂದಲೇ ಊರಿನತ್ತ ಬೆಂಗಳೂರಿಗರು ಹೊರಟಿರುವ ಕಾರಣ ಮೆಜೆಸ್ಟಿಕ್ ಬಸ್​​ ನಿಲ್ದಾಣ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ದೃಶ್ಯಗಳು ಕಂಡುಬಂದಿವೆ. ಸೀಟಿಗಾಗಿ ಪ್ರಯಾಣಿಕರ ನಡುವೆಯೇ ಪೈಪೋಟಿ ನಡೆಯುತ್ತಿದ್ದು, ಬಸ್ಸುಗಳು ಬರ್ತಿದ್ದಂತೆ ಕಿಟಕಿ ಮೂಲಕ ಬ್ಯಾಗ್​​ಗಳನ್ನು ಹಾಕಿ ಜನರು ಸೀಟ್ ಹಿಡಿಯಲು ಪ್ರಯತ್ನಿಸುತ್ತಿರೋದು ಸರ್ವೇ ಸಾಮಾನ್ಯ ಎಂಬಂತಿದೆ. ರಾತ್ರಿ ವೇಳೆಗೆ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:24 pm, Wed, 18 March 26

Follow Us