ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್; ನಿನ್ನೆಯವರೆಗೂ ಪ್ರವೇಶ ಶುಲ್ಕ 2 ಕೋಟಿ 42 ಲಕ್ಷ ಕಲೆಕ್ಟ್ : ಲಾಲ್ ಬಾಗ್ ಉಪ ನಿರ್ದೇಶಕಿ
10 ದಿನಗಳ ಫ್ಲವರ್ ಶೋ ಯಶಸ್ವಿಯಾಗಿ ಮೂಡಿಬಂದಿದೆ. ಇಂದು ಸಂಜೆ 7 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೀವಿ ಎಂದು ಲಾಲ್ ಬಾಗ್ ಉಪ ನಿರ್ದೇಶಕಿ ಕುಸುಮ ಹೇಳಿದ್ದಾರೆ.
ಬೆಂಗಳೂರು: 10 ದಿನಗಳ ಫ್ಲವರ್ ಶೋ (Flower Show) ಯಶಸ್ವಿಯಾಗಿ ಮೂಡಿಬಂದಿದೆ. ಇಂದು ಸಂಜೆ 7 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೀವಿ ಎಂದು ಲಾಲ್ ಬಾಗ್ (Lal Bagh) ಉಪ ನಿರ್ದೇಶಕಿ ಕುಸುಮ ಹೇಳಿದ್ದಾರೆ. ಫ್ಲವರ್ ಶೋಗೆ ಇಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಇಂದು 8 ಗಂಡೆಯವರೆಗೂ ಅವಕಾಶ ಮಾಡಿ ಕೊಡುತ್ತೇವೆ. ಇಂದು ಕೊನೆಯ ದಿನವಾದ್ದರಿಂದ ವಿನೋಧ್ ರಾಜ್ ಕುಮಾರ್ ಅವರು ಸಹ ಬಂದಿದ್ದರು. ಫ್ಲವರ್ ಶೋ ಬಗ್ಗೆ ತುಂಬ ಮೆಚ್ಚಿಕೊಂಡ್ರು ಎಂದು ಹೇಳಿದರು.
ನಿನ್ನೆ ೧ ಲಕ್ಷದ 60 ಸಾವಿರ ಜನರು ಬಂದಿದ್ದಾರೆ. ಇಂದು ಎರೆಡು ಲಕ್ಷದಷ್ಟು ಜನರು ಬಂದಿರುವ ಸಾಧ್ಯಾತೆ ಇದೆ. ಇಂದು ಸ್ಕೂಲ್ ಹಾಗೂ ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ನಿನ್ನೆಯವರೆಗೂ ಪ್ರವೇಶ ಶುಲ್ಕ 2 ಕೋಟಿ 42 ಲಕ್ಷ ಕಲೆಕ್ಟ್ ಆಗಿದೆ. ಇಂದು ಒಂದು ಕೋಟಿಯಷ್ಟು ಪ್ರವೇಶ ಶುಲ್ಕ ಕಲೆಕ್ಟ್ ಆಗುವ ಸಾಧ್ಯಾತೆ ಇದೆ ಎಂದು ಹೇಳಿದ್ದಾರೆ.
ಈ 10 ದಿನಗಳ ಕಾಲ ಯಾವುದೇ ಜಗಳ, ಗಲಾಟೆಗಳು ಆಗಿಲ್ಲ. ಸಮಾಧಾನವಾಗಿ ಬಂದು ಜನರು ಫ್ಲವರ್ ಶೋ ವೀಕ್ಷಣೆ ಮಾಡುತ್ತಿದ್ದಾರೆ. ಅಪ್ಪು ಹಾಗೂ ಡಾ ರಾಜ್ ಕುಮಾರ್ ಅವರ ಅಭಿಮಾನಿಗಳು ತುಂಬ ಚೆನ್ನಾಗಿ ಸಹಕಾರ ನೀಡಿದ್ದಾರೆ. ಇನ್ನು ಒಂದೆರೆಡು ದಿನಗಳ ಕಾಲ ಮುಂದುವರಿಸುವಂತೆ ಬೇಡಿಕೆಗಳು ಕೇಳಿ ಬರ್ತಿದೆ. ಆದ್ರೆ ಫ್ಲವರ್ ಶೋ ಮುಂದುವರಿಸಲು ಸೆಕ್ಯುರಿಟಿ ಪರ್ಪಸ್ ಸಮಸ್ಯೆಗಳಿವೆ ಎಂದು ತಿಳಿಸಿದರು.
ಈಗಾಗಲೇ 500 ಕ್ಕು ಸಿಬ್ಬಂದಿ ಹಾಗೂ ಪೋಲಿಸರು ಪ್ರತಿದಿನ ಜನರನ್ನ ನಿಭಾಯಿಸುತ್ತಿದ್ದಾರೆ. ಹೀಗಾಗಿ ಇಂದೇ ಫ್ಲವರ್ ಶೋವನ್ನ ಕೊನೆಗೊಳಿಸುತ್ತಿದ್ದೇವೆ. ಜನರು ಸಂಜೆಯವರೆಗೂ ಬಂದು ಫ್ಲವರ್ ಶೋ ವೀಕ್ಷಣೆ ಮಾಡಬಹುದು ಎಂದು ಮಾತನಾಡಿದರು.
Published On - 6:12 pm, Mon, 15 August 22