ವೈಯಾಲಿಕಾವಲ್ : ಅಮ್ಮನ ಮನೆಯಲ್ಲಿದ್ದ ಪತಿ, ಪರಪುರುಷನೊಂದಿಗೆ ಸುತ್ತಾಡುತ್ತಿದ್ದ ಹೆಂಡತಿಯ ಪ್ರಶ್ನಿಸಲು ಹೋಗಿದ್ದಾಗ ನಿಗೂಢ ಸಾವು

ಸೋಮವಾರ ಮತ್ತೆ ಹೆಂಡತಿ ಜೊತೆ ಮಾತಾಡಲು ವಿನೋದ್​ ಬಂದಿದ್ದ. ಆದ್ರೆ ಆ ದಿನ ಪೂರ್ತಿ ಕುಟುಂಬಸ್ಥರು ಎಷ್ಟೇ ಕರೆ ಮಾಡಿದ್ರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸಂಜೆ ಕರೆ ಸ್ವೀಕರಿಸಿದ್ದ ನಿರ್ಮಲಾ ಕುಟುಂಬಸ್ಥರು, ಆ್ಯಸಿಡ್ ಕುಡಿದಿದ್ದಾನೆಂದು ಮಾಹಿತಿ ನೀಡಿದ್ದರು.

ವೈಯಾಲಿಕಾವಲ್ : ಅಮ್ಮನ ಮನೆಯಲ್ಲಿದ್ದ ಪತಿ, ಪರಪುರುಷನೊಂದಿಗೆ ಸುತ್ತಾಡುತ್ತಿದ್ದ ಹೆಂಡತಿಯ ಪ್ರಶ್ನಿಸಲು ಹೋಗಿದ್ದಾಗ ನಿಗೂಢ ಸಾವು
ಮೃತ ವಿನೋದ್
Follow us
TV9 Web
| Updated By: ಆಯೇಷಾ ಬಾನು

Updated on: Feb 21, 2023 | 2:34 PM

ಬೆಂಗಳೂರು: ಹೆಂಡತಿ ಮನೆಗೆ ಹೋಗಿದ್ದ ಪತಿ ನಿಗೂಢವಾಗಿ ಮೃತಪಟ್ಟಿದ್ದು ಪತಿ ಮನೆಯವರು ಹೆಂಡತಿ ಕುಟುಂಬಸ್ಥರ ಮೇಲೆ ದೂರು ದಾಖಲಿಸಿರುವ ಘಟನೆ ಬೆಂಗಳೂರಿನ ವೈಯಾಲಿ ಕಾವಲ್ ನಲ್ಲಿ ನಡೆದಿದೆ. ವಿನೋದ್ ಕುಮಾರ್, ನಿಗೂಢವಾಗಿ ಮೃತಪಟ್ಟ ವ್ಯಕ್ತಿ. ಹೆಂಡತಿ ಬೇರೊಬ್ಬ ಪುರುಷನ ಜೊತೆ ಸುತ್ತಾಡುತ್ತಿರುವ ವಿಷಯ ತಿಳಿದು ಈ ಬಗ್ಗೆ ವಿಚಾರಿಸಲು ಹೋಗಿದ್ದ ವಿನೋದ್ ಆಸ್ಪತ್ರೆ ಸೇರಿ ಮೃತಪಟ್ಟಿದ್ದಾನೆ.

ಮಗನ ಸಾವಿಗೆ ಹೆಂಡತಿಯೇ ಕಾರಣ ಎಂದ ವಿನೋದ್ ಕುಟುಂಬ

ವಿನೋದ್ ಕುಮಾರ್ ಮತ್ತು ನಿರ್ಮಲಾ 10 ವರ್ಷದ ಹಿಂದೆ ವಿವಾಹವಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಎರಡು ತಿಂಗಳಿಂದ ಗಂಡ ಹೆಂಡತಿ ನಡುವೆ ಗಲಾಟೆ ನಡೆಯುತ್ತಿದ್ದು ಹೆಂಡತಿ ಗಲಾಟೆ ಮಾಡಿ ಗಂಡನನ್ನ ಮನೆಬಿಟ್ಟು ಓಡಿಸಿಬಿಟ್ಟಿದ್ದಳಂತೆ. ಹೀಗಾಗಿ ವಿನೋದ್ ವೈಯಾಲಿಕಾವಲ್ ನಿಂದ ಕೆ.ಆರ್.ಪುರಂನಲ್ಲಿರುವ ತನ್ನ ತಾಯಿ ಮನೆಗೆ ಬಂದು ಉಳಿದುಕೊಂಡಿದ್ದ. ಆದರೆ 15 ದಿನದ ಹಿಂದೆ ನಿರ್ಮಲಾಗೆ ಅಪಘಾತ ಆಗಿದೆ ಎಂದು ಮಾಹಿತಿ ಬಂದಿದೆ. ಹೀಗಾಗಿ ಹೆಂಡತಿ ಅಲ್ವಾ ಎಂದು ನಿರ್ಮಲಾ ನೋಡಲು ವಿನೋದ್ ತಾಯಿ ಮನೆಯಿಂದ ತೆರಳಿದ್ದ. ನಿಮ್ಹಾನ್ಸ್​ನಲ್ಲಿ ಪತ್ನಿಯನ್ನು ದಾಖಲಿಸಿ‌ ಚಿಕಿತ್ಸೆ ಕೂಡ ಕೊಡಿಸಿದ್ದ. ನಿರ್ಮಲಾ ಕಣ್ಣಿಗೆ ಗಂಭೀರವಾದ ಗಾಯವಾಗಿತ್ತು. ಆದರೆ ನಿರ್ಮಲಾ ಸತ್ಯನಾರಾಯಣ ಪೂಜೆಗೆ ಅಂತಾ ಹೋಗಿದ್ದೆ. ಆಗ ಸದಾಶಿವನಗರದಲ್ಲಿ ಆಟೋ ಚಾಲಕ ಆಕ್ಸಿಡೆಂಟ್ ಮಾಡಿ ಹೊರಟುಹೋಗಿದ್ದ ಎಂದಿದ್ದಾಳೆ. ಆದರೆ ಅದರ ಅಸಲಿಯತ್ತೇ ಬೇರೆಯಾಗಿದೆ ಎಂದು ವಿನೋದ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಮದುವೆಯಾಗಿದ್ದರೂ ನಿರ್ಮಲಾಗೆ ಬೇರೊಬ್ಬ ವ್ಯಕ್ತಿ ಕಿರಣ್ ಎಂಬಾತನ ಜೊತೆಗೆ ಸಂಬಂಧವಿದೆ. ನಿರ್ಮಲಾ ಪ್ರಿಯಕರನಿಗೂ ವಿವಾಹವಾಗಿದ್ದು ಪತ್ನಿ ಇದ್ದಾಳೆ. ಅದಾಗಿಯೂ ನಿರ್ಮಲಾ ಮತ್ತು ಕಿರಣ್ ಸಂಬಂಧ ಬೆಳೆಸಿದ್ದಾರೆ. ಹೀಗೆ ಬೈಕ್​ನಲ್ಲಿ ಪ್ರಿಯಕರನ ಜೊತೆಗೆ ನಂದಿ ಹಿಲ್ಸ್​ಗೆ ಹೋಗಿ ಬರುತ್ತಿದ್ದ ವೇಳೆ ಅಪಘಾತ ಆಗಿದೆ. ನಿರ್ಮಲಾ ಗಾಡಿ ಓಡಿಸಿಕೊಂಡು ಬಂದು ಟಿಪ್ಪರ್​ಗೆ ಗುದ್ದಿದ್ದಾಳೆ ಎಂದು ವಿನೋದ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಗಂಡ ಹೆಂಡತಿ ಜಗಳ ಬಿಡಿಸಲು ಬಂದವಳ ಜೊತೆಯೇ ಗಂಡ ಪರಾರಿ; ಸಂತ್ರಸ್ಥ ಮಹಿಳೆಯಿಂದ ನ್ಯಾಯಕ್ಕಾಗಿ ಮನವಿ

ನೊಂದಿದ್ದ ವಿನೋದ್​ ಹೆಂಡತಿಗೆ ಬುದ್ದಿ ಹೇಳಿದ್ದ

ಐದು ದಿನದ ಹಿಂದೆ ವಿನೋದ್ ಕೆಲಸಕ್ಕೆ ಹೋಗಿದ್ದಾಗ ಅಪಘಾತದ ಅಸಲಿಯತ್ತು ಗೊತ್ತಾಗಿದೆ. ಇದರಿಂದ ನೊಂದ ವಿನೋದ್ ಫೆ.16 ಕ್ಕೆ ಅಕ್ಕ ಪ್ರಮೀಳಾ ಮನೆಗೆ ಹೋಗಿದ್ದಾನೆ. ಎಲ್ಲಾ ವಿಚಾರವನ್ನು ಅಕ್ಕನಿಗೆ ಹೇಳಿದ್ದಾನೆ. ಬಳಿಕ ತನ್ನ ಪತ್ನಿ ನಿರ್ಮಲಾಳ ಬಳಿ ಹೋಗಿ ಅವನನ್ನು ಬಿಟ್ಟು ನನ್ನ ಜೊತೆಗೆ ಬಂದುಬಿಡು. ಬೇರೆ ಕಡೆ ಹೋಗಿ ಜೀವನ ಮಾಡೋಣ ಎಂದು ಬುದ್ಧಿ ಹೇಳಿದ್ದನಂತೆ. ಇದನ್ನು ಸಹ ಅಕ್ಕನ ಬಳಿಗೆ ಬಂದು ವಿನೋದ್ ಹೇಳಿಕೊಂಡಿದ್ದ. ನಂತರ ಸೋಮವಾರ ಮತ್ತೆ ಹೆಂಡತಿ ಜೊತೆ ಮಾತಾಡಲು ವಿನೋದ್​ ಬಂದಿದ್ದ. ಆದ್ರೆ ಆ ದಿನ ಪೂರ್ತಿ ಕುಟುಂಬಸ್ಥರು ಎಷ್ಟೇ ಕರೆ ಮಾಡಿದ್ರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸಂಜೆ ಕರೆ ಸ್ವೀಕರಿಸಿದ್ದ ನಿರ್ಮಲಾ ಕುಟುಂಬಸ್ಥರು, ಆ್ಯಸಿಡ್ ಕುಡಿದಿದ್ದಾನೆಂದು ಮಾಹಿತಿ ನೀಡಿದ್ದರು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ವಿನೋದ್​ನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆ ಫಲಿಸದೆ ವಿನೋದ್ ಮೃತಪಟ್ಟಿದ್ದಾನೆ. ಸದ್ಯ ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪತ್ನಿ ಕುಟುಂಬಸ್ಥರೇ ನನ್ನ ಮಗನಿಗೆ ವಿಷ ಕುಡಿಸಿ ಕೊಂದಿದ್ದಾರೆಂದು ವಿನೋದ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ