ಮೊದಲು ಸ್ವಾತಂತ್ರ್ಯ ದಿನಾಚರಣೆ ಮುಗಿಯಲಿ, ಆಮೇಲೆ ಸಿಎಂ ಬದಲಾವಣೆ ಬಗ್ಗೆ ಮಾತಾಡ್ತೀನಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಸಿಎಂ ಬದಲಾವಣೆ ವಿಚಾರದಲ್ಲೂ ಡಿ.ಕೆ ಶಿವಕುಮಾರ್ ತಟಸ್ಥ ಹೇಳಿಕೆ ನೀಡಿದ್ದು, ಆಗಸ್ಟ್ 15 ರ ಬಳಿಕ ಮಾತನಾಡಯತ್ತೇನೆ ಎಂದು ಹೇಳಿದರು.
ಬೆಂಗಳೂರು: ನನ್ನ ಮೂರು ದಿನ ಬಿಟ್ಟುಬಿಡಿ, ಸ್ವಾತಂತ್ರ್ಯದ ಹಬ್ಬ ಆಗಲಿ ಆಮೇಲೆ ಸಿಎಂ ಬದಲಾವಣೆ (CM Change) ವಿಚಾರ ಎಲ್ಲ ಮಾತನಾಡುತ್ತೇನೆ ಎಂದು ನಗರದಲ್ಲಿ ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು. ಅವರು ಯಾವ ತೀರ್ಮಾನ ಬೇಕಾದರೂ ಮಾಡಿಕೊಳ್ಳಲಿ. ನನ್ನ ಮೂರು ದಿನ ಬಿಟ್ಟುಬಿಡಿ. ಬೇರೆ ಬೇರೆ ನಾಯಕರು ಏನಾದರೂ ಹೇಳಿಕೆ ನೀಡಲಿ. ನಾವು ಮಾತ್ರ ಸ್ವಾತಂತ್ರ್ಯಕ್ಕಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದರು. ಇನ್ನೂ ಸಿಎಂ ಬದಲಾವಣೆ ಟ್ವೀಟ್ ವಿಚಾರವಾಗಿ ಕಾಂಗ್ರೆಸ್ ಪಾಳಯದಲ್ಲೇ ಗೊಂದಲವಿದ್ದು, ಪಕ್ಷದ ಅಧ್ಯಕ್ಷರು, ಹಿರಿಯ ನಾಯಕರಿಗೆ ಟ್ವೀಟ್ ಮಾಹಿತಿ ಇರಲಿಲ್ಲ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದಿಂದ ಟ್ವೀಟ್ ಮಾಡಿದ್ದು ಯಾರು ಎಂದು ಡಿ.ಕೆ ಶಿವಕುಮಾರ್ ಮಾಹಿತಿ ಕೇಳಿದರು.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಬದಲಾವಣೆ: ಕಾಂಗ್ರೆಸ್ ಟ್ವೀಟ್ನಿಂದ ಅಂತರ ಕಾಯ್ದುಕೊಂಡ ಸಿದ್ದರಾಮಯ್ಯ
ಯಾರು ಅನುಮತಿ ನೀಡಿದ್ದು ಎಂದು ಸಾಮಾಜಿಕ ಜಾಲತಾಣ ವಿಭಾಗದವರನ್ನ ಅಧ್ಯಕ್ಷರ ಕಚೇರಿ ಕೇಳಿದೆ. ರಾಜಕೀಯ ವಿಚಾರಗಳ ಟ್ವೀಟ್ ಮಾಡುವ ಮುನ್ನ ಅಧ್ಯಕ್ಷರ ಗಮನಕ್ಕೆ ತರುವಂತೆ ಮಾಹಿತಿ ನೀಡಿದರು. ಪಕ್ಷದ ಟ್ವೀಟ್ಗಳು ಅಧ್ಯಕ್ಷರ ಹೇಳಿಕೆಗೆ ಸಮ. ಹೀಗಾಗಿ ಪ್ರಮುಖ ಟ್ಬೀಟ್ ಪೋಸ್ಟ್ ಮಾಡುವ ಮುನ್ನ ಅಧ್ಯಕ್ಷರ ಗಮನಕ್ಕೆ ತರುವಂತೆ ಸೂಚನೆ ನೀಡಿದರು. ಸಿಎಂ ಬದಲಾವಣೆ ವಿಚಾರದಲ್ಲೂ ಡಿ.ಕೆ ಶಿವಕುಮಾರ್ ತಟಸ್ಥ ಹೇಳಿಕೆ ನೀಡಿದ್ದು, ಆಗಸ್ಟ್ 15 ರ ಬಳಿಕ ಮಾತನಾಡಯತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಸಿಎಂ ಬದಲಾವಣೆ ಸುದ್ದಿಗೆ ಮೂಲ ಬಿಜೆಪಿ:
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಬದಲಾವಣೆ ಸುದ್ದಿಗೆ ಮೂಲ ಬಿಜೆಪಿ. ಬಿಜೆಪಿ ನಾಯಕರು, ಮಾಜಿ ಶಾಸಕರೇ ಹೇಳ್ತಿದ್ದಾರೆ. ಬಿಜೆಪಿ ಅವರು ಹೇಳಿದ್ದನ್ನೇ ನಾವು ಪಿಕ್ ಮಾಡಿದ್ದೇವೆ. ಬಿಜೆಪಿ ಅವರೇ ನೀಡಿದ ಆಹಾರ, ಅವರೇ ನೀಡಿದ ಮಾಹಿತಿ. ಅದು ನಮ್ಮ ಪಾರ್ಟಿಯಲ್ಲಿ ಚರ್ಚೆ ಆಗುತ್ತಿದೆ. ನೀವೂ ಚರ್ಚೆ ಮಾಡ್ತಿದ್ದೀರಾ. ಸಿಎಂ ಬದಲಾವಣೆ ವಿಚಾರದ ಬಗ್ಗೆ ಗೊತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಒಂದೊಂದು ಪಕ್ಷಕ್ಕೆ ಒಂದೊಂದು ಮಾಹಿತಿ ಇರತ್ತೆ. ಸಿದ್ದರಾಮಯ್ಯ ಅವ್ರು ನಿನ್ನೆ ಕೂಡ ಹೇಳಿದ್ದಾರೆ. ಅವರ ಪಕ್ಷದಲ್ಲಿರೋರು ಹೇಳ್ತಿದಾರೆ ಅಂತ ಎಂದು ಹೇಳಿದರು.
ಫ್ರೀಡಂ ಮಾರ್ಚ್ಗಾಗಿ ರಾಷ್ಟ್ರೀಯ ನಾಯಕರಿಗೆ ಆಹ್ವಾನ:
ಫ್ರೀಡಂ ಮಾರ್ಚ್ಗಾಗಿ ರಾಷ್ಟ್ರೀಯ ನಾಯಕರಿಗೆ ಆಹ್ವಾನ ಕೊಟ್ಟಿದ್ದೇವೆ. ರಾಹುಲ್ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲ. ಯಾರು ಬರ್ತಾರೆ ಅನ್ನೋದನ್ನ ಹೈಕಮಾಂಡ್ ಇಂದ ಮಾಹಿತಿ ಬರತ್ತೆ. ಇದು AICC ನೀಡಿರುವ ಕಾರ್ಯಕ್ರಮ. ಇದನ್ನ ನೋಡಿ ಬಿಜೆಪಿ ಅವರು ಶುರು ಮಾಡಿದ್ದಾರೆ ಮಾಡಲಿ. ದೇಶಕ್ಕೆ ಗೌರವ ಕೊಡೋದನ್ನ ತಪ್ಪು ಅಂತ ಹೇಳೋಕಾಗುತ್ತಾ.? ಹೆಲ್ದಿ ಕಾಂಪಿಟೇಷನ್ ಇರಲಿ ಬಿಡಿ. ನಾವು ಅದನ್ನ ಟೀಕಿಸೋದಿಲ್ಲ ಮಾಡಲಿ. ದೇಶದ ಸ್ವಾತಂತ್ರ್ಯ ವಿಚಾರದಲ್ಲಿ ನಮಗೆ ಹಕ್ಕು ಜಾಸ್ತಿ ಇದೆ. ಅವರು ಕೂಡ ರಾಷ್ಟ್ರ ಭಕ್ತರಾಗಬೇಕು ಅಂತ ಮಾಡ್ತಿದ್ದಾರೆ. ನಾನು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:40 am, Wed, 10 August 22