ಬೆಂಗಳೂರು: ಪ್ರೇಯಸಿಗಾಗಿ ಮನೆಗಳ್ಳತನ ಮಾಡುತ್ತಿದ್ದ ಅಸಾಮಿ ಅರೆಸ್ಟ್

ಇತ್ತೀಚೆಗೆ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಂತೆ ಇಲ್ಲೊಬ್ಬ ಅಸಾಮಿ, ಪ್ರೇಯಸಿಯನ್ನು ಪ್ರವಾಸಿ ತಾಣಗಳಿಗೆ ಸುತ್ತಾಡಿಸಲು ಮನೆ ಕಳ್ಳತನ ಇಳಿದಿದ್ದ. ಇದೀಗ 23 ಮನೆಗಳವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಜಿಗಣಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬೆಂಗಳೂರು: ಪ್ರೇಯಸಿಗಾಗಿ ಮನೆಗಳ್ಳತನ ಮಾಡುತ್ತಿದ್ದ ಅಸಾಮಿ ಅರೆಸ್ಟ್
ಲಕ್ಷ್ಮಣ್ ಅಲಿಯಾಸ್​ ಗುನ್ನಿ ಬಂಧಿತ ಆರೋಪಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 05, 2024 | 4:33 PM

ಬೆಂಗಳೂರು, ಸೆ.05: ಪ್ರೇಯಸಿಗಾಗಿ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್​ ಖದೀಮನನ್ನ ಜಿಗಣಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸರ್ಜಾಪುರದ ಚಿಕ್ಕದಾಸರಹಳ್ಳಿ(Chikkadasarahalli) ನಿವಾಸಿ ಲಕ್ಷ್ಮಣ್ ಅಲಿಯಾಸ್​ ಗುನ್ನಿ ಬಂಧಿತ ಆರೋಪಿ. ಇತನಿಂದ 8 ಲಕ್ಷ ರೂಪಾಯಿ ಮೌಲ್ಯದ 101 ಗ್ರಾಂ ಚಿನ್ನಾಭರಣವನ್ನು ಜಫ್ತಿ ಮಾಡಲಾಗಿದೆ. ಕೈಯಲ್ಲಿ ಕೆಲಸವಿಲ್ಲದಿದ್ದರು ಶೋಕಿ ಜೀವನ ರೂಡಿಸಿಕೊಂಡಿದ್ದ ಲಕ್ಷ್ಮಣ್, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರೇಯಸಿಯನ್ನು ಪ್ರವಾಸಿ ತಾಣಗಳಿಗೆ ಸುತ್ತಾಡಿಸಲು ಮನೆಗಳಿಗೆ ಕನ್ನ

ಹೌದು, ಶೋಕಿ ಜೀವನ ರೂಢಿಸಿಕೊಂಡಿದ್ದ ಆಸಾಮಿ, ಪ್ರೇಯಸಿಯನ್ನು ಪ್ರವಾಸಿ ತಾಣಗಳಿಗೆ ಸುತ್ತಾಡಿಸಲು ಮನೆಗಳಿಗೆ ಕನ್ನ ಹಾಕುತ್ತಿದ್ದ. ಅದರಂತೆ ಜಿಗಣಿಯ ಗೋಪಾಲಸ್ವಾಮಿ ಎಂಬುವವರ ಮನೆಗೆ ಬೆಳ್ಳಂಬೆಳಗ್ಗೆ ಬಾಗಿಲು ಮುರಿದು ನುಗ್ಗಿ, ನಗನಾಣ್ಯವನ್ನು ದೋಚಿ ಪರಾರಿಯಾಗಿದ್ದ. ಹೀಗೆ ಜಿಗಣಿ, ಬನ್ನೇರುಘಟ್ಟ, ಅತ್ತಿಬೆಲೆ, ಸೂರ್ಯನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಇತನ ಮೇಲೆ ಕೇಸ್ ದಾಖಲಾಗಿತ್ತು. 23 ಮನೆಗಳವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ, ಹಲವು ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದ. ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಕಳುಹಿಸಿದ್ದಾರೆ.

ಇದನ್ನೂ ಓದಿ:ಒಂದೇ ಗ್ರಾಮದಲ್ಲಿ ಸರಣಿ ಮನೆಗಳ್ಳತನಕ್ಕೆ ಬೆಚ್ಚಿಬಿದ್ದ ಜನತೆ; ಗ್ರಾಮದ ಸುತ್ತಲೂ ಕೊಲಿಡಿದು ನಿಂತ ಯುವಕರು

ಲಕ್ಷಾಂತರ ಮೌಲ್ಯದ ಕುರಿಗಳ ಕಳ್ಳತನ

ಕೋಲಾರ: ಮಾಲೂರಿನ ತಾಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೊಟ್ಟಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ 11 ಕುರಿಗಳು ಕಳ್ಳತನವಾಗಿದೆ. ನಾರಾಯಣಪ್ಪ ಎಂಬುವರಿಗೆ ಸೇರಿದ ಕುರಿಗಳು ಇದಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ. ಇನ್ನು ತಿಂಗಳ ಹಿಂದೆ ಪಕ್ಕದ ಗ್ರಾಮದಲ್ಲಿ ಕೂಡ ಕಳ್ಳತನವಾಗಿತ್ತು. ಆದರೂ ಪೊಲೀಸರು ಎಚ್ಚೆತ್ತುಕೊಳ್ಳಲಿಲ್ಲ. ಜೊತೆಗೆ ರಾತ್ರಿ ಪಾಳಿ ಪೊಲೀಸರ ಗಸ್ತು ತಿರುಗುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಘಟನೆ ಮಾಸ್ತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Thu, 5 September 24