AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಯುವಪಥದಲ್ಲಿ ಜು.3 ರ ತನಕ ಚಿತ್ರಕಲಾ ಪ್ರದರ್ಶನ; ಚಿತ್ರಕಲೆಯಲ್ಲಿ ಕಲಾವಿದನ ನೈಜತೆ ಮುಖ್ಯ: ಸುಬ್ರಹ್ಮಣ್ಯಂ

ಚಿತ್ರಕಲೆಗಳಿಗೆ ತನ್ನದೇ ಆದ ನೈಜವಾದ ಶ್ರೀಮಂತ ಪರಂಪರೆ ಇದ್ದು, ಅದನ್ನು ಅಧ್ಯಯನಶೀಲವಾಗಿ ನೋಡುವ ಮನಸ್ಥಿತಿ ಬಹಳ ಮುಖ್ಯವಾಗಿದೆ ಎಂದು ಕಲಾ ವಿಮರ್ಶಕ ಸುಬ್ರಹ್ಮಣ್ಯಂ ವೇಣುಗೋಪಾಲ್ ಕೆ ಅವರು ಹೇಳಿದ್ದಾರೆ. ಜಯನಗರದ ಯುವಪಥದಲ್ಲಿ ಸಂಸ್ಕಾರ ಭಾರತಿ ಮತ್ತು ಹೊಯ್ಸಳ ಚಿತ್ರಕಲಾ ಪರಿಷತ್ ಏರ್ಪಡಿಸಿದ್ದ ಹೊಯ್ಸಳ ಕುಂಚ ಕಲಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಚಿತ್ರಕಲೆ ಹೀಗೆ ಎಂದು ವ್ಯಾಖ್ಯಾನ ನೀಡುವುದು ಸರಿಯಾದದ್ದು ಅಲ್ಲ. ಒಬ್ಬೊಬ್ಬರು ಒಂದೊಂದು ದೃಷ್ಟಿಯಲ್ಲಿ ಅದನ್ನು ನೋಡುವ ನೈಜತೆಯನ್ನು ಸದಾ ನಾವು ಉಳಿಸಿಕೊಳ್ಳಬೇಕು ಎಂದರು.

ಬೆಂಗಳೂರು: ಯುವಪಥದಲ್ಲಿ ಜು.3 ರ ತನಕ ಚಿತ್ರಕಲಾ ಪ್ರದರ್ಶನ; ಚಿತ್ರಕಲೆಯಲ್ಲಿ ಕಲಾವಿದನ ನೈಜತೆ ಮುಖ್ಯ: ಸುಬ್ರಹ್ಮಣ್ಯಂ
ಯುವಪಥದಲ್ಲಿ ಜು.3 ರ ತನಕ ಚಿತ್ರಕಲಾ ಪ್ರದರ್ಶನ
ಕಿರಣ್ ಹನುಮಂತ್​ ಮಾದಾರ್
|

Updated on:Jun 15, 2024 | 9:00 PM

Share

ಬೆಂಗಳೂರು, ಜೂ.15: ಚಿತ್ರಕಲೆಗಳಿಗೆ ತನ್ನದೇ ಆದ ನೈಜವಾದ ಶ್ರೀಮಂತ ಪರಂಪರೆ ಇದ್ದು, ಅದನ್ನು ಅಧ್ಯಯನಶೀಲವಾಗಿ ನೋಡುವ ಮನಸ್ಥಿತಿ ಬಹಳ ಮುಖ್ಯವಾಗಿದೆ ಎಂದು ಕಲಾ ವಿಮರ್ಶಕ ಸುಬ್ರಹ್ಮಣ್ಯಂ ವೇಣುಗೋಪಾಲ್ ಕೆ ಅವರು ಹೇಳಿದ್ದಾರೆ. ಜಯನಗರದ ಯುವಪಥದಲ್ಲಿ ಸಂಸ್ಕಾರ ಭಾರತಿ ಮತ್ತು ಹೊಯ್ಸಳ ಚಿತ್ರಕಲಾ ಪರಿಷತ್ ಏರ್ಪಡಿಸಿದ್ದ ಹೊಯ್ಸಳ ಕುಂಚ ಕಲಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಚಿತ್ರಕಲೆ ಹೀಗೆ ಎಂದು ವ್ಯಾಖ್ಯಾನ ನೀಡುವುದು ಸರಿಯಾದದ್ದು ಅಲ್ಲ. ಒಬ್ಬೊಬ್ಬರು ಒಂದೊಂದು ದೃಷ್ಟಿಯಲ್ಲಿ ಅದನ್ನು ನೋಡುವ ನೈಜತೆಯನ್ನು ಸದಾ ನಾವು ಉಳಿಸಿಕೊಳ್ಳಬೇಕು. ಚಿತ್ರಕಲೆ ರಚನೆಯಾದ ಮೇಲೆ ಅದನ್ನು ಹಾಗೆ ಬಿಡಬೇಕು. ಅಭಿಪ್ರಾಯಗಳನ್ನು ಆದರಿಸಿ ಮಾರ್ಪಾಡು ಮಾಡಲು ಹೋಗಬಾರದು ಎಂದರು.

ಇತ್ತೀಚಿನ ತಲೆಮಾರಿನ ಚಿತ್ರ ಕಲಾವಿದರು ವಾಸ್ತವತೆ ಅರ್ಥ ಮಾಡಿಕೊಂಡು ಈ ಕ್ಷೇತ್ರದಲ್ಲಿ ಮುಂದುವರಿಯುವ ಚಿಂತನೆ ಮಾಡಬೇಕು. ಯಾವಾಗಲೂ ಬದುಕು ನಮಗೆ ಬಹಳ ಮುಖ್ಯ. ಅದರ ಜೊತೆಗೆ ಚಿತ್ರಕಲೆ ಹವ್ಯಾಸಿ ವೃತ್ತಿಯಾಗಿ ಅಳವಡಿಸಿಕೊಳ್ಳುವುದು ಸೂಕ್ತ ಎಂದರು. ಇದೇ ವೇಳೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪ್ರತಿಯೊಬ್ಬರಿಗೂ ಪ್ರತಿಭೆ ಇರುತ್ತದೆ. ಅವರವರ ಕುಂಚದಲ್ಲಿ ಅರಳಿರುವ ಚಿತ್ರಕಲೆಗೆ ಬೆಲೆ ಕಟ್ಟಲು ಆಗದು. ಸಮಾಜಕ್ಕೆ ಮುಖಾ ಮುಖಿಯಾಗುವ ಚಿತ್ರಕಲೆಯನ್ನು ರಚಿಸುವಂತೆ ಸಲಹೆ ನೀಡಿದರು.

ಇದನ್ನೂ ಓದಿ:ವಾಹನದ ಹಿಂದೆ ಅಂಟಿಕೊಂಡಿದ್ದ ಧೂಳಿನಲ್ಲಿ ಮೂಡಿದ ಅದ್ಭುತ ಚಿತ್ರಕಲೆ! ಕಲಾವಿದನ ಕೈ ಚಳಕಕ್ಕೆ ತಲೆ ಬಾಗಲೇಬೇಕು

ಇತಿಹಾಸದ ಕಾಲಘಟ್ಟದಿಂದಲೂ ಚಿತ್ರಕಲೆಗೆ ಮಹತ್ವದೆ ಇದೆ. ಅವರ ಭಾವನೆಗಳು ಮತ್ತು ಕಲ್ಪನೆಗಳನ್ನು ಕುಂಚದ ಮೂಲಕ ವಿನ್ಯಾಸಗೊಳಿಸಲು, ವಾಸ್ತವತೆಗೆ ಕನ್ನಡಿ ಹಿಡಿಯಲು ಚಿತ್ರಕಲೆಗೆ ಸಾದ್ಯವಿದೆ. ಈ ನಿಟ್ಟಿನಲ್ಲಿ ವೃತ್ತಿಪರತೆಯಿಂದ ಕಲಾವಿದರು ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು. ಸಂಸ್ಕಾರ ಭಾರತಿಯ ಆನೂರು ಅನಂತಕೃಷ್ಣಶರ್ಮ ಮಾತನಾಡಿ, ಸೂಕ್ಷ್ಮ ಮನಸ್ಸಿದ್ದವರು ಸಂಗೀತಕಾರರು, ಕಲಾವಿದರು ಆಗಲು ಸಾಧ್ಯ. ನಿಮ್ಮಗಳ ಪ್ರತಿಭೆ ಅನಾವರಣಗೊಳ್ಳಲು ಇಂಥ ವೇದಿಕೆಗಳು ನೆರವಾಗುತ್ತವೆ ಎಂದರು.

ಚಿತ್ರಕಲಾ ಪ್ರದರ್ಶನ ಜುಲೈ 3 ತನಕ ಪ್ರತಿ ದಿನ 11 ಗಂಟೆಗೆ ವೀಕ್ಷಣೆಗೆ ಲಭ್ಯ

ಡಿಎಸ್‌ಸಿಆರ್‌ಟಿ ಉಪ ನಿರ್ದೇಶಕ ಡಾ.ಎಂ.ಎನ್.ಕಟ್ಟಿ ಮಾತನಾಡಿ, ಚಿತ್ರಕಲಾವಿದರು ಎಂದರೆ ಹಿಂದಿನ ಕಾಲದಲ್ಲಿದ್ದ ಭಾವನೆಗಳೇ ಬೇರೆ. ಇಂದಿನ ಭಾವನೆಗಳೇ ಬೇರೆ. ಈಗ ಹೆಚ್ಚು ಅವಕಾಶಗಳು ಲಭ್ಯವಾಗುತ್ತಿವೆ ಎಂದರು. ಹೊಯ್ಸಳ ಚಿತ್ರಕಲಾ ಪರಿಷತ್ ಸಂಯೋಜಕ ಕೆ.ಎನ್.ಶಂಕರಪ್ಪ ಮಾತನಾಡಿ, ಹಾಸನದ ಚಿತ್ರಕಲಾವಿದರನ್ನು ಒಟ್ಟು ಮಾಡಿ ಬೆಂಗಳೂರಿನಲ್ಲಿ ಚಿತ್ರಕಲಾ ಪ್ರದರ್ಶನ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ವೇದಿಕೆ ಮೂಲಕ ಪ್ರತಿಭೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದರು. ಚಿತ್ರಕಲಾ ಪ್ರದರ್ಶನ ಜುಲೈ 3 ತನಕ ಪ್ರತಿ ದಿನ 11 ಗಂಟೆಗೆ ವೀಕ್ಷಣೆಗೆ ಲಭ್ಯವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Sat, 15 June 24

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!