AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹೆಚ್ಚಾಗಿದೆ ಬೀದಿ ನಾಯಿಗಳ ಹಾವಳಿ! ಒಂದೇ ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ಅಟ್ಯಾಕ್

ಒಂದೇ ತಿಂಗಳಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ನಾಯಿಗಳು ಅಟ್ಯಾಕ್ ಮಾಡಿವೆ. 2020ರಿಂದ ಇಲ್ಲಿಯವರೆಗೆ 52 ಸಾವಿರಕ್ಕೂ ಹೆಚ್ಚು ಜನರಿಗೆ ಶ್ವಾನಗಳು ಕಚ್ಚಿವೆ.

ಬೆಂಗಳೂರಿನಲ್ಲಿ ಹೆಚ್ಚಾಗಿದೆ ಬೀದಿ ನಾಯಿಗಳ ಹಾವಳಿ! ಒಂದೇ ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ಅಟ್ಯಾಕ್
ಸಾಂದರ್ಭಿಕ ಚಿತ್ರ
TV9 Web
| Updated By: sandhya thejappa|

Updated on:Jul 24, 2022 | 10:11 AM

Share

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ (Street Dogs) ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ (Roads) ಓಡಾಡುವವರ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಕೆಲ ನಗರಗಳಲ್ಲಂತೂ ಜನರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುವಂತಾಗಿದೆ. ಪ್ರತಿದಿನ 70 ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಇನ್ನೂ ಒಂದೇ ತಿಂಗಳಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ನಾಯಿಗಳು ಅಟ್ಯಾಕ್ ಮಾಡಿವೆ. 2020ರಿಂದ ಇಲ್ಲಿಯವರೆಗೆ 52 ಸಾವಿರಕ್ಕೂ ಹೆಚ್ಚು ಜನರಿಗೆ ಶ್ವಾನಗಳು ಕಚ್ಚಿವೆ. 2020 ಫೆಬ್ರವರಿಯಲ್ಲಿ ನಾಯಿ ಕಡಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದರು.

ಬಿಬಿಎಂಪಿ ಲೆಕ್ಕಾಚಾರದ ಪ್ರಕಾರ ನಗರದಲ್ಲಿ ಸುಮಾರು 3 ಲಕ್ಷ ಬೀದಿ ನಾಯಿಗಳಿವೆ. ಜನವರಿಯಲ್ಲಿ ಸುಮಾರು 1,677 ಜನರ ಮೇಲೆ ನಾಯಿಗಳು ದಾಳಿ ನಡೆಸಿವೆ. ಫೆಬ್ರವರಿಯಲ್ಲಿ 1,135, ಮಾರ್ಚ್ನಲ್ಲಿ 1,800, ಏಪ್ರಿಲ್ನಲ್ಲಿ 1,677, ಮೇ ತಿಂಗಳಿನಲ್ಲಿ 1,841, ಜೂನ್ನಲ್ಲಿ 1,140 ಹಾಗೂ ಜುಲೈನಲ್ಲಿ 483 ಜನರ ಮೇಲೆ ಶ್ವಾನಗಳು ಅಟ್ಯಾಕ್ ಮಾಡಿವೆ.

ಇದನ್ನೂ ಓದಿ: ಗಾಂಜಾ ಮತ್ತಲ್ಲಿ ದರೋಡೆ: ರಾಬರಿ‌ ಮಾಡಿದ ಹಣದಲ್ಲಿ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ಪ್ರಾಯಶ್ಚಿತ

ಇದನ್ನೂ ಓದಿ
Image
Dinosaur: ರೆಸ್ಟೋರೆಂಟ್​ಗೆ ಹೋಗಿದ್ದು ಊಟಕ್ಕೆ, ನೋಡಿದ್ದು ಜಗತ್ತಿನ ಅತಿದೊಡ್ಡ ಪ್ರಾಣಿ ಡೈನೋಸಾರ್ ಹೆಜ್ಜೆ ಗುರುತು!
Image
ಜಮೀರ್ vs ಡಿಕೆಶಿ: ಒಕ್ಕಲಿಗ ಸಮುದಾಯದ ಬಗ್ಗೆ ಜಮೀರ್ ಅಹಮದ್ ಹೇಳಿಕೆಗೆ ಆದಿಚುಂಚನಗಿರಿ ಶ್ರೀಗಳಿಂದ ತೀವ್ರ ಆಕ್ಷೇಪ
Image
ತುಮಕೂರಿನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಇಬ್ಬರು ಶಾಸಕರ ಬೆಂಬಲಿಗರ ನಡುವೆ ಗಲಾಟೆ!
Image
Monsoon Diet: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳಿವು

ಬೀದಿ ನಾಯಿ ಕಡಿತದ ವಲಯವಾರು ವಿವರ ಹೀಗಿದೆ:

* ಬೊಮ್ಮನಹಳ್ಳಿ: 309 (2020), 182 (2021), 51 (2022).

* ದಾಸರಹಳ್ಳಿ: 10 (2020), 18 (2021), 1 (2022).

* ಪೂರ್ವ: 9,312 (2020), 6,006 (2021), 3,271 (2022).

* ಮಹದೇವಪುರ: 508 (2020), 434 (2021), 387 (2022).

* ಆರ್.ಆರ್ ನಗರ: 412 (2020), 316 (2021), 136 (2022).

* ದಕ್ಷಿಣ: 8,519 (2020), 6,949 (2021), 3,441 (2022).

* ಪಶ್ಚಿಮ: 5,710 (2020), 2,770 (2021), 2,240 (2022).

* ಯಲಹಂಕ: 240 (2020), 650 (2021), 390 (2022).

ಇದನ್ನೂ ಓದಿ: Tecno Spark 9: 11GB RAM ಇರುವ ಹೊಸ ಟೆಕ್ನೋ ಸ್ಪಾರ್ಕ್ 9 ಫೋನ್​ ಕೇವಲ 9,499 ರೂ. ಮಾರಾಟ

ಹೈಕೋರ್ಟ್​ ಆದೇಶವೇನು?: ಬೀದಿ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯವೆಂದು ಹೈಕೋರ್ಟ್ ಈಗಾಗಲೇ ಆದೇಶ ನೀಡಿದೆ. 2018ರ ನವೆಂಬರ್​ 29ರಂದು ಬೀದಿನಾಯಿ ದಾಳಿಯಿಂದ ಯೂಸುಬ್ ಎಂಬುವರ 22 ತಿಂಗಳ ಮಗು ಸಾವನ್ನಪ್ಪಿತ್ತು. ಈ ಸಂಬಂಧ ತೀರ್ಪು ನೀಡಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಮೃತ ಮಗುವಿನ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ನೀಡಬೇಕು. ಮತ್ತು 20 ಸಾವಿರ ಕಾನೂನು ಹೋರಾಟದ ವೆಚ್ಚ ಭರಿಸುವಂತೆ ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಇದನ್ನೂ ಓದಿ: ಶಾಸಕರ ಸಖತ್ ಸ್ಟೆಪ್: ತಮಟೆ ಸದ್ದಿಗೆ ಮೈ ಚಳಿ ಬಿಟ್ಟು ಕುಣಿದ ಶಾಸಕ ಎಂ.ಪಿ ರೇಣುಕಾಚಾರ್ಯ

Published On - 10:04 am, Sun, 24 July 22