ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನ ಮುನೇನಕೊಳಲು ರೈಲ್ವೆ ಕ್ರಾಸಿಂಗ್ ಬಳಿ ರೈಲಿಗೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಸಂಚಾರ ದಟ್ಟಣೆಯ ಪರಿಣಾಮ ರೈಲು ಪ್ರಯಾಣದ ಮೇಲೂ ಬೀರಿದೆ ಎಂಬ ಸುದ್ದಿಗಳ ಜತೆಗೆ ವಿಡಿಯೋ ಕೂಡ ವೈರಲ್ ಆಗಿ ದೊಡ್ಡ ಸದ್ದು ಮಾಡಿತ್ತು. ಈ ಬಗ್ಗೆ ಇದೀಗ ರೈಲ್ವೆ ಇಲಾಖೆ ಮತ್ತು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ರೈಲ್ವೆ ಇಲಾಖೆ ಮತ್ತು ಪೊಲೀಸರು ಹೇಳಿರುವ ಪ್ರಕಾರ, ಸಂಚಾರ ದಟ್ಟಣೆಯಿಂದ ರೈಲು ನಿಂತಿದೆ ಎಂಬುದು ಸುಳ್ಳು ಸುದ್ದಿಯಾಗಿದೆ. ರೇಕ್ ಪರಿಶೀಲನೆಗಾಗಿ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದರು. ಈ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರಿಗೆ ತೊಂದರೆ ಆಗಬಾರದೆಂದು ರೈಲ್ವೆ ಗೇಟ್ ಓಪನ್ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಅದರ ಬದಲಾಗಿ, ಟ್ರಾಫಿಕ್ ಜಾಮ್ನಿಂದಾಗಿ ರೈಲು ನಿಂತಿರುವುದಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
‘ನಾನು ಅಥವಾ ನೀವು ಮಾತ್ರವಲ್ಲ, ಬೆಂಗಳೂರು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ರೈಲುಗಳಿಗೂ ಸಾಧ್ಯವಾಗುತ್ತಿಲ್ಲ’ ಎಂಬ ಶೀರ್ಷಿಕೆಯೊಂದಿಗೆ ರೈಲ್ವೆ ಕ್ರಾಸಿಂಗ್ ಬಳಿ ಸಂಚಾರ ದಟ್ಟಣ ಇರುವ ಮತ್ತು ರೈಲು ನಿಂತಿರುವ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಸುಧೀರ್ ಚಕ್ರವರ್ತಿ (sudhirchakravarthi4142) ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.
ಇದನ್ನೂ ಓದಿ: ಈ ಬೆಂಗ್ಳೂರು ಟ್ರಾಫಿಕ್ ಜಾಮ್‌ನಿಂದ ಟ್ರೈನ್‌ಗೂ ಕೂಡಾ ತಪ್ಪಿಸಿಕೊಳ್ಳೋಕೆ ಆಗ್ಲಿಲ್ಲ ನೋಡಿ
ವೈರಲ್ ಆದ ಈ ವಿಡಿಯೋದಲ್ಲಿ ಕಾಣಿಸಿದ್ದು, ಮಾರತಹಳ್ಳಿ ಸಮೀಪದ ಮುನೇನಕೊಳಲು ರೈಲ್ವೆ ಕ್ರಾಸಿಂಗ್ ಬಳಿಯ ವಿಡಿಯೋ ಆಗಿತ್ತು. ಮೇಲ್ನೋಟಕ್ಕೆ ರೈಲ್ವೆ ಕ್ರಾಸಿಂಗ್ನಲ್ಲಿ ಸಂಚಾರ ದಟ್ಟಣೆಯ ಕಾರಣ ರೈಲು ನಿಂತಿರುವಂತೆ ಕಾಣಿಸುತ್ತಿರುದು ನಿಜ. ಆದರೆ, ಅಸಲಿ ಸತ್ಯ ಈಗ ಬಯಲಾಗಿದೆ.
ವರದಿ: ಪ್ರದೀಪ್ ‘ಟಿವಿ9’
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ