ಇನ್ಫೋಸಿಸ್​ನ ಹಿರಿಯ ಅಧಿಕಾರಿಗಳಂತೆ ನಟಿಸಿ 6 ಕೋಟಿ ರೂ. ಪಂಗನಾಮ! ನಾಲ್ವರ ಮೇಲೆ ಎಫ್ಐಆರ್

ಬೆಂಗಳೂರಿನಲ್ಲಿ ಇನ್ಫೋಸಿಸ್ ಹಿರಿಯ ಅಧಿಕಾರಿಗಳ ಸೋಗಿನಲ್ಲಿ 6.3 ಕೋಟಿ ರೂ. ವಂಚನೆ ನಡೆದಿದೆ. ಮೈಸೂರು ಮರ್ಕಂಟೈಲ್ ಕಂಪನಿಗೆ ಸಿಎಸ್‌ಆರ್ ಅನುದಾನದ ಭರವಸೆ ನೀಡಿ ಆರೋಪಿಗಳು ನಕಲಿ ಪರಿಶೀಲನೆ, ಅರ್ನೆಸ್ಟ್ ಮನಿ ಡೆಪಾಸಿಟ್ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ಫೋಸಿಸ್​ನ ಹಿರಿಯ ಅಧಿಕಾರಿಗಳಂತೆ ನಟಿಸಿ 6 ಕೋಟಿ ರೂ. ಪಂಗನಾಮ! ನಾಲ್ವರ ಮೇಲೆ ಎಫ್ಐಆರ್
ಇನ್ಫೋಸಿಸ್​ನ ಹಿರಿಯ ಅಧಿಕಾರಿಗಳಂತೆ ನಟಿಸಿ 6 ಕೋಟಿ ರೂ. ಪಂಗನಾಮ!
Edited By:

Updated on: Apr 03, 2026 | 2:48 PM

ಬೆಂಗಳೂರು, ಏಪ್ರಿಲ್ 03: ಇನ್ಫೋಸಿಸ್ (Infosys) ಸಂಸ್ಥೆಯ ಹಿರಿಯ ಅಧಿಕಾರಿಗಳಂತೆ ನಟನೆ ಮಾಡಿ 6.3 ಕೋಟಿ ರೂ. ವಂಚನೆ ನಡೆಸಿದ ಆರೋಪ ಕೇಳಿ ಬಂದಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೈಸೂರು ಮರ್ಕಂಟೈಲ್ ಕಂಪನಿ ನೀಡಿದ ದೂರಿನ ಪ್ರಕಾರ, ಗಗನ್ ಎಂಬಾತ ಇನ್ಫೋಸಿಸ್ ಸಂಸ್ಥೆಯ CSR ಪ್ರಾದೇಶಿಕ ಮುಖ್ಯಸ್ಥನಾಗಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ನಂಬಿಕೆ ಗಳಿಸಲು ನಕಲಿ ತಂಡ ರಚಿಸಿ ಪರಿಶೀಲನೆ!

ತಾನು ಹಿರಿಯ ಅಧಿಕಾರಿಗಳಾದ ನಿಲಾದ್ರಿ ಪ್ರಸಾದ್ ಮಿಶ್ರಾ ಹಾಗೂ ಹರ್ಷ್ ಜೆ ಅವರಿಗೆ ನೇರವಾಗಿ ವರದಿ ಮಾಡುತ್ತೇನೆ ಎಂದು ನಂಬಿಕೆ ಮೂಡಿಸಿದ್ದ ಆರೋಪಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ಗೆ ಭಾರೀ ಅನುದಾನ ನೀಡುವುದಾಗಿ ಹೇಳಿ ವಿಶ್ವಾಸ ಗಳಿಸಿದ್ದ.

ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸಲು ಆರೋಪಿಗಳು ಉಡುಪಿ ಮತ್ತು ಮಂಗಳೂರು ಭಾಗಗಳಿಗೆ ನಕಲಿ ಪರಿಶೀಲನಾ ತಂಡವನ್ನು ಕಳುಹಿಸಿ, ಟ್ರಸ್ಟ್ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಅನುದಾನ ಬಿಡುಗಡೆಗಿಂತ ಮೊದಲು ಅರ್ನೆಸ್ಟ್ ಮನಿ ಡೆಪಾಸಿಟ್ (EMD) ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ.

ಒಟ್ಟೂ 6 ಕೋಟಿ ವಂಚನೆ

ಇದನ್ನು ನಂಬಿದ ಕಂಪನಿ 1.75 ಕೋಟಿ ರೂ. ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅನಿತಾ ವೆಂಚರ್ಸ್‌ಗೆ, 3.75 ಕೋಟಿ ರೂ. ANS ಎಂಜಿನಿಯರಿಂಗ್ಸ್‌ಗೆ ಪಾವತಿಸಿದೆ. ಅಲ್ಲದೆ ದೇವನಹಳ್ಳಿಯ ನಂದಿ ಉಪಚಾರ ಹೋಟೆಲ್ ಸಮೀಪ ಆರೋಪಿಯ ಚಾಲಕನಿಗೆ 30 ಲಕ್ಷ ರೂ ನಗದನ್ನೂ ನೀಡಲಾಗಿದೆ. ಇನ್ನೂ 50 ಲಕ್ಷ ರೂ. ಹಣವನ್ನು ಬ್ಯಾಂಕ್ ಮುಖಾಂತರ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ ಕಬ್ಬನ್ ಪಾರ್ಕ್​​ನಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಆತ್ಮಹತ್ಯೆ! ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ವಂಚನೆಯನ್ನು ಮುಂದುವರೆಸಲು ಆರೋಪಿಗಳು ಕಳೆದ ಅಕ್ಟೋಬರ್ 21ರಂದು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷರ ಸಹಿಯನ್ನು ಹೊಂದಿರುವ ನಕಲಿ ಮಂಜೂರಾತಿ ಪತ್ರವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕರ್ನಾಟಕದಾದ್ಯಂತ ವಸತಿ ಯೋಜನೆಗಳಿಗೆ 179 ಕೋಟಿ ರೂ. ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 178 ಕೋಟಿ ರೂ. ನೀಡುವ ಭರವಸೆ ನೀಡಿದ್ದರು. ಆದರೆ ಅನುದಾನ ಹಣ ಬರದೇ ಹೋದಾಗ ಹಾಗೂ ಗಗನ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ವಂಚನೆ ಬೆಳಕಿಗೆ ಬಂದಿದೆ. ನಂತರ ಕಂಪನಿ ಪೊಲೀಸರಿಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಹಣದ ಹರಿವು ಕುರಿತು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us