AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಯ್ಲೆಟ್‌ನಲ್ಲಿ ಮಹಿಳಾ ಸಹದ್ಯೋಗಿಗಳ ವೀಡಿಯೊ ರೆಕಾರ್ಡ್: ಸಿಕ್ಕಿಬಿದ್ದ ಇನ್ಫೋಸಿಸ್ ಟೆಕ್ಕಿ..

ಸಾಪ್ಟ್ ವೇರ್ ಕ್ಷೇತ್ರದಲ್ಲಿ ದೇಶದಲ್ಲಿಯೇ ದಿಗ್ಗಜ ಸಂಸ್ಥೆ ಅಂದ್ರೆ ಅದು ಇನ್ಫೋಸಿಸ್. ಇಂತಹ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ನೀಚ ಕೆಲಸ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಓರ್ವ ಉದ್ಯೋಗಿ ರಹಸ್ಯವಾಗಿ ಮಹಿಳಾ ಸಹೋದ್ಯೋಗಿ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಲು ಹೋಗಿ ಸಿಕ್ಕಿಬಿದ್ದು, ತನಿಖೆ ವೇಳೆ ಉದ್ಯೋಗಿ ಮೊಬೈಲ್​ ನಲ್ಲಿ ಸುಮಾರು 30ಕ್ಕೂ ಅಧಿಕ ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ. ಇದನ್ನು ನೋಡಿ ಪೊಲೀಸರು, ಸಂಸ್ಥೆಯ ಸಿಬ್ಬಂದಿ ಹೌಹಾರಿದ್ದಾರೆ.

ಟಾಯ್ಲೆಟ್‌ನಲ್ಲಿ ಮಹಿಳಾ ಸಹದ್ಯೋಗಿಗಳ ವೀಡಿಯೊ ರೆಕಾರ್ಡ್: ಸಿಕ್ಕಿಬಿದ್ದ ಇನ್ಫೋಸಿಸ್ ಟೆಕ್ಕಿ..
ಸ್ವಪ್ನಿಲ್ ನಾಗೇಶ್ ಮಲಿ
ರಾಮು, ಆನೇಕಲ್​
| Edited By: |

Updated on:Jul 02, 2025 | 7:10 PM

Share

ಬೆಂಗಳೂರು, (ಜುಲೈ 02): ಟಾಯ್ಲೆಟ್ ನಲ್ಲಿ ಕದ್ದುಮುಚ್ಚಿ ಮಹಿಳೆಯರ ವಿಡಿಯೋ ರೆಕಾರ್ಡ್ (Filming Female Colleague)  ಮಾಡುತ್ತಿದ್ದ ಇನ್ಫೋಸಿಸ್ ಉದ್ಯೋಗಿಯೋರ್ವ (Infosys Employee) ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸ್ವಪ್ನಿಲ್ ನಾಗೇಶ್ ಮಲಿ (28) ಬಂಧಿತ ಉದ್ಯೋಗಿ. ಬೆಂಗಳೂರಿನ (Bengaluru) ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಹೀಲೆಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸ್ವಪ್ನಿಲ್, ಜೂನ್ 30ರಂದು ಮಹಿಳಾ ಉದ್ಯೋಗಿ ಶೌಚಾಲಯಕ್ಕೆ ಹೋಗಿದ್ದಾಗ ಕದ್ದು ವಿಡಿಯೋ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮಹಿಳೆ ಕೊಟ್ಟ ದೂರಿನ ಮೇರೆಗೆ ಸದ್ಯ ಪೊಲೀಸರು ಸ್ವಪ್ನಿಲ್​ ನನ್ಜು ಬಂಧಿಸಿದ್ದು, ತನಿಖೆ ವೇಳೆ ಈತನ ಮೊಬೈಲ್​ ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ.

30ಕ್ಕೂ ಹೆಚ್ಚು ವಿಡಿಯೋಗಳು ಪತ್ತೆ

ಜೂನ್ 30ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಿಳೆ ಮೂತ್ರ ವಿಸರ್ಜನೆಗೆ ಟಾಯ್ಲೆಟ್ ಹೋಗಿದ್ದಾಳೆ. ಮೇಲಿಂದ ಯಾರೋ ರೆಕಾರ್ಡ್ ಮಾಡುತ್ತಿರುವ ರೀತಿ ಎದುರಿನ‌ ಡೋರ್ ನಲ್ಲಿ ಪ್ರತಿಬಿಂಬ ಕಂಡಿದೆ. ಎಚ್ಚೆತ್ತ ಮಹಿಳೆ ಹೊರಗೆ ಬಂದು ನೋಡಿದ್ದಾಳೆ. ಓರ್ವ ಯುವತಿ ಮಾತ್ರ ಕಂಡಿದ್ದಾಳೆ. ಇನ್ನೂ ಅನುಮಾನ ಪರಿಹರಿಸಿಕೊಳ್ಳಲು ಮತ್ತೆ ಟಾಯ್ಲೆಟ್ ಹೋಗೆ ಕೆಲ ಹೊತ್ತು ಮಹಿಳೆ ಕಾದಿದ್ದಾಳೆ. ಅಷ್ಟೊತ್ತಿಗೆ ಆರೋಪಿ ಪ್ಯಾಂಟ್ ಬಿಚ್ಚಿ ಕಮೊಡ್ ಮೇಲೆ ನಿಂತು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡಿದ್ದು, ಕೂಡಲೇ ಆ ಮಹಿಳೆ ಜೋರಾಗಿ ಕಿರುಚಾಡಿದಾಗ, ಭಯಭೀತನಾದ ಸ್ವಪ್ನಿಲ್ ಆಕೆಯ ಬಳಿ ಕ್ಷಮೆ ಕೇಳಿದ್ದಾನೆ. ಅಷ್ಟರೊಳಗೆ ಘಟನಾ ಸ್ಥಳಕ್ಕೆ ಎಚ್‌ಆರ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮೊಬೈಲ್‌ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಇರುವುದು ಪತ್ತೆಯಾಗಿದೆ. ಇದನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲೊಬ್ಬ ಕಾಮುಕ ಡೆಲೇವರಿ ಬಾಯ್​: ಆರ್ಡರ್ ಮಾಡಿದ ಮಹಿಳೆಯರ ನಂಬರ್ ಗೆ ಅಶ್ಲೀಲ ಸಂದೇಶ ರವಾನೆ

ವಿಚಾರ ತಿಳಿಯುತ್ತಿದ್ದಂತೆ ಸಂಸ್ಥೆಯ ಆಡಳಿತ ಮಂಡಳಿ ಮುಜುಗರದ ನೆಪದಲ್ಲಿ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದು, ಕೇವಲ ಕ್ಷಮೆ ಕೇಳಿಸಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನಲಾಗಿದೆ. ಆದ್ರೆ ನೊಂದ ಮಹಿಳೆ ಪತಿಗೆ ವಿಚಾರ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಮಹಿಳೆಯ ಪತಿ, ಪ್ರತಿಷ್ಠಿತ ಸಂಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಇಷ್ಟೇನಾ ರಕ್ಷಣೆ ಎಂದು ಕ್ಯಾಂಪಸ್ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು ಇಲ್ಲದಿದ್ದರೆ ಬೇರೆ ಹೆಣ್ಣು ಮಕ್ಕಳಿಗೆ ಇದೇ ರೀತಿ ಕಿರುಕುಳ ನೀಡುತ್ತಾನೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಡಿಸಿಪಿ ಸಾರಾ ಫಾತಿಮಾ ಹೇಳಿದ್ದಿಷ್ಟು

ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಪ್ರತಿಕ್ರಿಯಿಸಿದ್ದು, ನಿನ್ನೆ (ಜುಲೈ 01) ಸಂಜೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮಹಿಳೆ ವಾಶ್ ರೂಂಗೆ ಹೋದಾಗ ಒಬ್ಬ ವ್ಯಕ್ತಿ ಪಕ್ಕದ ವಾಶ್​ ರೂಂನಿಂದ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಎಂದು ದೂರು ನೀಡಿದ್ದು, ಸದ್ಯ ವಿಡಿಯೋ ರೆಕಾರ್ಡ್ ಮಾಡಿದವನನ್ನು ಅರೆಸ್ಟ್ ಮಾಡಿದ್ದೇವೆ. ರೆಕಾರ್ಡ್ ಮಾಡಲು ಬಳಸಿದ್ದ ಮೊಬೈಲ್ ಎಫ್.ಎಸ್‌ಎಲ್ ಗೆ ಕಳುಹಿಸಲಾಗಿದೆ. ಆರೋಪಿ ಮಹಾರಾಷ್ಟ್ರದ ಸಾಂಗ್ಲಿಯವನು. ಮೂರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಬಿಇ ಮುಗಿಸಿ ಟೆಕ್ನಿಕಲ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Wed, 2 July 25