AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲೊಬ್ಬ ಕಾಮುಕ ಡೆಲೇವರಿ ಬಾಯ್​: ಆರ್ಡರ್ ಮಾಡಿದ ಮಹಿಳೆಯರ ನಂಬರ್​ಗೆ ಅಶ್ಲೀಲ ಸಂದೇಶ ರವಾನೆ

ನೀವೇನಾದರು ಆನಲೈನ್ ಪ್ಲಾಟ್ ಫಾರ್ಮ್​ನಲ್ಲಿ ವಸ್ತುಗಳನ್ನು ತರಿಸುತ್ತಿದ್ದರೇ, ಈ ಸ್ಟೋರಿ ಓದಲೇಬೇಕು. ಅದರಲ್ಲೂ ಮಹಿಳೆಯರು ತಮ್ಮ ಮೊಬೈಲ್ ನಂಬರ್ ಹಾಕಿ, ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದರೇ ತುಸು ಜಾಗೃತಿ ವಹಿಸುವುದು ಉತ್ತಮ. ಏಕಂದರೆ ಡೆಲೇವರಿ ಬಾಯ್ ವಸ್ತುಗಳನ್ನು ಡೆಲೇವರಿ ಮಾಡಿದ ನಂತರ, ಆರ್ಡರ್ ಮಾಡಿದ ಮಹಿಳೆಯರ ಮೊಬೈಲ್​ ನಂಬರ್​ಗಳನ್ನು ಸೇವ್​ ಮಾಡಿಕೊಂಡು, ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾನೆ.

ಹುಬ್ಬಳ್ಳಿಯಲ್ಲೊಬ್ಬ ಕಾಮುಕ ಡೆಲೇವರಿ ಬಾಯ್​: ಆರ್ಡರ್ ಮಾಡಿದ ಮಹಿಳೆಯರ ನಂಬರ್​ಗೆ ಅಶ್ಲೀಲ ಸಂದೇಶ ರವಾನೆ
ಆರೋಪಿ ರಮೇಶ್​ ರೆಡ್ಡಿ
ಸಂಜಯ್ಯಾ ಚಿಕ್ಕಮಠ
| Edited By: |

Updated on:Jul 02, 2025 | 7:08 PM

Share

ಹುಬ್ಬಳ್ಳಿ, ಜುಲೈ 02: ಆನ್​ಲೈನ್​ನಲ್ಲಿ ಆರ್ಡರ್​ ​ಮಾಡುವ ಮಹಿಳಾ ಗ್ರಾಹಕರ ಮೊಬೈಲ್ ನಂಬರ್​ಗಳನ್ನು ಸೇವ್​ ಮಾಡಿಕೊಂಡು, ಅವರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಡೆಲೇವರಿ ಬಾಯ್​ನನ್ನು ಹುಬ್ಬಳ್ಳಿಯ (Hubballi) ಗೋಕುಲ್​ ರೋಡ್​ ಠಾಣೆ ಪೊಲೀಸರು (Gokul Road Police Station) ಬಂಧಿಸಿದ್ದಾರೆ. ರಮೇಶ್ ರೆಡ್ಡಿ ಬಂಧಿತ ಆರೋಪಿ. ರಮೇಶ್​ ರೆಡ್ಡಿ ಆಗಾಗ ಕೆಲ ಕೋರಿಯರ್ ಕಂಪನಿಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದನು. ಕೋರಿಯರ್ ಕಂಪನಿಗಳು ಕೂಡಾ ತಮ್ಮ ಸಿಬ್ಬಂದಿ ರಜೆ ಇದ್ದಾಗ, ಈತನನ್ನು ಕೋರಿಯರ್ ಡೆಲೇವರಿ ಮಾಡಲು ಕಳುಹಿಸುತ್ತಿದ್ದರಂತೆ. ಆದರೆ, ಈತ ಕಂಪನಿಗಳು ಹೇಳಿದಷ್ಟು ಕೆಲಸ ಮಾಡದೆ ನೀಚ ಕೃತ್ಯ ಎಸಗಿದ್ದಾನೆ.

ಆರೋಪಿ ರಮೇಶ್ ರೆಡ್ಡಿ ಮಹಿಳಾ ಗ್ರಾಹಕರ ಮೊಬೈಲ್​ ನಂಬರ್​ಗಳನ್ನು ಸೇವ್​ ಮಾಡಿಕೊಂಡು, ಬಳಿಕ ಅವರಿಗೆ ಹಾಯ್ ಬೇಬಿ, ಐ ವಾಂಟ್ ಟು ಮೀಟ್ ಯು, ಐ ಲವ್ ಯು ಸೇರಿದಂತೆ ಅನೇಕ ಅಶ್ಲೀಲ ಮೆಸೆಜ್​ಗಳನ್ನು ಕಳುಹಿಸುತ್ತಿದ್ದನಂತೆ. ಆರೋಪಿ ರಮೇಶ್ ರೆಡ್ಡಿ ಕಾಟವನ್ನು ತಾಳಲಾರದೆ, ಅನೇಕರು ಈತನ ನಂಬರ್​ ಬ್ಲಾಕ್ ಮಾಡಿದ್ದಾರೆ. ಇನ್ನೂ ಕೆಲವರು ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ.

ಆದರೆ, ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಡಾವಣೆಯೊಂದರಲ್ಲಿ ವಾಸವಾಗಿರುವ ಇಬ್ಬರು ಮಹಿಳೆಯರು ಈತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಈತನ ಕಾಟ ವಿಪರೀತವಾದಾಗ ಈ ಇಬ್ಬರು ಮಹಿಳೆಯರು ಗೋಕುಲ್​ ರೋಡ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ರಮೇಶ್ ರೆಡ್ಡಿಯನ್ನು ಪತ್ತೆ ಮಾಡಿ ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ
Image
ಗಾಯದ ಮೇಲೆ ಬರೆ: ಸಂಕಷ್ಟದಲ್ಲಿರುವ ಧಾರವಾಡದ ರೈತರಿಗೆ ಬ್ಯಾಂಕ್​ನಿಂದ ನೋಟಿಸ್
Image
ಜು.1ರಂದು ಧಾರವಾಡದಲ್ಲಿ ಹುತಾತ್ಮ ದಿನ ಆಚರಣೆ ಆಚರಿಸುವುದ್ಯಾಕೆ?
Image
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿದ BJP
Image
ಆಷಾಢ ಏಕಾದಶಿ ಪ್ರಯುಕ್ತ ಎರಡು ವಿಶೇಷ ರೈಲು: ಇಲ್ಲಿದೆ ಸಂಚಾರ ವೇಳಾಪಟ್ಟಿ

ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿ, ಅವಳಿ ನಗರದಲ್ಲಿ ಕೊರಿಯರ್ ಸರ್ವಿಸ್​ಗೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಪೂರ್ವಾಪರ ವಿಚಾರಣೆ ಮಾಡಿ, ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಮಹಿಳೆಯರು ಕೂಡಾ ತಮ್ಮ ಮೊಬೈಲ್ ನಂಬರ್ ನೀಡುವಾಗ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನೊಂದ ಬಾಲಕಿಯರೇ ಈಕೆಯ ಟಾರ್ಗೆಟ್: ಕೆಲಸ ಕೊಡಿಸುವುದಾಗಿ ಕರೆತಂದು ಹಣಕ್ಕೆ ಮಾರಾಟ

ಪ್ರತಿನಿತ್ಯ ಸಾವಿರಾರು ಜನರು ಕೋರಿಯರ್ ಕಂಪನಿಗಳಲ್ಲಿ, ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ, ಯಾರೋ ಒಬ್ಬ ವ್ಯಕ್ತಿ ಮಾಡುವ ದುಷ್ಟ ಕೆಲಸದಿಂದ ಉಳಿದವರನ್ನು ಕೂಡ ಅನುಮಾನದಿಂದ ನೋಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಕಂಪನಿಗಳು, ಮಾಲೀಕರು, ಕೆಲಸಕ್ಕೆ ನೇಮಿಸಿಕೊಳ್ಳುವಾಗ, ಅವರ ಪೂರ್ವಪರ ತಿಳಿದು ಕೆಲಸ ನೀಡುವುದರ ಜೊತೆಗೆ ಅನೇಕ ಕಟ್ಟುನಿಟ್ಟಿನ ಸೂಚನೆಗಳನ್ನು ಕೂಡ ಸಿಬ್ಬಂದಿಗೆ ನೀಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Wed, 2 July 25

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ