AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿದ ಬಿಜೆಪಿ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ನೂತನ ಮೇಯರ್‌ ಮತ್ತು ಉಪಮೇಯರ್ ಯಾರಾಗುವರು ಎಂಬ ಬಗ್ಗೆ ಭಾರೀ ಚರ್ಚೆಯಾಗಿತ್ತು. ಈ ಸಂಬಂಧ ಕಳೆದ ಹಲವು ದಿನಗಳಿಂದ ಅವಳಿ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಇದೀಗ ಅಂತಿಮವಾಗಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಮತ್ತೊಮ್ಮೆ ಯಶಸ್ವಿಯಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿದ ಬಿಜೆಪಿ
Hubballi Dharwad Mayor
ಸಂಜಯ್ಯಾ ಚಿಕ್ಕಮಠ
| Updated By: ರಮೇಶ್ ಬಿ. ಜವಳಗೇರಾ|

Updated on: Jun 30, 2025 | 3:45 PM

Share

ಹುಬ್ಬಳ್ಳಿ, (ಜೂನ್ 30): ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ (Hubballi-Dharwad Municipal Corporation)  24ನೇ ಅವಧಿಗೆ ಮಹಾಪೌರರಾಗಿ (Mayor) 19ನೇ ವಾರ್ಡ್ ಸದಸ್ಯರಾದ ಜ್ಯೋತಿ ಪಾಟೀಲ (Jyoti Patil )ಅವರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್​ ನ ಸುವರ್ಣಾ ಕಲಕುಂಟ್ಲಾ ವಿರುದ್ಧ ಬಿಜೆಪಿಯ ಜ್ಯೋತಿ ಪಾಟೀಲ್ ಅವರು ಅತಿ ಹೆಚ್ಚು (47) ಮತಗಳನ್ನು ಪಡೆಯುವ ಮೂಲಕ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದರು. ಇನ್ನು ಪಾಲಿಕೆಯ 49ನೇ ವಾರ್ಡ್ ಸದಸ್ಯೆಯರಾದ ಸಂತೋಷ ಚವ್ಹಾಣ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಉಪಮೇಯರ್ ಆಗಿದ್ದಾರೆ. ಈ ಮೂಲಕ ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಉಪಮಹಾಪೌರ ಸ್ಥಾನಕ್ಕೆ ಮಹಾನಗರ ಪಾಲಿಕೆಯ 14ನೇ ವಾರ್ಡ್ ಸದಸ್ಯರಾದ ಶಂಭುಗೌಡ ರುದ್ರಗೌಡ ಸಾಲಮನಿ ಅವರು ಸ್ಪರ್ಧೆ ಮಾಡಿದ್ದರು. ಮಹಾಪೌರ ಸ್ಥಾನಕ್ಕೆ ಕಾಂಗ್ರೆಸ್​ ನಿಂದ ಮಹಾನಗರ ಪಾಲಿಕೆಯ 59ನೇ ವಾರ್ಡ್ ಸದಸ್ಯರಾದ ಸುವರ್ಣ ಕಲಕುಂಟ್ಲ ಹಾಗೂ 76 ನೇ ವಾರ್ಡ್​ ಸದಸ್ಯರಾದ ವಹೀದಾ ಖಾನಂ ಅಲ್ಲಾಭಕ್ಷ ಕಿತ್ತೂರು ಅವರು ಸ್ಪರ್ಧಿಸಿದ್ದರು. ಇನ್ನು ಮಹಾಪೌರ ಮತ್ತು ಉಪ ಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು. ಈ ವೇಳೆ ಬಿಜೆಪಿಗೆ ಮಹಾಪೌರ ಹಾಗೂ ಉಪಮಹಾಪೌರ ಒಲಿದಿದೆ.

ಇದನ್ನೂ ಓದಿ: ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶಕ್ಕೆ ಮೆಂತ್ಯ, ಹಸಿರು ಕಾಳು ಹೋಗಲು ಕಾರಣವೇನು, ಗಗನಯಾನಕ್ಕೂ ಧಾರವಾಡ ಕೃಷಿ ವಿವಿಗೂ ಲಿಂಕ್ ಹೇಗೆ? ಇಲ್ಲಿದೆ ವಿವರ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಗೆ ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 90 ಜನ ಮತದಾರರು ಇದ್ದು, ಇಂದಿನ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯಲ್ಲಿ 87 ಜನರು ಪಾಲ್ಗೊಂಡಿದ್ದರು. ಮೂರು ಜನ ಸದಸ್ಯರು ಗೈರು ಹಾಜರಾಗಿದ್ದರು.

ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಎಸ್.ಎಸ್.ಬಿರಾದಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ ಅವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ