ಬೆಂಗಳೂರಿನ HCG ಕ್ಯಾನ್ಸರ್ ಆಸ್ಪತ್ರೆ ವಿರುದ್ಧ ಕ್ಲಿನಿಕಲ್ ಟ್ರಯಲ್ ಆರೋಪ: ತನಿಖೆ ಆದೇಶಿಸಿದ ಸರ್ಕಾರ
ಬೆಂಗಳೂರಿನ ಪ್ರತಿಷ್ಠಿತ HCG ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಅಕ್ರಮಗಳು ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ (CDSCO) ತನಿಖೆಗೆ ತಂಡ ರಚಿಸಿದೆ. ಆಸ್ಪತ್ರೆಯ ನೈತಿಕ ಸಮಿತಿಯ ಮುಖ್ಯಸ್ಥರ ಆರೋಪ ಮತ್ತು ಹಲವು ವೈದ್ಯರ ರಾಜೀನಾಮೆಯಿಂದಾಗಿ ಈ ತನಿಖೆಗೆ ಕಾರಣವಾಗಿದೆ. ರೋಗಿಗಳಿಗೆ ಹಾನಿಯಾದ ಆರೋಪ ಹಾಗೂ ಲಾಭದ ಉದ್ದೇಶಕ್ಕಾಗಿ ಅಕ್ರಮ ಕ್ಲಿನಿಕಲ್ ಟ್ರಯಲ್ ನಡೆಸಿದ ಆರೋಪಗಳಿವೆ.

ಬೆಂಗಳೂರು, ಜುಲೈ 02: ಕ್ಲಿನಿಕಲ್ ಟ್ರಯಲ್ ಹರಗಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಯಾಗಿರುವ ಹೆಲ್ತಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ (HCG) ವಿರುದ್ಧ ತನಿಖೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಮಂಡಳಿ (Central Drugs Standard Control Organization – CDSCO) ತಂಡ ರಚನೆ ಮಾಡಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ತನಿಖಾ ತಂಡ ರಚನೆ ಮಾಡಿದೆ.
ತನಿಖೆಗೆ ಕಾರಣವೇನು?
ಎಚ್‌ಸಿಜಿ ಕ್ಯಾನ್ಸರ್‌ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ಎಂಬುದು ಹಗರಣ ರೀತಿಯಲ್ಲಿ ನಡೆಯುತ್ತಿದೆ ಎಂದು ಇದೇ ಸಂಸ್ಥೆಯ ನೈತಿಕ ಸಮಿತಿ ಮುಖ್ಯಸ್ಥ ನ್ಯಾ|ಪಿ. ಕೃಷ್ಣಭಟ್ ಆರೋಪಿಸಿದ್ದರು. ಈ ಬಗ್ಗೆ ಕಂಪನಿಯ ಉನ್ನತ ಆಡಳಿತ ವರ್ಗಕ್ಕೆ ಪತ್ರ ಹಾಗೂ ಖುದ್ದಾಗಿ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಅದನ್ನು ಸರಿಪಡಿಸುವ ಬದಲು ಎಚ್‌ಸಿಜಿ ಆಡಳಿತ ಅಕ್ರಮವನ್ನೇ ಮುಚ್ಚಿ ಹಾಕಲು ಯತ್ನಿಸಿತು ಎಂಬ ಆರೋಪ ಕೇಳಿಬಂದಿತ್ತು.
ತಮ್ಮ ಪ್ರಯತ್ನ ವಿಫಲವಾದ ಹಿನ್ನಲೆಯಲ್ಲಿ ಕೃತಿಕ ಸಮಿತಿಗೆ ನ್ಯಾ.। ಕೃಷ್ಣಭಟ್ ರಾಜೀನಾಮೆ ಕೊಟ್ಟಿದ್ದಾರೆ. ಇದಾದ ಬೆನ್ನಲ್ಲೇ ಈ ಕಂಪನಿಯ ಸಿಇಒ, ವೈದ್ಯಕೀಯ ನಿರ್ದೇಶಕರು ಕೂಡ ಪದತ್ಯಾಗ ಮಾಡಿದ್ದಾರೆ. ಹಲವು ವೈದ್ಯರೂ ಕೆಲಸ ತೊರೆದಿದ್ದಾರೆ. ವಿಚಾರ ಗಂಭೀರ ಸ್ವರೂಪವಾದ ಕಾರಣ ರಾಜ್ಯ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿತ್ತು.
ಕ್ಲಿನಿಕಲ್ ಟ್ರಯಲ್ ವೇಳೆ ಹಲವು ಜೀವಗಳಿಗೆ ಹಾನಿ
ಹೆಚ್ಸಿಜಿ ಆಸ್ಪತ್ರೆಯು ಕ್ಲಿನಿಕಲ್ ಟ್ರಯಲ್ ವೇಳೆ ಹಲವಾರು ರೋಗಿಗಳ ಜೀವಗಳಿಗೆ ಹಾನಿ ಮಾಡಿರುವ ಆರೋಪ ಕೇಳಿಬಂದಿದೆ. ಕ್ಲಿನಿಕಲ್ ಟ್ರಯಲ್ ವೇಳೆ ಸಂಭವಿಸುವ ರೋಗಿಗಳ ಸಾವನ್ನು ವರದಿ ಮಾಡುವ ವಿಚಾರದಲ್ಲೂ ಸಂಸ್ಥೆ ನಿಯಮಗಳನ್ನು ಉಲ್ಲಂಘಿಸುತ್ತಿತ್ತು ಎಂದು ಆರೋಪವಿದೆ.
ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ಮಹಿಳಾ ಸಹದ್ಯೋಗಿಗಳ ವೀಡಿಯೊ ರೆಕಾರ್ಡ್: ಸಿಕ್ಕಿಬಿದ್ದ ಇನ್ಫೋಸಿಸ್ ಟೆಕ್ಕಿ..
ಅಧಿಕ ಲಾಭಕ್ಕಾಗಿ ಹೆಚ್ಚು ಹೆಚ್ಚು ಕ್ಲಿನಿಕಲ್ ಟ್ರಯಲ್
ಲಾಭ ಹೆಚ್ಚಳ ಉದ್ದೇಶದಿಂದ ಹೆಚ್ಚು ಹೆಚ್ಚು ಆಘಾವಕಾರಿ ಕ್ಲಿನಿಕಲ್ ಟ್ರಯಲ್‌ಗಳನ್ನು ಆಸ್ಪತ್ರೆ ನಡೆಸುತ್ತಿತ್ತು. ಲಾಭ ಹೆಚ್ಚಳ ಉದ್ದೇಶಕ್ಕಾಗಿ ಕ್ಲಿನಿಕಲ್ ಟ್ರಯಲ್‌ಗೆ ರೋಗಿಗಳ ಸೇರ್ಪಡೆ ವಿಚಾರದಲ್ಲಿ ಹೆಚ್ಚು ವಿನಾಯಿತಿ ನೀಡುತ್ತಿತ್ತು ಎಂಬ ಆರೋಪವೂ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







