ಪ್ರೀತಿಸುವಂತೆ ಮಹಿಳೆಗೆ ಕಿರುಕುಳ: ಮಾತುಕತೆಗೆ ಕರೆದವರಿಗೆ ಹೀಗಾ ಮಾಡೋದು?

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿ, ಪ್ರೇಮ, ಪ್ರಯಣ ಹೋದ ಕೆಲವರು ಮೋಸಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಸಮಾಜಿಕ ಜಲಾತಾಣದಲ್ಲಿ ಕಿರುಕುಳ ನೀಡುವುದು ಕೂಡ ಜಾಸ್ತಿಯಾಗುತ್ತಿದೆ. ಮಹಿಳೆಯರ ಫೋಟೋಗಳನ್ನು ಮಾರ್ಫ್ ಮಾಡುವುದು, ಪೀಡಿಸುವ ಪ್ರಕರಣಗಳು ವರದಿಯಾಗುತ್ತಿವೆ. ಈ ಪ್ರಕರಣದಲ್ಲೂ ಪ್ರೀತಿಸು ಅಂತ ವಿವಾಹಿತ ಮಹಿಳೆ ಹಿಂದೆ ಬಿದ್ದವ ಏನು ಮಾಡಿದ ಗೊತ್ತಾ? ಇಲ್ಲಿದೆ ವಿವರ

ಪ್ರೀತಿಸುವಂತೆ ಮಹಿಳೆಗೆ ಕಿರುಕುಳ: ಮಾತುಕತೆಗೆ ಕರೆದವರಿಗೆ ಹೀಗಾ ಮಾಡೋದು?
ಕೊಲೆ ಮಾಡಲು ಯತ್ನಿಸಿದ ಆರೋಪಿ ಕಾರ್ತಿಕ್​
Edited By:

Updated on: Jul 20, 2025 | 10:59 AM

ಬೆಂಗಳೂರು, ಜುಲೈ 20: ಮಾತುಕತೆಗೆಂದು ಬಂದವನು ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ (Bengaluru) ಹೆಚ್ಎಎಲ್​ನಲ್ಲಿ (HAL) ನಡೆದಿದೆ. ಜುಲೈ 17ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೆಲ್ವ ಕಾರ್ತಿಕ್ ಕೊಲೆ ಮಾಡಲು ಯತ್ನಿಸಿದ ಆರೋಪಿ. ತಮಿಳುನಾಡು ಮೂಲದ ಆರೋಪಿ ಸೆಲ್ವ ಕಾರ್ತಿಕ್​ಗೆ ಕರ್ನಾಟಕದ ಓರ್ವ ವಿವಾಹಿತ ಮಹಿಳೆ ಇನ್​ಸ್ಟಾಗ್ರಾಂ (Instagram) ಮೂಲಕ ಪರಿಚಯವಾಗಿದ್ದಾಳೆ. ಆರೋಪಿ ಸೆಲ್ವ ಕಾರ್ತಿಕ್​ ಇನ್​ಸ್ಟಾಗ್ರಾಂನಲ್ಲೇ ಮಹಿಳೆಗೆ ಮೆಸೇಜ್ ಮಾಡಿ ಪ್ರೀತಿಸು ಅಂತ ಪೀಡಿಸುತ್ತಿದ್ದನು.

ಈ ವಿಚಾರವನ್ನು ಮಹಿಳೆ ಗಂಡನಿಗೆ ಹೇಳದೆ ತನ್ನ ತಂದೆಗೆ ತಿಳಿಸಿದ್ದಾಳೆ. ಆಗ, ಮಹಿಳೆಯ ತಂದೆ ಮಾತುಕತೆಗೆಂದು ಹೆಚ್​ಎಎಲ್​ಗೆ ಕಾರ್ತಿಕ್​ನನ್ನು ಕರೆಸಿಕೊಂಡಿದ್ದಾರೆ. ಹೆಚ್​ಎಲ್​ಗೆ ಬಂದ್ ಕಾರ್ತಿಕ್​ನನ್ನು ಮಹಿಳೆಯ ತಮ್ಮ ಪ್ರಶಾಂತ್​ನು ತನ್ನ ಬೈಕ್​ನಲ್ಲಿ ಹಿಂದೆ ಕೂರಿಸಿಕೊಂಡು ಹೋಗುತ್ತಿದ್ದನು. ಈ ವೇಳೆ, ಆರೋಪಿ ಕಾರ್ತಿಕ್​ನು ಹಿಂದಿನಿಂದ ಪ್ರಶಾಂತ್​ನ ಕತ್ತುಕೊಯ್ದ ಕೊಲೆ ಮಾಡಲು ಯತ್ನಿಸಿದ್ದಾನೆ. ಗಾಯಾಳು ಪ್ರಶಾಂತ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸೆಲ್ವ ಕಾರ್ತಿಕ್​ನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.

ಹನಿಟ್ರ್ಯಾಪ್ ಆರೋಪಿಗಳ ಬಂಧನ

ಮೈಸೂರು: ಹನಿಟ್ರ್ಯಾಪ್ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಕವನ, ಸೈಫ್​ರನನ್ನು ಪೊಲೀಸರು ಕೇರಳದ ಕಣ್ಣೂರಿನ ಲಾಡ್ಜ್​ನಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ,ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್
ಇನ್​ಫ್ಲುಯೆನ್ಸರ್ ಆತ್ಮಹತ್ಯೆ, ಮೊದಲೇ ಊಹಿಸಿದ್ದೆ ಎಂದ ನಟಿ
2 ಕೋಟಿ ಮೌಲ್ಯದ ಹೆರಾಯಿನ್​ನೊಂದಿಗೆ ಸಿಕ್ಕಿಬಿದ್ದ ಮಹಿಳಾ ಕಾನ್‌ಸ್ಟೆಬಲ್

ಆರೋಪಿಗಳು ಕಂಪಲಾಪುರದ ಬಟ್ಟೆ ಅಂಗಡಿ ಮಾಲೀಕ ದಿನೇಶ್‌ ಅವರನ್ನು ತಮ್ಮ ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿಕೊಂಡು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದೇ ಪ್ರಕರಣದಲ್ಲಿ ಹುಣಸೂರು ಪೊಲೀಸ್ ಪೇದೆ ಸಹ ಶಿವಣ್ಣ ಭಾಗಿಯಾಗಿದ್ದನು. ಪ್ರಕರಣ ಸಂಬಂಧ ಬೈಲಕುಪ್ಪೆ ಠಾಣೆ ಪೊಲೀಸರು ಈಗಾಗಲೆ ಪೊಲೀಸ್​ ಪೇದೆ ಶಿವಣ್ಣ, ಆನಂದ್ ಹಾಗೂ ಮೂರ್ತಿಯನ್ನು ಬಂಧಿಸಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ನೋಡಿ: ಮತ್ತೊಂದು ಇನ್​ಸ್ಟಾಗ್ರಾಮ್ ಲವ್-ಧೋಕಾ, 25 ವರ್ಷದ ಯುವಕನಿಗೆ ಸಿಕ್ಕಿದ್ದು ಮೂರು ಮಕ್ಕಳ ತಾಯಿ!

ಪೊಲೀಸ್ ಪೇದೆ ಶಿವಣ್ಣ ಸುಂದರ ಯುವತಿಯನ್ನು ಮುಂದೆ ಬಿಟ್ಟು ಶ್ರೀಮಂತ ವ್ಯಕ್ತಿಗಳನ್ನು ತನ್ನ ಬಲೆಯಲ್ಲಿ ಬೀಳಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದನು. ಪ್ರಕರಣದಲ್ಲಿ ಎ1 ಮೂರ್ತಿ, ಎ2 ಪೊಲೀಸ್ ಪೇದೆ ಶಿವಣ್ಣ ಹಾಗೂ ಕವನ ಮತ್ತು ಸೈಫರ್​. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದ ನಿವಾಸಿಯಾದ ದಿನೇಶ್ ಕುಮಾರ್ ವಂಚನೆಗೆ ಒಳಗಾದವರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:56 am, Sun, 20 July 25