AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಟ್ರಾಫಿಕ್​ ನಿಯಂತ್ರಣಕ್ಕೆ AI ಆಧಾರಿತ ಸಿಗ್ನಲ್​: 125 ಜಂಕ್ಷನ್​ಗಳಲ್ಲಿ ಅಳವಡಿಕೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲುAI ಆಧಾರಿತ ಸ್ವಯಂಚಾಲಿತ ಸಂಚಾರ ಸಿಗ್ನಲ್​ ಗಳನ್ನು ಅಳವಡಿಸಲಾಗಿದೆ. 125 ಜಂಕ್ಷನ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ಪ್ರಯಾಣದ ಸಮಯವನ್ನು ಶೇ 33 ರಷ್ಟು ಕಡಿಮೆ ಮಾಡಿದೆ. BATCAS ಮತ್ತು VAC ಎಂಬ ಎರಡು ವಿಧದ AI ಸಿಗ್ನಲ್‌ಗಳು ವಾಹನ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತವೆ. ಒಟ್ಟು 165 ಜಂಕ್ಷನ್‌ಗಳಲ್ಲಿ ಇದನ್ನು ಅಳವಡಿಸಲು ಯೋಜನೆ ಇದೆ.

ಬೆಂಗಳೂರಿನ ಟ್ರಾಫಿಕ್​ ನಿಯಂತ್ರಣಕ್ಕೆ AI ಆಧಾರಿತ ಸಿಗ್ನಲ್​: 125 ಜಂಕ್ಷನ್​ಗಳಲ್ಲಿ ಅಳವಡಿಕೆ
ಎಐ ಸಗ್ನಿಲ್​
ರಾಚಪ್ಪಾಜಿ ನಾಯ್ಕ್
| Edited By: |

Updated on:Feb 26, 2025 | 9:39 AM

Share

ಬೆಂಗಳೂರು, ಫೆಬ್ರವರಿ 26: ಬೆಂಗಳೂರು (Bengaluru) ಮಹಾನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ. ನಗರದಲ್ಲಿನ ಸಂಚಾರ ದಟ್ಟಣೆಯನ್ನು (Traffic Jam) ನಿಯಂತ್ರಿಸಲು ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಸಾಕಷ್ಟು ಹರಸಾಹಸ ಪಡುತ್ತಿದ್ದು, ವಿನೂತನ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದೀಗ, ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ದಟ್ಟಣೆಗೆ ಕೃತಕ ಬುದ್ದಿಮತ್ತೆ AI ಆಧರಿತ ಸ್ವಯಂ ಚಾಲಿತ ಸಿಗ್ನಲ್​ಗಳನ್ನು (AI Based Signal) ಅಳವಡಿಸಿದ್ದಾರೆ. ಬೆಂಗಳೂರಿನ 125 ಜಂಕ್ಷನ್​ಗಳಲ್ಲಿ ಈಗಾಗಲೇ ಎಐ ಆಧರಿತ ಸಿಗ್ನಲ್ ಅಳವಡಿಸಲಾಗಿದೆ.

ಈ ಎಐ ಆಧಾರಿತ ಸಿಗ್ನಲ್​ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತವೆ. ಅತಿ ಹೆಚ್ಚು ವಾಹನ ದಟ್ಟಣೆ ಇರುವ ಸಮಯ ನಿರ್ವಹಿಸುವ ತಂತ್ರಜ್ಞಾನ ಇದಾಗಿದೆ. 53 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಒಟ್ಟು 165 ಜಂಕ್ಷನ್​ನಲ್ಲಿ ಎಐ ಆಧರಿತ ಕ್ಯಾಮೆರಾ ಅಳವಡಿಸಲು ಯೋಚಿಸಲಾಗಿದೆ. ಸದ್ಯ 125 ಜಂಕ್ಷನ್​ಗಳಲ್ಲಿ ಎಐ ಸ್ವಯಂ ಚಾಲಿತ ಕ್ಯಾಮೆರಾ ಅಳವಡಿಸಲಾಗಿದೆ. ಸಿ-ಡಾಕ್ ಕಂಪನಿಯಿಂದ ಎಐ ಸ್ವಯಂ ಚಾಲಿತ ಸಿಗ್ನಲ್ ಅಳವಡಿಸಲಾಗಿದೆ.

ಎಐ ಸಿಗ್ನಲ್​ನಲ್ಲಿ​ ಎಷ್ಟು ವಿಧ? ಕಾರ್ಯ ಹೇಗೆ?

ಎಐ ಸಿಗ್ನಲ್​ನಲ್ಲಿ ಎರಡು ವಿಧಗಳಿವೆ. ಅಡ್ಯಾಪ್ಟಿವ್​ ಟ್ರಾಫಿಕ್​ ಕಂಟ್ರೋಲ್​ (BATCAS) ಮತ್ತು ವೆಹಿಕಲ್​ ಆಕ್ಚುಯೇಟೆಡ್​ ಕಂಟ್ರೋಲ್ಡ್​ (VAC). ಅಡ್ಯಾಪ್ಟಿವ್​ ಟ್ರಾಫಿಕ್​ ಕಂಟ್ರೋಲ್​ ಬೆಂಗಳೂರಿನ ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಗ್ರೀನ್​ ಸಿಗ್ನಲ್​ ಅನ್ನು ನೀಡುತ್ತದೆ. ವೆಹಿಕಲ್​ ಆಕ್ಚುಯೇಟೆಡ್​ ಕಂಟ್ರೋಲ್ಡ್​ ಹೆಚ್ಚು ವಾಹನ ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಕಾಲ ಗ್ರೀನ್​ ಸಿಗ್ನಲ್​ಯನ್ನೂ ಮತ್ತು ಕಡಿಮೆ ವಾಹನ ಇರುವಲ್ಲಿ ಕಡಿಮೆ ಸಮಯ ಗ್ರೀನ್​ ಸಿಗ್ನಲ್​ ನೀಡುತ್ತದೆ.

ಇದನ್ನೂ ಓದಿ: ಮಹಾಶಿವರಾತ್ರಿ: ಬೆಂಗಳೂರಿನ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ

ಎಐ ಸಿಗ್ನಲ್​ ಉಪಯೋಗ

ಎಐ ಸಿಗ್ನಲ್‌ಗಳು ಪ್ರಯಾಣದ ಸಮಯವನ್ನು ಶೇ 33 ರಷ್ಟು ಕಡಿಮೆ ಮಾಡಲಿದೆ. AI ಸಿಗ್ನಲ್‌ಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿವೆ. ವಿಶೇಷವಾಗಿ ಪೀಕ್ ಸಮಯದಲ್ಲಿ ಬಹಳಷ್ಟು ಅನುಕೂಲಕಾರಿಯಾಗಿದೆ. ಅಲ್ಲದೇ, ಅನಗತ್ಯ ಜಾಮ್​ ತಪ್ಪಲಿದೆ. ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಅವಕಾಶ ನೀಡುವ ಮೂಲಕ ಕಾಯುವ ಸಮಯ ತಗ್ಗಲಿದೆ. ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಅವಕಾಶ ನೀಡುವ ಮೂಲಕ ಕಾಯುವ ಸಮಯ ತಗ್ಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 am, Wed, 26 February 25

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು