ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆದಿದ್ದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಕೆಜಿಎಫ್ ಬಾಬು (KGF Babu) ನಿವಾಸದ ಮೇಲೆ ಇಂದು (ಮೇ 28) ಐಟಿ ಅಧಿಕಾರಿಗಳು (IT Officials) ದಾಳಿ ನಡೆಸಿದ್ದಾರೆ. ಉಮ್ರಾ ಡೆವಲಪರ್ಸ್ ಕಂಪನಿ ಮಾಲೀಕರಾಗಿರುವ ಕೆಜಿಎಫ್ ಬಾಬು ನಿವಾಸದಲ್ಲಿ ಅಧಿಕಾರಿಗಳು ಸಿಆರ್ಪಿಎಫ್ (CRPF) ಭದ್ರತೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಸ್ಕ್ರಾಪ್ ಉದ್ಯಮದಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದಾಗಿ ಯೂಸುಫ್ ಶರೀಫ್@ಕೆಜಿಎಫ್ ಬಾಬು ಕೆಲವೆಡೆ ಹೇಳಿಕೊಂಡಿದ್ದಾರೆ. ಕೆಜಿಎಫ್ ಬಾಬು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಸದ್ಯ 2023ರ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಸದ್ಯ ವಸಂತನಗರದಲ್ಲಿರುವ ರುಕ್ಸಾನಾ ಪ್ಯಾಲೇಸ್ ಮತ್ತು ನಿವಾಸದಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿದಿದೆ. ಬೆಳಗ್ಗೆ 7.30ರ ಸುಮಾರಿಗೆ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ನಾಲ್ಕು ಇನೋವಾ ಕಾರುಗಳಲ್ಲಿ ಅಧಿಕಾರಿಗಳು ಬಂದಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಕಾಲೇಜಿಗೆ ಮತ್ತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು; ತರಗತಿಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲೆ
ಸಾವಿರ ಕೋಟಿ ಒಡೆಯನಾಗಿರುವ ಕೆಜಿಎಫ್ ಬಾಬು:
ಕೆಜಿಎಫ್ ಬಾಬು ಬಳಿ ಘೋಷಿತ ಆಸ್ತಿಯೇ 1,741 ಕೋಟಿ ಇದೆ. ನಾಮಪತ್ರ ಸಲ್ಲಿಕೆ ವೇಳೆ 1,741 ಕೋಟಿ ಆಸ್ತಿ ವಿವರ ಘೋಷಿಸಿದ್ದರು. ಆದಾಯ ತೆರಿಗೆಯಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆ ಐಟಿ ನಡೆಸಿದೆ. ಕೆಜಿಎಫ್ ಬಾಬು ಹಾಗೂ ಸ್ನೇಹಿತರ ನಿವಾಸ, ಕಚೇರಿಗಳು ಸೇರಿ ಒಟ್ಟು 7 ಕಡೆ ಇಂದು ದಾಳಿ ನಡೆದಿದೆ. ಕೆಜಿಎಫ್ ಬಾಬು ಮತ್ತು ಕುಟುಂಬಸ್ಥರು 12 ಶಾಖೆಗಳಲ್ಲಿ ಒಟ್ಟು 23 ಬ್ಯಾಂಕ್ ಖಾತೆ ಹೊಂದಿದ್ದಾರೆ. ಬಾಬು ಕುಟುಂಬಸ್ಥರ ಬ್ಯಾಂಕ್ ಖಾತೆಗಳಲ್ಲಿ 70 ಕೋಟಿ ಹಣ ಇದೆ.
ಮೈಸೂರಿನಲ್ಲೂ ಇಡಿ ಕಾರ್ಯಾಚರಣೆ:
ಕೆಜಿಎಫ್ ಬಾಬು ಅವರ ಸಂಬಂಧಿಯಾಗಿರುವ ಮೈಸೂರಿನ ವಾರ್ಡ್ 17ರ ಪಾಲಿಕೆ ಸದಸ್ಯೆ ರೇಶ್ಮಾ ಭಾನು ನಿವಾಸಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಾಲಿಕೆ ಸದಸ್ಯೆ ಪತಿ ರೇಹಮಾನ್ ಖಾನ್ ಅದಾಯದ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Sat, 28 May 22