ಕಾಂಗ್ರೆಸ್​ನವರಿಂದ ಹಿಂದೂ ಸಮಾಜ ಒಡೆಯುವ ಕೆಲಸ ಆಗುತ್ತಿದೆ : ಬಿ. ಸಿ ನಾಗೇಶ್

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು  RSS  ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ವಿಚಾರವಾಗಿ , 70 ವರ್ಷ ಆಳಿದವರ ಕುರಿತು ನಾನು ಏನೂ ಮಾತನಾಡುವುದಿಲ್ಲ. ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿದ್ದಾಗ ಏನ್ ಮಾಡಿದ್ರು? ಎಂದು ಬಿ.ಸಿ ನಾಗೇಶ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ನವರಿಂದ ಹಿಂದೂ ಸಮಾಜ ಒಡೆಯುವ ಕೆಲಸ ಆಗುತ್ತಿದೆ : ಬಿ. ಸಿ ನಾಗೇಶ್
ಸಿದ್ಧರಾಮಯ್ಯ ವಿರುದ್ಧ ಗುಡುಗಿದ ಬಿಸಿ ನಾಗೇಶ್
Image Credit source: Deccan Herald
TV9kannada Web Team

| Edited By: Vivek Biradar

May 28, 2022 | 10:29 AM

ಕೊಪ್ಪಳ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddramaiah) ಅವರು  RSS  ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ವಿಚಾರವಾಗಿ , 70 ವರ್ಷ ಆಳಿದವರ ಕುರಿತು ನಾನು ಏನೂ ಮಾತನಾಡುವುದಿಲ್ಲ. ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿದ್ದಾಗ ಏನ್ ಮಾಡಿದ್ರು? RSS ಮೂಲ ತಿಳಿದುಕೊಂಡು ಏನಾದ್ರೂ ಮಾಡಬಹುದಿತ್ತು. ಆರ್​ಎಸ್​ಎಸ್​​ ಇಟಾಲಿಯನ್ ಮೂಲ ಅಲ್ಲ ಎಂದು ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ (BC Nagesh) ಕೊಪ್ಪಳದಲ್ಲಿ ತಿರುಗೇಟು ನೀಡಿದ್ದಾರೆ.

ಪಠ್ಯ ಪುಸ್ತಕದ ವಿಚಾರವಾಗಿ ರಾಷ್ಟ್ರೀಯತೆನ ಹಿಂದೂತ್ವ ಸಹಿಸಕೋಳಲ್ಲ ಅವರು ವಿವಾದ ಮಾಡಿದರು. ಎಲ್ಲ ಸಮಯದಲ್ಲಿ ವಿವಾದ ಇದೆ.  ಇದೀಗ ಪಠ್ಯ ಪುಸ್ತಕ ವಿಚಾರದಲ್ಲಿ ವಿವಾದ ಮಾಡುತ್ತಿದ್ದಾರೆ. ಏನೂ ಇರದೆ ಹೋದಾಗ ಜಾತಿ ಬಗ್ಗೆ ಮಾತಾಡುತ್ತಾರೆ. ಬ್ರಿಟಿಷರ ಕಾಲದಿಂದಲೂ ಇದೆ. ಏನೂ ಇರದೆ ಹೋದರೆ ಜಾತಿ ಬಗ್ಗೆ ಮಾತನಾಡುತ್ತಾರೆ.  ದೇಶದ ಜನರಿಗೆ ಯಾವುದು ನಿಜ, ಯಾವುದು ಸುಳ್ಳು ಗೊತ್ತಿದೆ. ಪಠ್ಯಪುಸ್ತಕದಿಂದ ಮೊದಲು ಟಿಪ್ಪು, ಭಗತ್ ಸಿಂಗ್, ಬಸವಣ್ಣ ಮತ್ತು ನಾರಾಯಣ ಗುರು ಅವರ ವಿಷಯಗಳನ್ನು ತೆಗೆದಿದ್ದಾರೆ ಅಂತಾ ಸುಳ್ಳು ಹೇಳಿದರು. ಸುಳ್ಳು ಹೇಳಿ ಹಿಂದೂ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಸಹಚರ ಬಂಧನ

ಕಾಂಗ್ರೆಸ್​ನವರಿಂದ ಹಿಂದೂ ಸಮಾಜ ಒಡೆಯುವ ಕೆಲಸ ಆಗುತ್ತಿದೆ . ಬ್ರಿಟಿಷರಿಂದ ಅಧಿಕಾರ ವಹಿಸಿಕೊಂಡ ದಿನದಿಂದ ಕಾಂಗ್ರೇಸ್ ಇದನ್ನೇ ಮಾಡಿದ್ದಾರೆ. ಈ ದೇಶದ ಇತಿಹಾಸವನ್ನು ಮಕ್ಕಳಿಗೆ ತಿಳಿಸೋದರಲ್ಲಿ ಯಡವಟ್ಟಾಗಿದೆ ಅನಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಗ್ರಾಮಗಳಿಂದ ಭಾಗಿಯಾಗಿದ್ದಾರೆ. ಇತಿಹಾಸದ ಪುಸ್ತಕಗಳಲ್ಲಿ ನಾವು ಫೇಲಾಗಿದ್ದ ಕಾರಣಕ್ಕೆ ,ಕಾರ್ಯಕ್ರಮದ ಮೂಲಕ ನಾವು ಪರಿಚಯ ಮಾಡುತ್ತೇವೆ.  ಸ್ವಾತಂತ್ರೋತ್ಸವದ ಕಾರ್ಯಕ್ರಮ ವೇಳೆಗೆ ಮಕ್ಕಳಿಗೆ ನಾವು ಪರಿಚಯ ಮಾಡುತ್ತೇವೆ.

ಮತ್ತೆ ಮಗಂಗಳೂರಿನ ವಿವಿಯಲ್ಲಿ ಬುಗಿಲೆದ್ದಿರುವ ಹಿಜಾಬ್ ವಿಚಾರವಾಗಿ ಮಾತನಾಡಿದ ಅವರು ಇದರ ಹಿಂದೆ ಕಾಂಗ್ರೆಸ್ ಪಿತೂರಿ ಇದೆ. ನಾವು ಹಿಜಾಬ್ ನೋಡಿತಿಲ್ಲ‌. ಅದರ ಹಿಂದೆ ಇರೋ ಪಿತೂರಿ ನೋಡುತ್ತಿದ್ದೇವೆ. ಈ ದೇಶದ ಕಾನೂನು ಉಲ್ಲಂಘನೆ ಮಾಡೋ ಪಿತೂರಿ ನೋಡುತಿದ್ದೇವೆ. ಇವತ್ತಲ್ಲ ನಾಳೆ ಅವರು ಇಡೀ ದೇಶದ ಕಾನೂನು ಉಲ್ಲಂಘನೆ ಮಾಡುತ್ತೇವೆ ಅಂತಾರೆ‌. ಕೆಲವು ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಗೆ ಅವರಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜವಾಹರಲಾಲ್ ನೆಹರು ದೇಶವನ್ನು ಒಡೆದು ತುಂಡು ಮಾಡಿದ್ದರು : ಪ್ರಮೋದ ಮುತಾಲಿಕ್ 

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ RSS ಮೂಲ ಕೆದಕಿದ ವಿಚಾರವಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಹತಾಶರಾಗಿ ಸಿದ್ದರಾಮಯ್ಯ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಇಡೀ ದೇಶದಲ್ಲಿ ಧೂಳೀಪಟವಾಗುತ್ತಿದೆ. ಆರ್ ಎ ಎಸ್ ಬಿಜೆಪಿ ಬೈದರೆ ಉಳಿಯಬಹುದು ಅಂತಾ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.  RSS ದೇಶಕ್ಕಾಗಿ ತ್ಯಾಗ ಮಾಡಿದೆ, ಇದನ್ನು ಅರ್ಥೈಸಿಕೊಳ್ಳಬೇಕು. ಇದರಿಂದ ಸಿದ್ದರಾಮಯ್ಯ ಅಪಹಾಸ್ಯಕ್ಕೆ ಈಡಾಗುತ್ತಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ (Pramod Mutalik) ಹೇಳಿದ್ದಾರೆ.

ಇದನ್ನು ಓದಿ:  ಸ್ತ್ರೀಯರು ಈ ಸಲಹೆಗಳನ್ನು ತಪ್ಪೆದೇ ಅನುಸರಿಸಿ, ಈ ತಪ್ಪು ಮಾಡಲೇ ಬೇಡಿ

ಆರ್ಯ & ದ್ರಾವಿಡರು ಅನ್ನೋದು ಅದು ಮುಗಿದ ಅಧ್ಯಾಯ. ಪ್ರಧಾನಿಗಳು, ರಾಷ್ಟ್ರಪತಿಗಳು ಆರ್​​ಎಸ್​ಎಸ್​ ಹಿನ್ನೆಲೆಯುಳ್ಳವರಾಗಿದ್ದಾರೆ. ಜವಾಹರಲಾಲ್ ನೆಹರು & ಮೋದಿ ಹೋಲಿಕೆ ಸರಿಯಾದುದ್ದಲ್ಲವಾಗಿದೆ. 8 ವರ್ಷಗಳಲ್ಲಿ ಪ್ರಧಾನಿ ಮೋದಿ ಜಗತ್ತಿನಲ್ಲಿ ಪ್ರಸಿದ್ಧರಾಗಿದ್ದಾರೆ. ಜವಾಹರಲಾಲ್ ನೆಹರು ದೇಶವನ್ನು ಒಡೆದು ತುಂಡು ಮಾಡಿದ್ದರು. ಆರ್ ಎಸ್ ಎಸ್ ಭಾರತದವರಲ್ಲ ಅಂದರೆ ಪಾಕಿಸ್ತಾನದವರಾ ? ಇದು ಅತ್ಯಂತ ಕೀಳುಮಟ್ಟದ ಹೇಳಿಕೆಯಾಗಿದೆ. ಇದರಲ್ಲಿ ಯಾವುದೇ ಅರ್ಥವಿಲ್ಲ. ಈ ಹೇಳಿಕೆ ವಾಪಸ್ಸು ಪಡೆದರೆ ಸಿದ್ದರಾಮಯ್ಯ ಮರ್ಯಾದೆ ಉಳಿಯುತ್ತದೆ ಎಂದು ಮುತಾಲಿಕ್ ಕಿಡಿಕಾರಿದ್ದಾರೆ ಮಾಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada