Dhananjay: ಧನಂಜಯ್- ಅದಿತಿ ಅಭಿನಯದ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ರಿಲೀಸ್ ಡೇಟ್ ಅನೌನ್ಸ್

Once Upon a time in Jamaligudda release date | Aditi Prabhudeva: ಡಾಲಿ ಧನಂಜಯ್ ನಟನೆಯ ಚಿತ್ರಗಳು ಸಾಲುಸಾಲಾಗಿ ತೆರೆಗೆ ಬರುತ್ತಿವೆ. ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆದಿರುವ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ದ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ.

Dhananjay: ಧನಂಜಯ್- ಅದಿತಿ ಅಭಿನಯದ 'ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ' ರಿಲೀಸ್ ಡೇಟ್ ಅನೌನ್ಸ್
‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದಲ್ಲಿ ಧನಂಜಯ್, ಅದಿತಿ ಪ್ರಭುದೇವ
TV9kannada Web Team

| Edited By: shivaprasad.hs

May 28, 2022 | 12:33 PM

ಸ್ಯಾಂಡಲ್​ವುಡ್ ನಟ ಧನಂಜಯ್ (Dhananjay) ಸಾಲುಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ಧಾರೆ. ಹಲವು ಚಿತ್ರಗಳ ಕೆಲಸಗಳು ಈಗಾಗಲೇ ಮುಗಿದಿದ್ದು, ರಿಲೀಸ್​ ಸಿದ್ಧತೆಯಲ್ಲಿವೆ. ಇದೀಗ ಡಾಲಿ ನಟನೆಯ ಹೊಸ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಕುಶಾಲ್ ಗೌಡ ನಿರ್ದೇಶನದ, ಟೈಟಲ್​ನಿಂದಲೇ ಗಮನ ಸೆಳೆದಿದ್ದ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ (Once Upon a time in Jamaligudda) ಚಿತ್ರ ಇದೀಗ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 9ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ‘ಕೆಆರ್​ಜಿ ಕನೆಕ್ಟ್ಸ್’ ವಿತರಣೆಯ ಜವಾಬ್ದಾರಿ ಹೊತ್ತಿದೆ. ಧನಂಜಯ್​ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಇದೀಗ ಹೊಸ ಪೋಸ್ಟರ್ ಗಮನ ಸೆಳೆದಿದೆ. ತುಸು ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ಧನಂಜಯ್, ಸೈಕಲ್ ಹಿಡಿದು ನಿಂತಿದ್ದಾರೆ. ಡಿಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಅದಿತಿ, ಧನಂಜಯ್​ಗೆ ಸಾಥ್ ನೀಡಿದ್ಧಾರೆ.

ಧನಂಜಯ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

ಕನ್ನಡದಲ್ಲಿ ಸದ್ಯ ರೆಟ್ರೊ ಟ್ರೆಂಡ್ ಜೋರಾಗಿದೆ. ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ಕೂಡ ಅಂಥದ್ದೇ ಮಾದರಿಯ ಚಿತ್ರ. 90ರ ದಶಕದಲ್ಲಿ ನಡೆಯುವ ಪ್ರೇಮಕತೆ ಇದಾಗಿದ್ದು, ಟ್ರಾವೆಲಿಂಗ್ ಎಳೆಯೂ ಇದೆ. ಧನಂಜಯ್ ಬಾರ್ ಸಪ್ಲೈಯರ್ ಪಾತ್ರದಲ್ಲಿ ನಟಿಸಿದ್ದು, ಅದಿತಿ ಮಸಾಜ್ ಪಾರ್ಲರ್​ನಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ. ಈರ್ವರ ನಡುವಿನ ಪ್ರೀತಿಯ ಕತೆಯನ್ನು ಚಿತ್ರ ಒಳಗೊಂಡಿದೆ.

ಇದನ್ನೂ ಓದಿ:  20 ರೂ ಪೆಟ್ರೋಲ್ ಹಾಕಿಸ್ತೀವಿ ಕೊಡು ಎಂದು ಫ್ರೆಂಡ್ ಗಾಡಿ ತೆಗೆದುಕೊಂಡು ಹೋಗುತ್ತಿದ್ದೆವು; ಆ ದಿನಗಳನ್ನು ಸ್ಮರಿಸಿದ ಧನಂಜಯ್

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ ಮಾಡಿದ್ದು, ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ. ಪ್ರಕಾಶ್‌ ಬೆಳವಾಡಿ, ನಂದಗೋಪಾಲ್‌, ಯಶ್‌ ಶೆಟ್ಟಿ, ಭಾವನಾ ರಾಮಣ್ಣ, ತ್ರಿವೇಣಿ ರಾವ್‌ ಸೇರಿದಂತೆ ಹಲವು ಖ್ಯಾತ ಕಲಾವಿದರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಹರಿ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ​

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada