ಸತತ 42 ಗಂಟೆಗಳ ಬಳಿಕ ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಅಂತ್ಯ: ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​

ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಮುಕ್ತಾಯವಾಗಿದೆ. ನಗರದ ಮಾನ್ಯತಾ ಟೆಕ್​ಪಾರ್ಕ್‌ನಲ್ಲಿರುವ ನಿವಾಸದಲ್ಲಿ ಕಳೆದ 42 ಗಂಟೆಗಳಿಂದ ನಡೆದ ಪರಿಶೀಲನೆ ಅಂತ್ಯವಾಗಿದೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಮೆಟ್ರೋ ಕಾರ್ಪ್ ಕಂಪನಿ ಪಾಲುದಾರರಾಗಿರುವ ಪ್ರಮೋದ್, ಪ್ರದೀಪ್​​ಗೆ ಐಟಿಯಿಂದ ನೋಟಿಸ್​ ನೀಡಲಾಗಿದೆ. 

ಸತತ 42 ಗಂಟೆಗಳ ಬಳಿಕ ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಅಂತ್ಯ: ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​
ದಾಳಿ ವೇಳೆ ಪತ್ತೆ ಆಗಿರುವ ಹಣ
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2023 | 3:54 PM

ಬೆಂಗಳೂರು, ಅಕ್ಟೋಬರ್​​ 14: ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ (IT Raid) ಮುಕ್ತಾಯವಾಗಿದೆ. ನಗರದ ಮಾನ್ಯತಾ ಟೆಕ್​ಪಾರ್ಕ್‌ನಲ್ಲಿರುವ ನಿವಾಸದಲ್ಲಿ ಕಳೆದ 42 ಗಂಟೆಗಳಿಂದ ನಡೆದ ಪರಿಶೀಲನೆ ಅಂತ್ಯವಾಗಿದೆ. ಮಹತ್ವದ ದಾಖಲೆಗಳೊಂದಿಗೆ ಪಂಚನಾಮೆ ಕಾರ್ಯ ಪೂರ್ಣಗೊಳಿಸಿ ಐಟಿ ಅಧಿಕಾರಿಗಳು ಹೊರಟಿದ್ದಾರೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಮೆಟ್ರೋ ಕಾರ್ಪ್ ಕಂಪನಿ ಪಾಲುದಾರರಾಗಿರುವ ಪ್ರಮೋದ್, ಪ್ರದೀಪ್​​ಗೆ ಐಟಿಯಿಂದ ನೋಟಿಸ್​ ನೀಡಲಾಗಿದೆ.

ಐಟಿ ದಾಳಿ ಅಂತ್ಯ ಬಳಿಕ ಅಂಬಿಕಾಪತಿ ಪುತ್ರ ಪ್ರದೀಪ್​​ ಪ್ರತಿಕ್ರಿಯೆ ನೀಡಿದ್ದು, 15 ವರ್ಷಗಳಿಂದ ರಿಯಲ್ ಎಸ್ಟೇಟ್ ಹಾಗೂ ಬ್ಯುಸಿನೆಸ್ ಮಾಡುತ್ತಿದ್ದೇವೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿ ಬಿಡಿಸಿಕೊಳ್ಳುತ್ತೇವೆ. ಯಾವುದೇ ಹವಾಲ ಹಣ ಅಲ್ಲ, ನಮ್ಮ ಬ್ಯುಸಿನೆಸ್​ಗೆ ಸಂಬಂಧಿಸಿದ್ದು. ಐಟಿ ವಿಚಾರಣೆಗೆ ಹಾಜರಾಗಿ ಸೂಕ್ತ ದಾಖಲಾತಿ ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಮಂಚದ ಕೆಳಗೆ ಸಿಕ್ಕಿದ್ದು ಬರೋಬ್ಬರಿ 40 ಕೋಟಿ ರೂ. ಅಧಿಕ

ಐಟಿ ದಾಳಿ ವೇಳೆ ಮಂಚದ ಕೆಳಗೆ ಬರೋಬ್ಬರಿ 40 ಕೋಟಿ ರೂ. ಅಧಿಕ ಹಣ ಸಿಕ್ಕಿದೆ. ಈ ಕೋಟಿ ರಹಸ್ಯ ಬೇಧಿಸಿರುವದ ಐಟಿ ಅಧಿಕಾರಿಗಳು ಅಂಬಿಕಾ ಪತಿ ಮನೆಯಲ್ಲೇ ರಾತ್ರಿ ತಂಗಿದ್ದು, ಇವತ್ತು ಕೂಡಾ ಪರಿಶೀಲನೆ ಮುಂದುವರೆಸಿದ್ದರು. ಮಾನ್ಯತಾ ಟೆಕ್​ ಪಾರ್ಕ್​ನ ಮನೆಯಲ್ಲಿ ಶೋಧ ನಡೆದಿದ್ದು, ನಿನ್ನೆ ರಾತ್ರಿ ಲಾಕರ್​ನಲ್ಲಿ ಎರಡು ಸೂಟ್ ಕೇಸ್ ಪತ್ತೆಯಾಗಿದ್ದವು. ಇದರಲ್ಲಿ ಆಸ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳು ಪತ್ತೆಯಾಗಿದ್ದು, ಅಶ್ವತ್ತಮ್ಮ, ಅಂಬಿಕಾಪತಿ ಹೆಸರಿನ ದಾಖಲೆ ಪತ್ರಗಳು ಲಭ್ಯವಾಗಿದ್ದವು. ಚಿನ್ನಾಭರಣ, ಎಲ್ಲವನ್ನೂ ಕ್ರೋಢಿಕರಿಸಿ ಲೆಕ್ಕ ಹಾಕಿ ಜಪ್ತಿ ಮಾಡಲಾಗಿದ್ದು, ಎಲ್ಲದರ ದಾಖಲೆ ಪತ್ರಗಳನ್ನ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ ಸೋದರನ ಮನೆ ಮೇಲೆ ಐಟಿ ದಾಳಿ: ಆರೋಪಿ ಪ್ರದೀಪ್​ನನ್ನು ವಶಕ್ಕೆ ಪಡೆದ ಅಧಿಕಾರಿಗಳು

40 ಕೋಟಿ ಹಣದ ಮೂಲ ಯಾವುದು? ಎಲ್ಲಿಂದ ಹಣ ಬಂತು? ಈ ಹಣ ಯಾರದ್ದು? ಎಲ್ಲಿಗೆ ಸಾಗಾಟ ಮಾಡುವುಕ್ಕೆ ಬಾಕ್ಸ್​ಗಳಲ್ಲಿ ತುಂಬಲಾಗಿತ್ತು ಎನ್ನುವ ಆಯಾಮಗಳಲ್ಲಿ ಐಟಿ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ.

ಇದನ್ನೂ ಓದಿ: ದಾರಿಹೋಕರು ಆಡುವ ಮಾತಿಗೆ ಡಿಕೆ ಶಿವಕುಮಾರ್​ರನ್ನು ಕಟಕಟೆಯಲ್ಲಿ ನಿಲ್ಲಿಸಲಾಗಲ್ಲ: ಡಿಕೆ ಸುರೇಶ್, ಸಂಸದ

ಸದ್ಯ ಪ್ರಮೋದ್, ಪ್ರದೀಪ್​​ಗೆ ಐಟಿ ಅಧಿಕಾರಿಗಳು ನೋಟಿಸ್​ ನೀಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಮಂಗಳವಾರ ವಿಚಾರಣೆಗೆ ಬರುವಂತೆ ಐಟಿ ತಂಡ ತಿಳಿಸಿದ್ದು, 40 ಕೋಟಿಗೂ ಅಧಿಕ ಹಣಕ್ಕೆ ಅಂಬಿಕಾ ಪತಿ ಕುಟುಂಬ ಲೆಕ್ಕ ಕೊಡಬೇಕಿದೆ. ಹಣದ ಮೂಲ ಕೆದಕುವುದಕ್ಕೆ ಮುಂದಾಗಿರುವ ಐಟಿ ಅಧಿಕಾರಿಗಳು ಮಂಗಳವಾರದಿಂದ ಅಸಲಿ ತನಿಖೆ ಆರಂಭಿಸಲಿದ್ದಾರೆ.

ಅಂಬಿಕಾಪತಿ ಮನೆ ಮೇಲೂ ಐಟಿ ದಾಳಿ

ಈ ಘಟನೆಗೆ ಸಂಬಂಧಪಟ್ಟಂತೆ ಗುತ್ತಿಗೆದಾರ ಅಂಬಿಕಾಪತಿ ಮನೆ, ಆರ್​​ಟಿ ನಗರದ ವೈಟ್​ ಗೌಸ್​ನಲ್ಲಿರುವ ಅಂಬಿಕಾಪತಿ ಮಗಳ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಒಂದು ಮನೆ ಮತ್ತು ಆರ್​ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎರಡು ಕಡೆ ದಾಳಿ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ