ಕರ್ನಾಟಕದ ವಾಯುಗುಣಮಟ್ಟ: ಬೆಂಗಳೂರಿನಲ್ಲಿ ಎಕ್ಯೂಐ 177ಕ್ಕೆ ಏರಿಕೆ

ನವೆಂಬರ್ 23ರಂದು ಕರ್ನಾಟಕದ ಪ್ರಮುಖ ನಗರಗಳ ವಾಯು ಗುಣಮಟ್ಟ ಹೇಗಿದೆ? ಬೆಂಗಳೂರಿನಲ್ಲಿ AQI 177ಕ್ಕೆ ಏರಿಕೆಯಾಗಿದ್ದು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ನಗರಗಳ ವಾಯುಮಾಲಿನ್ಯದ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ರಾಜ್ಯದ ನಗರವಾರು AQI ವಿವರ, ಮಾಲಿನ್ಯಕ್ಕೆ ಕಾರಣಗಳು ಹಾಗೂ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದ ವಾಯುಗುಣಮಟ್ಟ: ಬೆಂಗಳೂರಿನಲ್ಲಿ ಎಕ್ಯೂಐ 177ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
Image Credit source: BEST2DAYNEWS

Updated on: Nov 23, 2026 | 7:06 AM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ನವೆಂಬರ್ 23ರಂದು ವಾಯುಮಾಲಿನ್ಯ ಹೆಚ್ಚಳ, AQI 177ಕ್ಕೆ ಏರಿಕೆ.
  • ಮೈಸೂರು, ಮಂಗಳೂರು, ಹುಬ್ಬಳ್ಳಿ ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ವ್ಯತ್ಯಾಸ.
  • ಮಕ್ಕಳು, ವೃದ್ಧರು ಉಸಿರಾಟದ ಸಮಸ್ಯೆಯವರು ಮಾಲಿನ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ಬೆಂಗಳೂರು, ನವೆಂಬರ್ 23: ರಾಜ್ಯದಲ್ಲಿ ಚಳಿಗಾಲದ ವಾತಾವರಣದ ನಡುವೆ ವಾಯುಮಾಲಿನ್ಯದ ಪ್ರಮಾಣವೂ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಏರಿಕೆಯಾಗಿದ್ದು, ಉಸಿರಾಟದ ಸಮಸ್ಯೆ ಇರುವವರು ಎಚ್ಚರಿಕೆ ವಹಿಸುವ ಅಗತ್ಯವಿದೆ. ನವೆಂಬರ್ 23ರ ಬೆಳಗಿನ ಲೈವ್ ವರದಿಗಳ ಪ್ರಕಾರ ಬೆಂಗಳೂರಿನಲ್ಲಿ AQI 177 ದಾಖಲಾಗಿದೆ. ಇನ್ನು ರಾಜ್ಯದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ನಗರಗಳಲ್ಲೂ ವಾಯು ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಿದೆ. ವಾಹನಗಳ ಹೊಗೆ, ಧೂಳು ಹಾಗೂ ವಾತಾವರಣದ ಬದಲಾವಣೆಗಳು ಮಾಲಿನ್ಯದ ಮೇಲೆ ಪರಿಣಾಮ ಬೀರುತ್ತಿವೆ.

ಬೆಂಗಳೂರಿನಲ್ಲಿ ವಾಯುಮಾಲಿನ್ಯ ಏರಿಕೆ

ಬೆಂಗಳೂರಿನಲ್ಲಿ AQI 177 ದಾಖಲಾಗಿದೆ. ಇದು ಕಳವಳಕಾರಿ ಮಟ್ಟವಾಗಿದ್ದು, ಸೂಕ್ಷ್ಮ ಕಣಗಳಾದ PM2.5 ಮತ್ತು PM10 ಪ್ರಮಾಣವೂ ಹೆಚ್ಚಿರುವುದು ಕಂಡುಬಂದಿದೆ. ಮತ್ತೊಂದೆಡೆ, ಟೈಮ್ಸ್ ಆಫ್ ಇಂಡಿಯಾದ ಬೆಳಗಿನ 5.20ರ ವರದಿಯಲ್ಲಿ ಬೆಂಗಳೂರಿನ AQI 208 ಎಂದು ದಾಖಲಾಗಿದೆ. ವಿವಿಧ ಲೈವ್ ಟ್ರ್ಯಾಕರ್‌ಗಳ ನಡುವೆ ಅಂಕಿಅಂಶಗಳಲ್ಲಿ ವ್ಯತ್ಯಾಸವಿರುವುದರಿಂದ ಇವುಗಳನ್ನು ಆಯಾ ವರದಿಯ ಸಮಯಕ್ಕೆ ಅನುಗುಣವಾಗಿ ಪರಿಗಣಿಸಬೇಕು.

Loading...

ನಗರದ ವಾಹನ ದಟ್ಟಣೆ, ನಿರ್ಮಾಣ ಕಾಮಗಾರಿಗಳ ಧೂಳು ಹಾಗೂ ಕೈಗಾರಿಕಾ ಚಟುವಟಿಕೆಗಳು ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಬೆಳಗಿನ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಸೂಕ್ತ.

ಕರ್ನಾಟಕದ ಇತರ ನಗರಗಳ ವಾಯು ಗುಣಮಟ್ಟ ಹೇಗಿದೆ?

  • ಬೆಂಗಳೂರು: 156
  • ಮೈಸೂರು: 118
  • ಮಂಗಳೂರು: 115
  • ಹುಬ್ಬಳ್ಳಿ : 80
  • ಬೆಳಗಾವಿ: 133
  • ದಾವಣಗೆರೆ: 154
  • ಬಳ್ಳಾರಿ: 108
  • ಕಲಬುರಗಿ: 72
  • ಶಿವಮೊಗ್ಗ: 68
  • ತುಮಕೂರು: 65
  • ಉಡುಪಿ: 92
  • ಕೋಲಾರ: 189

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us