ಕರ್ನಾಟಕದ ವಾಯು ಗುಣಮಟ್ಟ: 114ಕ್ಕೆ ಏರಿದ ಬೆಂಗಳೂರಿನ ಎಕ್ಯೂಐ, ಯಾವ ನಗರದಲ್ಲಿ ಎಷ್ಟಿದೆ ಮಾಲಿನ್ಯ?

ಕರ್ನಾಟಕದ ನವೆಂಬರ್ 27ರ ವಾಯು ಗುಣಮಟ್ಟ ವರದಿ ಇಲ್ಲಿದೆ. ಬೆಂಗಳೂರಿನಲ್ಲಿ AQI 114ಕ್ಕೆ ಏರಿಕೆಯಾಗಿದ್ದು, ಬೀದರ್ ಮತ್ತು ಬೆಳಗಾವಿಯಲ್ಲೂ ವಾಯು ಮಾಲಿನ್ಯ ದಾಖಲಾಗಿದೆ. ಮೈಸೂರು, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ನಗರಗಳ AQI ಎಷ್ಟಿದೆ? ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟ, ಮಾಲಿನ್ಯದ ಪ್ರಮಾಣ ಹಾಗೂ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಸಂಪೂರ್ಣ ಮಾಹಿತಿ ತಿಳಿಯಿರಿ.

ಕರ್ನಾಟಕದ ವಾಯು ಗುಣಮಟ್ಟ: 114ಕ್ಕೆ ಏರಿದ ಬೆಂಗಳೂರಿನ ಎಕ್ಯೂಐ, ಯಾವ ನಗರದಲ್ಲಿ ಎಷ್ಟಿದೆ ಮಾಲಿನ್ಯ?
ಸಾಂದರ್ಭಿಕ ಚಿತ್ರ
Image Credit source: Bengalore Mirror

Updated on: Nov 27, 2026 | 8:22 AM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕ 114ಕ್ಕೆ ಏರಿಕೆಯಾಗಿದೆ.
  • ಬೀದರ್‌ನಲ್ಲಿ 83, ಬೆಳಗಾವಿಯಲ್ಲಿ 75 AQI ದಾಖಲಾಗಿದ್ದು, ಮಾಲಿನ್ಯ ಹೆಚ್ಚಳ.
  • ಮಡಿಕೇರಿ, ಚಿಕ್ಕಮಗಳೂರು ನಗರಗಳಲ್ಲಿ ವಾಯು ಗುಣಮಟ್ಟ ಉತ್ತಮವಾಗಿದೆ.

ಬೆಂಗಳೂರು, ನವೆಂಬರ್ 27: ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟದ ಮೇಲೆ ನಿಗಾ ವಹಿಸಲಾಗಿದ್ದು, ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಇಂದು ಲಭ್ಯವಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 114ಕ್ಕೆ ತಲುಪಿದೆ. ಇದು ಕಳಪೆ ಗಾಳಿಯ ಗುಣಮಟ್ಟದ ವರ್ಗಕ್ಕೆ ಸೇರುತ್ತದೆ. ವಾಹನಗಳ ಹೊಗೆ, ರಸ್ತೆ ಧೂಳು ಹಾಗೂ ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ಮಾಲಿನ್ಯ ನಗರ ಪ್ರದೇಶಗಳ ಗಾಳಿಯ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯದ ಇತರ ನಗರಗಳಲ್ಲಿನ ವಾಯು ಗುಣಮಟ್ಟವೂ ಗಮನ ಸೆಳೆಯುತ್ತಿದೆ.

ಬೆಂಗಳೂರು ವಾಯು ಗುಣಮಟ್ಟ

ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 114 ದಾಖಲಾಗಿದೆ. ನವೆಂಬರ್ 26ರಂದು ಇದು 83ರಷ್ಟಿತ್ತು. ಅಂದರೆ ಒಂದೇ ದಿನದಲ್ಲಿ AQI ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. PM2.5 ಪ್ರಮಾಣ 41 ಹಾಗೂ PM10 ಪ್ರಮಾಣ 54 ದಾಖಲಾಗಿದೆ. ನಗರದ ಸಂಚಾರ ದಟ್ಟಣೆ, ವಾಹನಗಳ ಹೊಗೆ ಮತ್ತು ರಸ್ತೆ ಕಾಮಗಾರಿಗಳ ಧೂಳು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ.

Loading...

ಕರ್ನಾಟಕದ ಇತರ ನಗರಗಳ AQI ಎಷ್ಟಿದೆ?

  • ಬೀದರ್: 83
  • ಬೆಳಗಾವಿ: 75
  • ಧಾರವಾಡ: 60
  • ಹುಬ್ಬಳ್ಳಿ: 57
  • ಶಿವಮೊಗ್ಗ: 57
  • ಬೆಂಗಳೂರು: 55
  • ಕಲಬುರಗಿ: 55
  • ಮಂಗಳೂರು: 55
  • ಹಾವೇರಿ: 54
  • ಮೈಸೂರು: 43
  • ದಾವಣಗೆರೆ : 42
  • ಚಿಕ್ಕಬಳ್ಳಾಪುರ: 41
  • ಹಾಸನ: 29
  • ಮಡಿಕೇರಿ: 18
  • ಚಿಕ್ಕಮಗಳೂರು: 15

ವಾಯು ಮಾಲಿನ್ಯದಿಂದ ಆರೋಗ್ಯದ ಮೇಲಾಗುವ ಪರಿಣಾಮ

ವಾಯು ಮಾಲಿನ್ಯ ಹೆಚ್ಚಾದಾಗ ಮಕ್ಕಳು, ವೃದ್ಧರು ಹಾಗೂ ಅಸ್ತಮಾ ಮತ್ತು ಹೃದಯ ಸಂಬಂಧಿ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. PM2.5 ಮತ್ತು PM10 ಕಣಗಳು ಉಸಿರಾಟದ ತೊಂದರೆ, ಕೆಮ್ಮು ಹಾಗೂ ಕಣ್ಣು ಉರಿಯುವಿಕೆಗೆ ಕಾರಣವಾಗಬಹುದು. ಮಾಲಿನ್ಯ ಹೆಚ್ಚಿರುವ ಸಮಯದಲ್ಲಿ ಹೊರಾಂಗಣ ವ್ಯಾಯಾಮವನ್ನು ಕಡಿಮೆ ಮಾಡುವುದು, ಅಗತ್ಯವಿದ್ದಾಗ N95 ಮಾಸ್ಕ್ ಧರಿಸುವುದು ಮತ್ತು ಸ್ಥಳೀಯ AQI ವರದಿಯನ್ನು ಪರಿಶೀಲಿಸುವುದು ಉತ್ತಮ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 am, Fri, 27 November 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಪತ್ರಿಕೋದ್ಯಮ ಇವರು ಇಷ್ಟಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್‌ನಲ್ಲಿ ವೃತ್ತಿ ಜೀವನ ಆರಂಭಿಸಿರುವ ಇವರು, ಸಂಸ್ಥೆಯಲ್ಲಿ ಒಂದು ವರ್ಷದ ವೃತ್ತಿ ಅನುಭವ ಹೊಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us