ಖಡ್ಗಕ್ಕಿಂತ ಶಕ್ತಿ ಅಂಬೇಡ್ಕರ್ ಲೇಖನಿ; ಸಿಎಂ ಬಸವರಾಜ ಬೊಮ್ಮಾಯಿ ಮಾತು
ಮಹಿಳಾ ಸಬಲೀಕರಣ ಮಾಡುತ್ತೇವೆ. ಸ್ವಯಂ ಉದ್ಯೋಗ ರೂಪಿಸುತ್ತೇವೆ. ಯುವಕರಲ್ಲಿ ಕೌಶಲ್ಯ ಅಭಿವೃದ್ಧಿ ಮಾಡುತ್ತೇವೆ. ಇವೆರಡನ್ನು ಆದಷ್ಟು ಬೇಗ ಮಾಡುತ್ತೇವೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಅಂತ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು: ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸಂವಿಧಾನವಿದೆ ಎಂದು ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಡಾ.ಅಂಬೇಡ್ಕರ್ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಶಾಂತಿ ಸಮಾನತೆ ಬದುಕಿನ ಸಂವಿಧಾನವನ್ನು ಕೊಟ್ಟಿದ್ದಾರೆ. ಸರ್ಕಾರ ಆಯ್ಕೆ ಮಾಡುವ ಅಧಿಕಾರ ಕೊಟ್ಟಿದ್ದು ಅಂಬೇಡ್ಕರ್. ಬುದ್ಧ ಶ್ರೇಷ್ಠ ತತ್ವಜ್ಞಾನಿ. ತನ್ನಲ್ಲಿದ್ದ ಜ್ಞಾನ, ತತ್ವಗಳನ್ನ ಪ್ರಪಂಚಕ್ಕೆ ಪ್ರಚಾರ ಮಾಡಿದರು. ಸಮಾನತೆ, ಗೌರವ ಹಾಗೂ ಆಸೆಗೆ ಅವಕಾಶವಿಲ್ಲ. ಸೇವೆಗೆ ಅವಕಾಶವಿದೆ ಅಂತಾ ತಿಳಿಸಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಸದಾಶಿವನಗರದಲ್ಲಿರುವ ನಾಗಸೇನಾ ವಿದ್ಯಾಲಯದಲ್ಲಿ ರಾಷ್ಟ್ರೀಯ ಬೌದ್ಧ ಧಮ್ಮಾಧಿವೇಶನ ಸಮಾರಂಭ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡಿದರು. ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದ ಅವರು, ಭಾರತ ಪುಣ್ಯಭೂಮಿ ಎಂದು ಬುದ್ಧ ನಿರೂಪಿಸಿದ್ದಾರೆ. ಮೂಲಭೂತ ಬದಲಾವಣೆ ತಂದಿದ್ದು ನಮ್ಮ ದೇಶದ ವ್ಯಕ್ತಿಗಳು. ಲೌಕಿಕವಾಗಿ ವೈಜ್ಞಾನಿಕವಾಗಿ ಬದಲಾವಣೆ ತಂದಿದ್ದು ವ್ಯಕ್ತಿಗಳು ಅಂತ ಹೇಳಿಕೆ ನೀಡಿದರು.
ಮಹಿಳಾ ಸಬಲೀಕರಣ ಮಾಡುತ್ತೇವೆ. ಸ್ವಯಂ ಉದ್ಯೋಗ ರೂಪಿಸುತ್ತೇವೆ. ಯುವಕರಲ್ಲಿ ಕೌಶಲ್ಯ ಅಭಿವೃದ್ಧಿ ಮಾಡುತ್ತೇವೆ. ಇವೆರಡನ್ನು ಆದಷ್ಟು ಬೇಗ ಮಾಡುತ್ತೇವೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಅಂತ ಬೊಮ್ಮಾಯಿ ತಿಳಿಸಿದ್ದಾರೆ.
ಅಸ್ಪೃಶ್ಯತೆ ಶಾಶ್ವತವಾಗಿ ಹೋಗಲಾಡಿಸಲು ಸಂವಿಧಾನ ರೂಪಿಸಿದ್ದು ಬಾಬಾ ಸಾಹೇಬ್ ಅಂಬೇಡ್ಕರ್. ಸಂವಿಧಾನ ರಚನೆಯಾಗದಿದ್ದರೇ ದೇಶ ಅಲ್ಲೋಲಕಲ್ಲೋಲವಾಗುತ್ತಿತ್ತು. ಎಲ್ಲ ಕಡೆಯೂ ಸಾಮಾಜಿಕ ಅಸಮಾನತೆ ಎದ್ದುಕಾಣುತ್ತಿತ್ತು. ಹೀಗಾಗಿ ಮತ್ತೊಬ್ಬ ಬುದ್ಧ ಅಂದ್ರೆ ಡಾ ಬಿ ಆರ್ ಅಂಬೇಡ್ಕರ್. ಖಡ್ಗಕ್ಕಿಂತ ಶಕ್ತಿ ಅಂಬೇಡ್ಕರ್ ಅವರ ಲೇಖನಿ. ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ರೂಪಿಸಿದರು ಅಂಬೇಡ್ಕರ್ ಅಂತ ಕಾರ್ಯಕ್ರಮದಲ್ಲಿ ಸಿಎಂ ನುಡಿದರು.
ಇದನ್ನೂ ಓದಿ
Ravichandran Ashwin: ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ದಾಖಲೆಯ ಹೊಸ್ತಿಲಲ್ಲಿ ರವಿಚಂದ್ರನ್ ಅಶ್ವಿನ್