ಸಂಚಾರ ನಿಯಮ ಉಲ್ಲಂಘನೆ, ದಂಡ ಸಂಗ್ರಹದಲ್ಲಿ ಕರ್ನಾಟಕವೇ ಮುಂದೆ: ಎಡಿಜಿಪಿ ಅಲೋಕ್ ಕುಮಾರ್
ಆಗಸ್ಟ್ 1 ರಿಂದ 9 ರವರೆಗೆ ದೇಶಾದ್ಯಂತ ವಿತರಿಸಲಾದ ಇ-ಚಲನ್ಗಳ ವಿವರವನ್ನು ಟ್ವೀಟ್ ಮಾಡಿರುವ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್‘ಇ-ಚಲನ್ ಬಳಸಿ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಸಂಗ್ರಹಕ್ಕೆ ಸಂಬಂಧಿಸಿದಂತೆ ಕರ್ನಾಟಕವು ಇಡೀ ದೇಶದಲ್ಲಿ ಬಹಳ ಮುಂದಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು, ಆಗಸ್ಟ್ 10: ಸಂಚಾರ ನಿಯಮ ಉಲ್ಲಂಘನೆಗೆ (traffic violations) ಸಂಬಂಧಿಸಿದಂತೆ ಇ-ಚಲನ್ ಮೂಲಕ ದಂಡ ಸಂಗ್ರಹದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಬಹಳ ಮುಂದಿದೆ. ಕರ್ನಾಟಕದಿಂದ 50% ಕ್ಕಿಂತ ಹೆಚ್ಚು ಇ-ಚಲನ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಗುರುವಾರ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಆಗಸ್ಟ್ 1 ರಿಂದ 9 ರವರೆಗೆ ದೇಶಾದ್ಯಂತ ವಿತರಿಸಲಾದ ಇ-ಚಲನ್ಗಳ ವಿವರವನ್ನು ಟ್ವೀಟ್ ಮಾಡಿರುವ ಅವರು, ‘ಇ-ಚಲನ್ ಬಳಸಿ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಸಂಗ್ರಹಕ್ಕೆ ಸಂಬಂಧಿಸಿದಂತೆ ಕರ್ನಾಟಕವು ಇಡೀ ದೇಶದಲ್ಲಿ ಬಹಳ ಮುಂದಿದೆ. ಕರ್ನಾಟಕದಿಂದಲೇ ಶೇ.50ಕ್ಕೂ ಹೆಚ್ಚು ಇ-ಚಲನ್ ನೀಡಲಾಗಿದ್ದು, ಶೀಘ್ರದಲ್ಲೇ ಇಡೀ ರಾಜ್ಯವನ್ನು ಇ-ಚಲನ್ ವ್ಯಾಪ್ತಿಗೆ ತರಲಾಗುವುದು. ಆ ಮೂಲಕ ಈಗಿರುವ ವ್ಯವಸ್ಥೆಯನ್ನು ಕೈಬಿಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಮೂರು ದಿನ ಬೆಳಗ್ಗೆ ಕೆಲ ಗಂಟೆಗಳ ಸಮಯ ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯ
ಎಡಿಜಿಪಿ ಅಲೋಕ್ ಕುಮಾರ್ ಪ್ರಕಾರ, ಆಗಸ್ಟ್ 1 ರಿಂದ 9 ರವರೆಗೆ ಕರ್ನಾಟಕವು 24,694 ಇ-ಚಲನ್‌ಗಳನ್ನು ನೀಡಲಾಗಿದೆ. ಇವರೆಗೆ ಒಟ್ಟು 1,22,92,500 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ. ಅಪರಾಧಿಗಳಿಂದ 55,500 ರೂ. ದಂಡ ಸಂಗ್ರಹಿಸಲಾಗಿದೆ.
Traffic Violation related fine collection using E-Challan , Karnataka is far far ahead in the whole country
More than 50% E-Challan generation from Karnataka itself
Very soon whole state is going to be covered by E-Challan , discarding the manual receipt system pic.twitter.com/YW3zZWF73A
— alok kumar (@alokkumar6994) August 10, 2023
ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್ ಮೂಲಕ ದಂಡ ಸಂಗ್ರಹ ವಿಚಾರವಾಗಿ ಕರ್ನಾಟಕವನ್ನು ತಮಿಳುನಾಡು ಅನುಸರಿಸುತ್ತಿದ್ದು, 7,160 ಇ-ಚಲನ್ ದಂಡ ಸಂಗ್ರಹಿಸಲಾಗಿದೆ. 59 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಇನ್ನು ಮಹಾರಾಷ್ಟ್ರವು 4,468 ಇ-ಚಲನ್‌ಗಳನ್ನು ನೀಡುವ ಮೂಲಕ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ನಾಳೆಯಿಂದ ಆಗಸ್ಟ್ 14ರ ವರೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ; ಇಲ್ಲಿದೆ ಪೂರ್ಣ ವಿವರ
ಮಿಜೋರಾಂ, ಸಿಕ್ಕಿಂ ಮತ್ತು ಇತರ ಪ್ರಾಂತ್ಯಗಳಲ್ಲಿ ಯಾವುದೇ ಇ-ಚಲನ್‌ಗಳನ್ನು ನೀಡಿಲ್ಲ. ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಲಕ್ಷದ್ವೀಪ, ಒಡಿಶಾ ಮತ್ತು ಚಂಡೀಗಢದಲ್ಲಿ ಈ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇತ್ತು.
ಕರ್ನಾಟಕ ಸರ್ಕಾರವು ಈ ವರ್ಷದ ಫೆಬ್ರವರಿಯಲ್ಲಿ ಸಂಚಾರ ಉಲ್ಲಂಘನೆಯ ಬಗ್ಗೆ ಬಾಕಿ ಇರುವ ಇ-ಚಲನ್ ಗಳಿಗೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ಘೋಷಿಸಿತ್ತು. ಈ ಯೋಜನೆಯನ್ನು ಜುಲೈ 5 ರಂದು ಪುನರಾರಂಭಿಸಲಾಗಿದ್ದು, ಸೆಪ್ಟೆಂಬರ್ 9ರ ವರೆಗೆ ನಿಗದಿಪಡಿಸಲಾಗಿದೆ. ಫೆಬ್ರವರಿ 11, 2023 ರಂದು ಅಥವಾ ಅದಕ್ಕಿಂತ ಮೊದಲು ದಾಖಲಾದ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯಿಸುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:11 pm, Thu, 10 August 23