AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಮಳೆ ಅಬ್ಬರ: ಜಿಲ್ಲೆಯ ಹಲವು ಕಡೆ ಅವಾಂತರ, ಗಣೇಶ ಹಬ್ಬದ ಸಂಭ್ರಮದಲ್ಲಿರ ಬೇಕಿದ್ದ ಜನರಿಗೆ ಜಲ ಕಂಟಕ

ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ರಾಜಕಾಲುವೆ ಮುಚ್ಚಿದ್ದಕ್ಕೆ ನಡುರಸ್ತೆಗೆ ಮಳೆ ನೀರು ನುಗ್ಗಿದೆ. ಮಾರತ್‌ಹಳ್ಳಿಯ ಇಕೋ ಸ್ಪೇಸ್ ಬಳಿಯ ಮುಖ್ಯರಸ್ತೆ ಜಲಾವೃತಗೊಂಡಿದೆ. ಕೈಗೊಂಡನಹಳ್ಳಿ, ಸರ್ಜಾಪುರ ಕೆರೆಗಳ ನೀರು ರಸ್ತೆಗೆ ರಭಸವಾಗಿ ಹರಿದು ಬರುತ್ತಿದೆ.

ರಾಜ್ಯದಲ್ಲಿ ಮಳೆ ಅಬ್ಬರ: ಜಿಲ್ಲೆಯ ಹಲವು ಕಡೆ ಅವಾಂತರ, ಗಣೇಶ ಹಬ್ಬದ ಸಂಭ್ರಮದಲ್ಲಿರ ಬೇಕಿದ್ದ ಜನರಿಗೆ ಜಲ ಕಂಟಕ
ಬೆಂಗಳೂರು ಮಳೆ
TV9 Web
| Edited By: |

Updated on:Aug 31, 2022 | 10:21 AM

Share

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ(Karnataka Rains). ಮಳೆಗೆ ಹಲವು ಜಿಲ್ಲೆಗಳಲ್ಲಿ ಅವಘಡಗಳು ಸಂಭವಿಸುತ್ತಿವೆ. ರಸ್ತೆಗಳು ಕರೆಯಂತಾಗಿವೆ. ಮಳೆ ನೀರು ಮನೆಗೆ ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮನೆಗಳ ಕುಸಿತ, ಗ್ರಾಮಗಳು ಜಲಾವೃತ, ಬೆಳೆ ನಾಶ ಹೀಗೆ ವರುಣನ ಹೊಡೆತಕ್ಕೆ ಸಾಕಷ್ಟು ಅವಾಂತರಗಳಾಗಿವೆ.

ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ರಾಜಕಾಲುವೆ ಮುಚ್ಚಿದ್ದಕ್ಕೆ ನಡುರಸ್ತೆಗೆ ಮಳೆ ನೀರು ನುಗ್ಗಿದೆ. ಮಾರತ್‌ಹಳ್ಳಿಯ ಇಕೋ ಸ್ಪೇಸ್ ಬಳಿಯ ಮುಖ್ಯರಸ್ತೆ ಜಲಾವೃತಗೊಂಡಿದೆ. ಕೈಗೊಂಡನಹಳ್ಳಿ, ಸರ್ಜಾಪುರ ಕೆರೆಗಳ ನೀರು ರಸ್ತೆಗೆ ರಭಸವಾಗಿ ಹರಿದು ಬರುತ್ತಿದೆ. ಮಾರತ್‌ಹಳ್ಳಿ-ಸರ್ಜಾಪುರ ಔಟರ್‌ ರಿಂಗ್‌ರೋಡ್ ಜಲಾವೃತವಾಗಿದೆ.

ಕೆರೆಗಳು ಭರ್ತಿಯಾಗಿ ಬೆಳೆ ಹಾನಿ

ಇನ್ನು ದೇವನಹಳ್ಳಿಯಲ್ಲೂ ಇದೇ ರೀರಿಯ ಪರಿಸ್ಥಿತಿ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಗ್ರಾಮದಲ್ಲಿ ಕಳೆದ ಎರಡು‌ ದಿನದಿಂದ ಬಿದ್ದ ಭಾರಿ ಮಳೆಗೆ ಕೆರೆಗಳು ಭರ್ತಿಯಾಗಿ ಬೆಳೆ ಹಾನಿಯಾಗಿದೆ. ಗದ್ದೆಯಲ್ಲಿ ನೀರು ನಿಂತಿದೆ. ದ್ರಾಕ್ಷಿ, ಜೋಳ, ರಾಗಿ ಸೇರಿದಂತೆ ಹಲವು ಬೆಳೆಗಳು ಮಳೆ ನೀರಿನಿಂದ ಜಲಾವೃತವಾಗಿದ್ದು ಇದನ್ನು ರೈತ ತನ್ನ ಡ್ರೋನ್ ಕ್ಯಾಮಾರದಲ್ಲಿ ಸೆರೆಹಿಡಿದಿದ್ದಾನೆ.

ಪೊಲೀಸ್ ಬಿಗಿ ಭದ್ರತೆ ಒದಗಿಸುವಂತೆ ಸಾರ್ವಜನಿಕರ ಮನವಿ

ನಿರಂತರ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗುಂಡಾಲ್ ಜಲಾಶಯ ಭರ್ತಿಯಾಗಿದೆ. ತುಂಬಿ ಹರಿಯುತ್ತಿರುವ ಡ್ಯಾಂನಲ್ಲಿ ಯುವಕರು ದುಸ್ಸಾಹಸ ಎಸಗುತ್ತಿದ್ದಾರೆ. ಜಲ ವೈಭವ ಕಣ್ತುಂಬಿಕೊಳ್ಳುವ ನೆಪದಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ. ಈಜಲು ಹೋಗಿ ಪ್ರಾಣ ಪಣಕ್ಕಿಡುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಮಳೆಗೆ ಕೋಲಾರದಲ್ಲಿ ಅಪಾರ ಹಾನಿ

ಕೋಲಾರದಲ್ಲಿ ನಿರಂತರ ಮಳೆಯಿಂದ ಹಲವೆಡೆ ಅವಾಂತರಗಳಾಗಿವೆ. ಹೋಳೂರು ಗ್ರಾಮದ ಬಳಿ ಹತ್ತಾರು ಎಕರೆ ಜಮೀನು ಮುಳುಗಿದೆ. ಹೋಳೂರು-ಬೆಳ್ಳಂಬರಿ ಗ್ರಾಮಕ್ಕೆ ರಸ್ತೆ ಸಂಚಾರ ಬಂದ್ ಆಗಿದೆ. ಅವೈಜ್ಞಾನಿಕ ಚೆಕ್​ಡ್ಯಾಂ ನಿರ್ಮಾಣದಿಂದ ಜನರು ಪರದಾಡುವಂತಾಗಿದೆ. ಮುದುವಾಡಿ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಒಂದು ಸಾವಿರ ಎಕರೆಗೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ, ಕೋಲಾರ ಜಿಲ್ಲೆಯ ದೊಡ್ಡಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ಮುದುವಾಡಿ ಕೆರೆ, ಶ್ರೀನಿವಾಸಪುರ ರಸ್ತೆಯಲ್ಲಿ ತುಂಬಿ ಹರಿಯುತ್ತಿದೆ. ಕೆರೆಗೆ ಒಳಹರಿವು ಹೆಚ್ಚಾಗಿ ನೀರಿನ ರಭಸ ಜೋರಾಗಿರುವ ಕಾರಣ ಯಾರೂ ನೀರಿಗೆ ಇಳಿಯಂದತೆ ಬ್ಯಾರಿಕೇಟ್ ಹಾಕಿ ಎಚ್ಚರಿಕೆ ವಹಿಸಲಾಗಿದೆ.

ಗಣೇಶ ಹಬ್ಬದ ದಿನವೇ ಸಂಕಷ್ಟ

ದಾವಣಗೆರೆಯಲ್ಲಿ ಗಣೇಶನ ಪ್ರವೇಶ ಮಾಡಲು ಇಂದು ಸಿದ್ಧತೆ ಮಾಡಿಕೊಂಡಿದ್ದ ಮನೆ ತುಂಬೆಲ್ಲಾ ಮಳೆ ನೀರು ಆವರಿಸಿದೆ. ಜಗಳೂರಿನ ಪ್ರತಿಷ್ಠಿತ ಬಡಾವಣೆ ಜನಕ್ಕೆ ಗಣೇಶ ಹಬ್ಬದ ದಿನವೇ ಸಂಕಷ್ಟ ಎದುರಾಗಿದೆ. ಕೃಷ್ಣ ದೇವೇಗೌಡ ಹಾಗೂ ರಂಗನಾಥ ಬಡಾವಣೆಯ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಸಂಕಷ್ಟದಲ್ಲಿರುವ ಜನ ಪುರ ಸಭೆಯ ಆಧಿಕಾರಿಗಳಿಗೆ ಕರೆ ಮಾಡುತ್ತಿದ್ದು ಅಧಿಕಾರಿಗಳು ಫೋನ್ ತೆಗೆಯುತ್ತಿಲ್ಲ. ಹೀಗಾಗಿ ಜನ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:21 am, Wed, 31 August 22

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ