AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹವಾಮಾನ ವರದಿ: ಇನ್ನೆರಡು ದಿನಗಳಲ್ಲಿ ಬೆಳಗಾವಿ, ಬೀದರ್ ಸೇರಿ ಹಲವೆಡೆ ಶೀತದಲೆಯ ಮುನ್ಸೂಚನೆ

Karnataka Weather: ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಕೆಲ ದಿನಗಳಿಂದ ಒಣ ಹವೆಯ ವಾತಾವರಣ ಇದ್ದು, ಇಂದೂ ಅದೇ ಹವಾಮಾನವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 2 ದಿನಗಳಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್ ಸೇರಿದಂತೆ ಹಲವೆಡೆ ಶೀತದಲೆಯಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣದ ಮುನ್ಸೂಚನೆ ಇದೆ.

ಕರ್ನಾಟಕ ಹವಾಮಾನ ವರದಿ: ಇನ್ನೆರಡು ದಿನಗಳಲ್ಲಿ ಬೆಳಗಾವಿ, ಬೀದರ್ ಸೇರಿ ಹಲವೆಡೆ ಶೀತದಲೆಯ ಮುನ್ಸೂಚನೆ
ಇನ್ನೆರಡು ದಿನಗಳಲ್ಲಿ ಬೆಳಗಾವಿ, ಬೀದರ್ ಸೇರಿ ಹಲವೆಡೆ ಶೀತದಲೆಯ ಮುನ್ಸೂಚನೆ
ಭಾವನಾ ಹೆಗಡೆ
|

Updated on:Dec 13, 2025 | 7:37 AM

Share

ಬೆಂಗಳೂರು, ಡಿಸೆಂಬರ್ 13: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವಿದ್ದು (Weather Forecast) , ಮೈಕೊರೆಯುವ ಚಳಿಯಲ್ಲಿಯೂ ಏರಿಕೆಯಾಗುತ್ತಿದೆ. ಬೆಳಗಾವಿ, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನಗಳಲ್ಲಿ ಶೀತದ ಅಲೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಲವು ದಿನಗಳಿಂದ ಒಣ ಹವೆಯ ವಾತಾವರಣ ಇದ್ದು, ಇಂದೂ ಅದೇ ಹವಾಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವೆಲ್ಲಾ ಪ್ರದೇಶಗಳಲ್ಲಿ ಶೀತದಲೆ

ಮುಂದಿನ 2 ದಿನಗಳವರೆಗೆ ಕರ್ನಾಟಕದಾದ್ಯಂತ ತಾಪಮಾನದಲ್ಲಿ ಇಳಿಕೆಯಾಗಲಿದ್ದು, ಮುಂದಿನ 2 ದಿನಗಳಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ, ವಿಜಯಪುರ, ರಾಯಚೂರು, ಯಾದಗಿರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ ಮತ್ತು ದಕ್ಷಿಣ ಒಳನಾಡಿನ ವಿಜಯನಗರ ಜಿಲ್ಲೆಗಳಲ್ಲಿ ತೀವ್ರ ಶೀತ ಅಲೆಯ ಸಾಧ್ಯತೆ ಹೆಚ್ಚು.

ಎಲ್ಲೆಲ್ಲಿ ಒಣ ಹವೆ

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ

ಬೆಂಗಳೂರಲ್ಲಿ ಇಂದು ಮಂಜು ಮುಸುಕಿದ ವಾತಾವರಣವಿದ್ದು, ಚಳಿಯ ಪ್ರಮಾಣ ಹೆಚ್ಚುತ್ತಲೇ ಇದೆ. ಗಾಳಿಯ ವೇಗ ಪ್ರತಿ ಗಂಟೆಗೆ 8 ಕಿ.ಮೀ ಇರಲಿದೆ. ಗರಿಷ್ಠ ತಾಪಮಾನ 28°C ಮತ್ತು ಕನಿಷ್ಠ ತಾಪಮಾನ 15.°C ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:28 am, Sat, 13 December 25

ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ
ಮದುವೆ ಮನೆಗೆ ನುಗ್ಗಿ ಮಂಗಳಮುಖಿಯರ ರಂಪಾಟ: ವಿಡಿಯೋ ನೋಡಿ
ಮದುವೆ ಮನೆಗೆ ನುಗ್ಗಿ ಮಂಗಳಮುಖಿಯರ ರಂಪಾಟ: ವಿಡಿಯೋ ನೋಡಿ
ಅಜಿತ್​​​ ಪವರ್​​​ ಸಾವು ಪ್ರಕರಣದ ಹೊಸ ಅಪ್ಡೇಟ್
ಅಜಿತ್​​​ ಪವರ್​​​ ಸಾವು ಪ್ರಕರಣದ ಹೊಸ ಅಪ್ಡೇಟ್
ಕೈ ಶಾಸಕರಿಂದ ವಿದೇಶ ಪ್ರವಾಸ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ ಆಪ್ತ
ಕೈ ಶಾಸಕರಿಂದ ವಿದೇಶ ಪ್ರವಾಸ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ ಆಪ್ತ
‘ತಾಯಿ ಸ್ಥಾನದಲ್ಲಿರುವ ಜಯಮಾಲಾಗೆ ಕ್ಷಮೆ ಕೇಳುತ್ತೇನೆ’; ಚಕ್ರವರ್ತಿ
‘ತಾಯಿ ಸ್ಥಾನದಲ್ಲಿರುವ ಜಯಮಾಲಾಗೆ ಕ್ಷಮೆ ಕೇಳುತ್ತೇನೆ’; ಚಕ್ರವರ್ತಿ