Karnataka Weather Forecast: ಮುಂದಿನ ಒಂದು ವಾರ ರಾಜ್ಯದ ಈ ಭಾಗಗಳಲ್ಲಿ ಮಳೆ, ಉತ್ತರ ಒಳನಾಡಿಗೆ ಬಿಸಿ ಗಾಳಿಯ ಎಚ್ಚರಿಕೆ
Monsoon 2026: ರಾಜ್ಯದಲ್ಲಿ ಮುಂಗಾರು ಕೊರತೆಯ ನಡುವೆಯೂ ಮುಂದಿನ ಒಂದು ವಾರದ ಕಾಲ ಹಲವೆಡೆ ಮಳೆಯಾಗಲಿದ್ದು, ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜೂನ್ 21 ರಿಂದ ಭಾರಿ ಮಳೆಯ ಮುನ್ಸೂಚನೆಯೊಂದಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಯ ಅವಧಿಯಲ್ಲಿ ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು, ಜೂನ್ 19: ಮುಂಗಾರು ಮಳೆಯ ಅಭಾವದ ನಡುವೆಯೂ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ಒಂದು ವಾರದವರೆಗೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 21ರಿಂದ 25ರವರೆಗೆ ಮತ್ತು ಒಳನಾಡು ಜಿಲ್ಲೆಗಳಲ್ಲಿ ಜೂನ್ 22 ಮತ್ತು 23ರಂದು ಮಳೆಯನ್ನು ಅಂದಾಜಿಲಾಗಿದೆ. ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಈ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಖ್ಯಾಂಶಗಳು
- ರಾಜ್ಯದ ಹಲವೆಡೆ ಮುಂದಿನ ಒಂದು ವಾರದವರೆಗೆ ಮಳೆ ಮುನ್ಸೂಚನೆ
- ಕರಾವಳಿ ಜಿಲ್ಲೆಗಳಲ್ಲಿ ಜೂನ್ 21ರಿಂದ 25ರವರೆಗೆ ವರುಣಾರ್ಭಟ ಸಾಧ್ಯತೆ
- ಒಳನಾಡು ಜಿಲ್ಲೆಗಳಲ್ಲಿ ಜೂನ್ 22 ಮತ್ತು 23ರಂದು ಮಳೆಯ ನಿರೀಕ್ಷೆ
ಎಲ್ಲೆಲ್ಲಿ ಮಳೆ ಸಾಧ್ಯತೆ?
#ಮಳೆ #ಮುನ್ನೆಚ್ಚರಿಕೆ :#Heavy #rainfall (64.5mm to 115.4mm) #Warning for #Karnataka. #yellow #alert@KarnatakaVarthe #KSNDMC #KarnatakaRains #Southwestmonsoon #Monsoon2026 pic.twitter.com/VWB0ANc1QY
— Karnataka State Natural Disaster Monitoring Centre (@KarnatakaSNDMC) June 19, 2026
ಮುಂದಿನ 24 ಗಂಟೆಯ ಅವಧಿಯಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ. ಹಾಗೆಯೇ ಉತ್ತರ ಒಳನಾಡಿನಲ್ಲಿಯೂ ಗುಡುಗು ಮತ್ತು ಗಾಳಿ ಸಹಿತ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡು ಭಾಗದ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದಲ್ಲಿಯೂ ಗುಡುಗು ಸಹಿತ ಸಾಧಾರಣ ಮಳೆ ಅಂದಾಜಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಕ್ಷೀಣಿಸಿದ ಮುಂಗಾರು; ಜೂನ್ 4ರಿಂದ 18ರವರೆಗೆ ಶೇ. 42ಕ್ಕೆ ಏರಿದ ಮಳೆ ಕೊರತೆ ಪ್ರಮಾಣ!
ಬಿಸಿ ಮತ್ತು ತೇವಾಂಶ ಗಾಳಿಯ ಎಚ್ಚರಿಕೆ
🚨ಬಿಸಿ ಗಾಳಿ & ಆರ್ದ್ರತೆ ಎಚ್ಚರಿಕೆ🚨 #Hot and #Humid #Warning for North Interior #Karnataka@KarnatakaVarthe #KSNDMC #Monsoon2026 pic.twitter.com/g1uZRWTFl4
— Karnataka State Natural Disaster Monitoring Centre (@KarnatakaSNDMC) June 19, 2026
ಉತ್ತರ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮಳೆ ಸಾಧ್ಯತೆಯ ನಡುವೆಯೂ ಈ ಭಾಗಕ್ಕೆ ಬಿಸಿ ಮತ್ತು ತೇವಾಂಶ ಗಾಳಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 3 ದಿನಗಳವರೆಗೆ ಇದೇ ರೀತಿಯ ವಾತಾವರಣ ಕಂಡುಬರುವ ನಿರೀಕ್ಷೆ ಇದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:51 pm, Fri, 19 June 26




