ಮುಷ್ಕರದ ಎಚ್ಚರಿಕೆ ನೀಡಿದ ಕೆಎಂಎಫ್ ನೌಕರರು: ವೇತನ ಬಾಕಿ ಬಿಡುಗಡೆಗೆ ಆಗ್ರಹ

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನೌಕರರು ಬಾಕಿ ವೇತನ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. ಫೆಬ್ರವರಿಯಿಂದ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ಒತ್ತಾಯಿಸಲಾಗಿದೆ. ಒಂದು ವೇಳೆ ಮುಷ್ಕರ ನಡೆದಲ್ಲಿ ರಾಜ್ಯದಲ್ಲಿ ನಂದಿನಿ ಹಾಲು ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮುಷ್ಕರದ ಎಚ್ಚರಿಕೆ ನೀಡಿದ ಕೆಎಂಎಫ್ ನೌಕರರು: ವೇತನ ಬಾಕಿ ಬಿಡುಗಡೆಗೆ ಆಗ್ರಹ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Jan 29, 2025 | 7:54 AM

ಬೆಂಗಳೂರು, ಜನವರಿ 29: ಬಾಕಿ ವೇತನ ಬಿಡುಗಡೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನೌಕರರು ಆಗ್ರಹಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿಯಿಂದ ಮುಷ್ಕರ ನಡೆಸುವುದಾಗಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನೌಕರರ ಸಂಘವು ಈಗಾಗಲೇ ಆಡಳಿತ ಮಂಡಳಿಗೆ ಮನವಿ ಪತ್ರ ಸಲ್ಲಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಂದು ವಾರ ಕಾಲಾವಕಾಶ ನೀಡಿದೆ. ಇದು ಜನವರಿ 31ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಬೆಡಿಕೆಗಳು ಈಡೇರದಿದ್ದರೆ ಮುಷ್ಕರ ನಡೆಸಲಾಗುವುದು ಎಂದು ನೌಕರರ ಸಂಘ ಎಚ್ಚರಿಕೆ ನೀಡಿದೆ.

7ನೇ ವೇತನ ಆಯೋಗದ ಶಿಫಾರಸಿನಂತೆ ನೀಡಬೇಕಿರುವ ಬಾಕಿ ಉಳಿದಿರುವ ವೇತನ ಶೀಘ್ರವೇ ಮಂಜೂರು ಮಾಡಬೇಕೆಂದು ಕೆಎಂಎಫ್ ನೌಕರರ ಸಂಘದ ಅಧ್ಯಕ್ಷ ಗೋವಿಂದಗೌಡ ಆಗ್ರಹಿಸಿದ್ದಾರೆ. 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರನ ಶೇ 25 ರ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಈ ಪೈಕಿ ಶೇ 17 ರಷ್ಟು ಮಾತ್ರ ಹೆಚ್ಚಳ ಮಾಡಿದೆ. ಶೇ 8 ರಷ್ಟು ವೇತನ ಹೆಚ್ಚಳ, ಬಿಡುಗಡೆ ಬಾಕಿ ಇದೆ. ಅವುಗಳನ್ನು ಈಡೇರಿಸಬೇಕು ಎಂದು ಗೋವಿಂದಗೌಡ ಹೇಳಿದ್ದಾರೆ. ಜತೆಹೆ, ಬೇಡಿಕೆಗಳು ಈಡೇರುವ ಭರವಸೆ ಇದೆ ಎಂದೂ ಹೇಳಿದ್ದಾರೆ.

ಸಂಘವು ರಾಜ್ಯಾದ್ಯಂತ ಸುಮಾರು 7,000 ಉದ್ಯೋಗಿಗಳನ್ನು ಒಳಗೊಂಡಿದೆ, ಅವರಲ್ಲಿ 1,400 ಉನ್ನತ ದರ್ಜೆಯ ಸಿಬ್ಬಂದಿ ಇದ್ದಾರೆ. ಇದರ ಆಧಾರದಲ್ಲಿ ಲೆಕ್ಕಹಾಕಿದರೆ, ವೇತನ ಹೆಚ್ಚಳ ಜಾರಿಗೆ ಬಂದರೆ ಅದಕ್ಕಾಗಿ ಸರ್ಕಾರ ತಿಂಗಳಿಗೆ 3 ಕೋಟಿ ರೂ. ವ್ಯಯಿಸಬೇಕಾಗುತ್ತದೆ.

ಸದ್ಯದ ಮಟ್ಟಿಗೆ, ವೇತನ ಬಾಕಿಯ ಮೊತ್ತದ ಬಿಡುಗಡೆ ಮಾಡಲು ಸರ್ಕಾರವು ಇನ್ನೂ ಅನುಮತಿ ನೀಡಿಲ್ಲ ಎಂದು ಆಡಳಿತ ಮಂಡಳಿ ಭಾವಿಸಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಎಂಎಫ್ ದಿನಕ್ಕೆ ಸುಮಾರು 1 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಪೂರೈಸುತ್ತಿದ್ದು, 15 ಒಕ್ಕೂಟಗಳ ಮೂಲಕ ಹಾಲು ಸಂಗ್ರಹಿಸುತ್ತಿದೆ.

ಇದನ್ನೂ ಓದಿ: ನಾನ್​ ವೆಜ್​ ಪ್ರಿಯರ ಗಮನಕ್ಕೆ: ಜ 30ರಂದು ಬೆಂಗಳೂರಿನಲ್ಲಿ ಮಾಂಸ ಸಿಗಲ್ಲ, ಕಾರಣವೇನು?

ಇತ್ತೀಚೆಗಷ್ಟೇ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​​ಟಿಸಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಕೊನೆಗೂ ಸಭೆ ನಡೆಸಿ ಕೆಎಸ್​ಆರ್​​ಟಿಸಿ ನೌಕರರ ಮನವೊಲಿಸಿ ಮುಷ್ಕರದ ನಿರ್ಧಾರ ಹಿಂಪಡೆಯುವಂತೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು. ಇದೀಗ ಕೆಎಂಎಫ್​ ನೌಕರರ ಸರದಿ. ಒಂದು ವೇಳೆ ಕೆಎಂಎಫ್​ ನೌಕರರ ಬೇಡಿಕೆ ಈಡೇರಿಸುವಲ್ಲಿ ಅಥವಾ ಅವರ ಮನವೊಲಿಸಿ ಮುಷ್ಕರ ಹಿಂಪಡೆಯುವಂತೆ ಮಾಡುವಲ್ಲಿ ಸರ್ಕಾರ ವಿಫಲವಾದಲ್ಲಿ ನಂದಿನಿ ಹಾಲು ಪೂರೈಕೆ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಖಾಸುಮ್ಮನೆ ಮನೇಲಿ ಕೂರುವ ಸಂಸದರು ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ!
ಸುಖಾಸುಮ್ಮನೆ ಮನೇಲಿ ಕೂರುವ ಸಂಸದರು ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ!
ಮಾಜಿ ವಿಧಾನ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಉಪಸ್ಥಿತಿಯಲ್ಲಿ ನಡೆದ ಅಯ್ಕೆ
ಮಾಜಿ ವಿಧಾನ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಉಪಸ್ಥಿತಿಯಲ್ಲಿ ನಡೆದ ಅಯ್ಕೆ
HTT 40 ಟ್ರೈನಿ ಏರ್ ಕ್ರಾಫ್ಟ್​ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ
HTT 40 ಟ್ರೈನಿ ಏರ್ ಕ್ರಾಫ್ಟ್​ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ
ಮದುವೆ ಸಂಭ್ರಮದ ನಡುವೆಯೂ ಊರಿನ ಶಾಲೆಗೆ ಭೇಟಿ ನೀಡಿದ ಡಾಲಿ ಧನಂಜಯ
ಮದುವೆ ಸಂಭ್ರಮದ ನಡುವೆಯೂ ಊರಿನ ಶಾಲೆಗೆ ಭೇಟಿ ನೀಡಿದ ಡಾಲಿ ಧನಂಜಯ
ಚಾಮರಾಜನಗರ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್​ ಹೃದಯಾಘಾತ
ಚಾಮರಾಜನಗರ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್​ ಹೃದಯಾಘಾತ
ಶಾರ್ಟ್ ಸರ್ಕ್ಯೂಟ್​ನಿಂದಾಗಿ ಹೊತ್ತಿದ ಬೆಂಕಿ ಪಕ್ಕದ ಕಟ್ಟಡಕ್ಕೆ ಪಸರಿಸಿದೆ
ಶಾರ್ಟ್ ಸರ್ಕ್ಯೂಟ್​ನಿಂದಾಗಿ ಹೊತ್ತಿದ ಬೆಂಕಿ ಪಕ್ಕದ ಕಟ್ಟಡಕ್ಕೆ ಪಸರಿಸಿದೆ
ವಿಜಯೇಂದ್ರ ಜೊತೆ ಯಾರೆಲ್ಲ ಹೋಗಿದ್ದರು ಅನ್ನೋದು ಪತ್ತೆಯಾಗಲಿಲ್ಲ
ವಿಜಯೇಂದ್ರ ಜೊತೆ ಯಾರೆಲ್ಲ ಹೋಗಿದ್ದರು ಅನ್ನೋದು ಪತ್ತೆಯಾಗಲಿಲ್ಲ
ಶಿವಕುಮಾರ್ ದುರ್ದಾನ ತೆಗೆದುಕೊಂಡರಂತೆ ಬೆನ್ನುಹಾಕಿದ್ದು ಯಾಕೆ ಗೊತ್ತಾ?
ಶಿವಕುಮಾರ್ ದುರ್ದಾನ ತೆಗೆದುಕೊಂಡರಂತೆ ಬೆನ್ನುಹಾಕಿದ್ದು ಯಾಕೆ ಗೊತ್ತಾ?
ಪ್ರಿಯಕರ ನಾಗೇಂದ್ರನ ಪ್ರಿಯತಮೆ ಇನ್ನೂ ಅಪ್ರಾಪ್ತೆಯಂತೆ
ಪ್ರಿಯಕರ ನಾಗೇಂದ್ರನ ಪ್ರಿಯತಮೆ ಇನ್ನೂ ಅಪ್ರಾಪ್ತೆಯಂತೆ
ಮೆಟ್ರೋ ದರ ಏರಿಕೆ ಬಿಸಿ: BMRCL ಎಂಡಿ ಮಹತ್ವದ ಸುದ್ದಿಗೋಷ್ಠಿ
ಮೆಟ್ರೋ ದರ ಏರಿಕೆ ಬಿಸಿ: BMRCL ಎಂಡಿ ಮಹತ್ವದ ಸುದ್ದಿಗೋಷ್ಠಿ