ಪರಿಷತ್ ಸಭಾಪತಿ ಶ್ವಾನ ಪ್ರೇಮ; ಶ್ವಾನ ದಳದ ಜೊತೆ ಸಮಯ ಕಳೆದ ಬಸವರಾಜ ಹೊರಟ್ಟಿ

ಶ್ವಾನಗಳ ತಲೆ ಸವರುತ್ತ ಆತ್ಮೀಯತೆ ತೋರಿದ ಬಸವರಾಜ ಹೊರಟ್ಟಿ ಅವರಿಗೆ ಶ್ವಾನದಳದ ತಂಡ ಗೌರವ ಸಲ್ಲಿಸಿದೆ. ಈ ಸಮಯದಲ್ಲಿ ತಮ್ಮ ಫಾರ್ಮ್​ಹೌಸ್​ನಲ್ಲೂ ನಾಯಿಗಳನ್ನು ಸಾಕಿರುವ ತಮ್ಮ ಅನುಭವವನ್ನು ಬಸವರಾಜ ಹೊರಟ್ಟಿ ಹಂಚಿಕೊಂಡಿದ್ದಾರೆ.

ಪರಿಷತ್ ಸಭಾಪತಿ ಶ್ವಾನ ಪ್ರೇಮ; ಶ್ವಾನ ದಳದ ಜೊತೆ ಸಮಯ ಕಳೆದ ಬಸವರಾಜ ಹೊರಟ್ಟಿ
ಆತ್ಮೀಯತೆ ತೋರಿದ ಬಸವರಾಜ ಹೊರಟ್ಟಿ ಅವರಿಗೆ ಶ್ವಾನದಳದ ತಂಡ ಗೌರವ ಸಲ್ಲಿಸಿದೆ


ಬೆಂಗಳೂರು: ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಬಳಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶ್ವಾನ ಪ್ರೇಮ ತೋರಿದ್ದಾರೆ. ಸಂವಿಧಾನ ದಿವಸದ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಸವರಾಜ ಹೊರಟ್ಟಿ ಆಗಮಿಸಿದ್ದು, ಈ ವೇಳೆ ಶ್ವಾನ ದಳದ ಜೊತೆ ಬಸವರಾಜ ಹೊರಟ್ಟಿ ಸಮಯ ಕಳೆದಿದ್ದಾರೆ. ಪೊಲೀಸ್ ಇಲಾಖೆ ಶ್ವಾನ ದಳದ ಶ್ವಾನಗಳನ್ನು ನೋಡಿ ಹತ್ತಿರ ತೆರಳಿದ ಹೊರಟ್ಟಿಗೆ ತರಬೇತಿ ಪಡೆದ ಶ್ವಾನಗಳು ಸೆಲ್ಯೂಟ್ ಮಾಡಿದ್ದು, ಅವರ ಮೆಚ್ಚುಗೆಗೆ ಕಾರಣವಾಗಿದೆ.

ಶ್ವಾನಗಳ ತಲೆ ಸವರುತ್ತ ಆತ್ಮೀಯತೆ ತೋರಿದ ಬಸವರಾಜ ಹೊರಟ್ಟಿ ಅವರಿಗೆ ಶ್ವಾನದಳದ ತಂಡ ಗೌರವ ಸಲ್ಲಿಸಿದೆ. ಈ ಸಮಯದಲ್ಲಿ ತಮ್ಮ ಫಾರ್ಮ್​ಹೌಸ್​ನಲ್ಲೂ ನಾಯಿಗಳನ್ನು ಸಾಕಿರುವ ತಮ್ಮ ಅನುಭವವನ್ನು ಬಸವರಾಜ ಹೊರಟ್ಟಿ ಹಂಚಿಕೊಂಡಿದ್ದಾರೆ.

ಕೋಲಾರ: ಪ್ರೀತಿಯ ಶ್ವಾನಕ್ಕೆ ಶಾಸಕರಿಂದ ಕಣ್ಣೀರಿನ ವಿದಾಯ ಹೇಳಿದ ಶಾಸಕ ನಾರಾಯಣಸ್ವಾಮಿ
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಮನೆಯಲ್ಲಿದ್ದ ಪ್ರೀತಿಯ ನಾಯಿ ಲಿಯೋ ಸೋಮವಾರ ಅನಾರೋಗ್ಯದಿಂದ ನಿಧನವಾಗಿದೆ. ತಮ್ಮ ಕುಟುಂಬದ ಸದಸ್ಯನಂತೆ ಇದ್ದ ಲಿಯೋ ಭಾನುವಾರ ಮಧ್ಯಾಹ್ನ ಮೃತಪಟ್ಟಿದೆ. ವಾತಾವರಣದಲ್ಲಿನ ಏರುಪೇರು ಹಾಗೂ ಹೃದಯಾಘಾತದಿಂದ ನಾಯಿ ಸಾವನ್ನಪ್ಪಿರಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ. ಪಗ್​ ಜಾತಿಗೆ ಸೇರಿದ ಲಿಯೋ ಕಳೆದ ಹನ್ನೊಂದು ವರ್ಷಗಳಿಂದ ಶಾಸಕ ನಾರಾಯಣಸ್ವಾಮಿಯವರ ಮನೆಯ ಸದಸ್ಯನಂತೆ ಇತ್ತು ಮುಂಜಾನೆಯಿಂದ ಸಂಜೆವರೆಗೂ ಮನೆಯಲ್ಲಿ ಮನೆಯ ಸದಸ್ಯರ ಜೊತೆಗೆ ಆಟವಾಡಿಕೊಂಡು ಎಲ್ಲರ ಪ್ರೀತಿ ಸಂಪಾದಿಸಿತ್ತು.

ಮನೆಯ ಸದಸ್ಯರಂತೆ ಇದು ಕೂಡಾ ಬೆಡ್​ ರೂಂ, ಹಾಲ್​, ಕಿಚನ್​ ಎಲ್ಲೆಡೆ ಓಡಾಡಿಕೊಂಡು ತುಂಬಾ ಮನೆಯ ಸದಸ್ಯರ ಪ್ರೀತಿ ಗಳಿಸಿದ್ದ ನಾಯಿ ಇಂದು ಅಚಾನಕ್ಕೆ ಮೃತಪಟ್ಟ ಹಿನ್ನೆಲೆ ಇಡೀ ಕುಟುಂಬ ನಾಯಿಗೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿ ಕಣ್ಣೀರಿನ ವಿದಾಯ ಹೇಳಿದ್ದಾರೆ.

ಲಿಯೋ ಕುರಿತು ಮಾತನಾಡಿದ ಶಾಸಕ ನಾರಾಯಣಸ್ವಾಮಿ ಮನೆಯಿಂದ ಹೊರಗೆ ಹೋಗುವಾಗ ಮನೆಯ ಗೇಟ್​ವರೆಗೂ ಬಂದು ನನ್ನನ್ನು ಕಳಿಸಿಕೊಟ್ಟು ಬರುತ್ತಿತ್ತು. ಇನ್ನು ಮನೆಗೆ ಬಂದಾಗಲೂ ಅಷ್ಟೇ ನನ್ನ ಕಾರ್​ ಹಾರ್ನ್​​ ಕೇಳಿದ ತಕ್ಷಣ ಬಾಗಿಲಲ್ಲಿ ಬಂದು ನಿಂತು ನನ್ನನ್ನು ಸ್ವಾಗತ ಮಾಡುತ್ತಿತ್ತು. ಇನ್ನು ನಾನು ಮುಂಜಾನೆ ವಾಕಿಂಗ್ ಹೋಗಿ ಬಂದಾಗ ನನ್ನ ಸಾಕ್ಸ್​ ಹಿಡಿದುಕೊಂಡು ನನ್ನನ್ನು ಆಟವಾಡಿಸುತ್ತಿತ್ತು. ನನ್ನ ಜೊತೆಗೆ ನಾನು ರಾತ್ರಿ ಮಲಗುವವರೆಗೂ ನನ್ನ ಜೊತೆಗೆ ಆಟವಾಡಿಕೊಂಡು ನನ್ನನ್ನು ಸಂತೋಷದಿಂದ ನೋಡಿಕೊಳ್ಳುತ್ತಿದ್ದ ಲಿಯೋ ಕಳೆದುಕೊಂಡಿರುವುದು ನನಗೆ ತುಂಬಾ ನೋವಾಗಿದೆ ಎಂದು ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ನಾನು ನನ್ನ ಕುಟುಂಬ ಸದಸ್ಯರೊಬ್ಬರನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ. ಇನ್ನು ನಮ್ಮ ಮನೆಯ ಸದಸ್ಯರು ಕೂಡಾ ಲಿಯೋನ ಸಾವಿನಿಂದ ಕಣ್ಣೀರಿನಲ್ಲಿ ಮುಳುಗಿದ್ದಾರೆ ಎಂದಿದ್ದಾರೆ. ಮೃತ ಶ್ವಾನ ಲಿಯೋಗೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿ ತಮ್ಮ ತೋಟದಲ್ಲಿ ಅದನ್ನು ಸಮಾದಿ ಮಾಡಲಾಗಿದ್ದು ಅದು ನಾವು ಎಂದು ಮರೆಯಲಾಗದ ನಮ್ಮ ಮನೆಯ ಸದಸ್ಯ ಎಂದು ಅವರು ಹೇಳಿದರು.

ಇದನ್ನೂ ಓದಿ:
ಪ್ರೀತಿಯ ಶ್ವಾನಕ್ಕೆ ಶಾಸಕರಿಂದ ಕಣ್ಣೀರಿನ ವಿದಾಯ ಹೇಳಿದ ಶಾಸಕ ನಾರಾಯಣಸ್ವಾಮಿ

4 ನಾಯಿ ಮರಿಗಳ ಕತ್ತು ಕೊಯ್ದು ಹತ್ಯೆ: ನಟಿ ಅಮೂಲ್ಯ ಪತಿ ಜಗದೀಶ್ ಆಕ್ರೋಶ, ಪಶುಸಂಗೋಪನೆ ಇಲಾಖೆ ಸ್ಪಂದನೆ

Click on your DTH Provider to Add TV9 Kannada