4 ನಾಯಿ ಮರಿಗಳ ಕತ್ತು ಕೊಯ್ದು ಹತ್ಯೆ: ನಟಿ ಅಮೂಲ್ಯ ಪತಿ ಜಗದೀಶ್ ಆಕ್ರೋಶ, ಪಶುಸಂಗೋಪನೆ ಇಲಾಖೆ ಸ್ಪಂದನೆ

ನಗರದ ಆರ್. ಆರ್. ನಗರದ ಗೋಪಾಲನ್ ಮಾಲ್ ಬಳಿ ಒಂದೇ‌ ಕಡೆ ನಾಲ್ಕು ನಾಯಿ ಮರಿಗಳ ಮೃತದೇಹ ಪತ್ತೆಯಾಗಿದೆ. ಇದನ್ನು ಕಂಡ ನಟಿ ಅಮೂಲ್ಯ ಪತಿ ಜಗದೀಶ್ ರಾಮ್‌ಚಂದ್ರಪ್ಪ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

4 ನಾಯಿ ಮರಿಗಳ ಕತ್ತು ಕೊಯ್ದು ಹತ್ಯೆ: ನಟಿ ಅಮೂಲ್ಯ ಪತಿ ಜಗದೀಶ್ ಆಕ್ರೋಶ, ಪಶುಸಂಗೋಪನೆ ಇಲಾಖೆ ಸ್ಪಂದನೆ
4 ನಾಯಿ ಮರಿಗಳ ಕತ್ತು ಕೊಯ್ದು ಹತ್ಯೆ: ನಟಿ ಅಮೂಲ್ಯ ಪತಿ ಜಗದೀಶ್ ಆಕ್ರೋಶ, ಪಶುಸಂಗೋಪನೆ ಇಲಾಖೆ ಸ್ಪಂದನೆ

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಅಮೂಲ್ಯ ಪತಿ ಜಗದೀಶ್ ಈಗಾಗಲೇ ಅನೇಕ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಸದ್ಯ ಈಗ ಪುಟ್ಟಾಣಿ ನಾಯಿ ಮರಿಗಳನ್ನು ಸಾಯಿಸಲಾಗಿದೆ ಎಂದು ನಾಯಿ ಮರಿಗಳು ಮೃತಪಟ್ಟ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಪಶುಸಂಗೋಪನೆ ಇಲಾಖೆ ಸ್ಪಂದಿಸಿದ್ದು ಸೂಕ್ತ ತನಿಖೆ ನಡೆಸುವುದಾಗಿ ಹೇಳಿದೆ.

ನಗರದ ಆರ್. ಆರ್. ನಗರದ ಗೋಪಾಲನ್ ಮಾಲ್ ಬಳಿ ಒಂದೇ‌ ಕಡೆ ನಾಲ್ಕು ನಾಯಿ ಮರಿಗಳ ಮೃತದೇಹ ಪತ್ತೆಯಾಗಿದೆ. ಇದನ್ನು ಕಂಡ ನಟಿ ಅಮೂಲ್ಯ ಪತಿ ಜಗದೀಶ್ ರಾಮ್‌ಚಂದ್ರಪ್ಪ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಮುಗ್ಧ ನಾಲ್ಕು ನಾಯಿ ಮರಿಗಳ ಕತ್ತು ಕುಯ್ದು ಸಾಯಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಫೋಟೋ ಹಾಗೂ ವಿಡಿಯೋ ಹಾಕಿ ಟ್ವಿಟ್ ಮಾಡಿದ್ದಾರೆ.

ಜಗದೀಶ್ ಟ್ವೀಟ್ಗೆ ಪಶುಸಂಗೋಪನೆ ಇಲಾಖೆ ಪ್ರತಿಕ್ರಿಯೆ ನೀಡಿದೆ. ಇದು ಕತ್ತು ಕುಯ್ದು ಸಾಯಿಸಿಲ್ಲ, ಬೀದಿ ನಾಯಿಗಳ ಗಲಾಟೆಯಲ್ಲಿ ಆಗಿರಬಹುದು ಎಂದು ಸಮಜಾಯಿಷಿ ನೀಡಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ರೀ ಟ್ವೀಟ್ ಮಾಡಿದೆ. ಆದರೆ ಒಂದೇ ಕಡೆ, ಒಂದೇ ಬಾರಿ ನಾಲ್ಕು ಮರಿಗಳ ಸಾವು ಸಂಭವಿಸಿದ್ದು. ಸಾವಿನ ಹಿಂದೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಕೂಡ ಈ‌ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.

ನಿಜವಾಗ್ಲೂ ಮನುಷ್ಯತ್ವ ಇದೆಯಾ ಗೊತ್ತಿಲ್ಲ! ಇಂತಹ ಮುದ್ದಾದ 20 ದಿನದ ನಾಯಿ ಮರಿಗಳನ್ನು ಗೋಪಾಲನ್ ಮಾಲ್ ಹತ್ತಿರ ಕತ್ತು ಕುಯ್ದು ಸಾಯಿಸಿದ್ದಾರೆ. ಈ ಮರಿಗಳ ಸಾವಿಗೆ ಕಾರಣರದವರನ್ನು ಪತ್ತೆ ಹಚ್ಚಿ, ಮುಂದೆ ಈ ದುರ್ಘಟನೆಗಳು ನಡೆಯದಂತೆ ಕಠಿಣ ಕ್ರಮ ಜರುಗಿಸಬೇಕೆಂದು ಬಿಬಿಎಂಪಿ & ಪಶು ಸಂಗೋಪನಾ ಇಲಾಖೆಗೆ ಮನವಿ ಮಾಡುತ್ತೇನೆ ಎಂದು ಜಗದೀಶ್ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ‘ಹುಡುಗ್ರು ಪೊಮೆರೇನಿಯನ್ ನಾಯಿ ಥರ ಇದ್ರೆ ಆಗಲ್ಲ’; ನಿರ್ದೇಶಕ ಯೋಗರಾಜ್​ ಭಟ್​ ಹೀಗೆ ಹೇಳಿದ್ದೇಕೆ?

Click on your DTH Provider to Add TV9 Kannada