
ಬೆಂಗಳೂರು, (ಜೂನ್ 09): ಪತ್ನಿ ನಡೆಯಿಂದ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೆ.ಪಿ.ಅಗ್ರಹಾರದ 12ನೇ ಮುಖ್ಯರಸ್ತೆಯ ಮನೆಯಲ್ಲಿ ನಡೆದಿದೆ. ಗೋವರ್ಧನ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ ಏನು ಹೇಳದೇ ಕೇಳದ ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದರಿಂದ ಬೇಸತ್ತು ಗೋವರ್ಧನ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. 7 ವರ್ಷಗಳ ಹಿಂದೆ ವಿವಾಹವಾಗಿದ್ದ ಗೋವರ್ಧನ್ ಮತ್ತು ಪ್ರಿಯಾ ದಂಪತಿಗೆ ಎರಡು ಮಕ್ಕಳಿವೆ. ಆದರೂ ಪ್ರಿಯಾ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು ಎನ್ನುವ ಆರೋಪ ಕೇಳಿಬಂದಿದೆ. ಕಳೆದ ಒಂದು ತಿಂಗಳ ಹಿಂದೆ ಕೂಡ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಖಿನ್ನತೆಗೊಳಗಾಗಿ ಗೋವರ್ಧನ್ ಮನೆಯಲ್ಲಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗೋವರ್ಧನ್ ಕುಟುಂಬ ಮೂರಂತಸ್ತಿನ ಕಟ್ಟಡದಲ್ಲಿ ವಾಸವಿದೆ. ಗೋವರ್ಧನ್ ತಾಯಿ ಕೆಳ ಮಹಡಿಯಲ್ಲಿ ವಾಸವಿದ್ದರೆ, ಮೇಲ್ಮಹಡಿಯಲ್ಲಿ ಗೋವರ್ದನ್ ಮತ್ತು ಪತ್ನಿ ಪ್ರಿಯಾ ವಾಸವಾಗಿದ್ದರು. ಪತ್ನಿ ಬಿಟ್ಟು ಹೋದ ಮೇಲೆ ಗೋವರ್ದನ್ ಒಬ್ಬನೇ ವಾಸವಿದ್ದ. ನಿನ್ನೆ (ಜೂನ್ 08) ರಾತ್ರಿ ತಾಯಿಯೇ ಊಟ ನೀಡಿ ಬಂದಿದ್ದಳು. ಆದ್ರೆ, ಅಮ್ಮ ಕೊಟ್ಟ ಊಟ ಕೂಡ ಮಾಡದೆ ಹಾಗೆ ಬಿಟ್ಟು ಗೋವರ್ದನ್ ನೇಣಿಗೆ ಶರಣಾಗಿದ್ದಾನೆ.
ಇಂದು (ಜೂನ್ 09) ಸಂಜೆಯಾದರೂ ಮನೆಯಿಂದ ಗೋವರ್ಧನ್ ಹೊರಬಂದಿರಲಿಲ್ಲ. ಇದರಿಂದ ಸಂಜೆ ಮನೆಗೆ ಹೋಗಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ. ಸದ್ಯ ಗೋವರ್ಧನ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿಗೆ ಪತ್ನಿ ಪ್ರಿಯಾ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಗೋವರ್ಧನ್ ಮತ್ತು ಪ್ರಿಯಾ 7 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರೂ ಮಕ್ಕಳು ಸಹ ಇದ್ದಾರೆ. ಆದರೆ, ಪ್ರಿಯಾ ಗಂಡನಿಗೆ ಏನು ಹೇಳದೇ ಕೇಳದೇ ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದಳು. ಕಳೆದ ಒಂದು ತಿಂಗಳ ಹಿಂದೆ ಸಹ ಮನೆ ಬಿಟ್ಟು ಹೋಗಿದ್ದಳು. ಪತ್ನಿಯ ಈ ನಡೆತೆಯಿಂದ ಬೇಸತ್ತು ಗೋವರ್ಧನ್ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಿದೆ.
Published On - 10:44 pm, Mon, 9 June 25