ಪೌರಕಾರ್ಮಿಕರ ಜೊತೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಗೆ ತಕ್ಕ ಶಾಸ್ತಿ: ಏನಾಯ್ತು ಗೊತ್ತಾ?

ಕಸ ತೆಗೆದುಕೊಂಡು ಹೋಗಲು ಬಂದ ಪೌರಕಾರ್ಮಿಕರ ಜೊತೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಮೊದಲನೆ ಮಹಡಿ ಮೇಲೆಯೇ ನಿಂತು ರಸ್ತೆಯಲ್ಲಿದ್ದ ಕಸದ ವಾಹನಕ್ಕೆ ಕಸದ ಬ್ಯಾಗ್ ಎಸೆದಿದ್ದು, ಆ ಬ್ಯಾಗ್ ಜೊತೆಗೆ ಕಸದ ವಾಹನಕ್ಕೆ ಆತನೂ ಕೂಡ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪೌರಕಾರ್ಮಿಕರ ಜೊತೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಗೆ ತಕ್ಕ ಶಾಸ್ತಿ: ಏನಾಯ್ತು ಗೊತ್ತಾ?
ಕಸದ ಗಾಡಿಗೆ ಬಿದ್ದ ವ್ಯಕ್ತಿಯನ್ನು ಹೊರತೆಗೆಯುತ್ತಿರುವ ದೃಶ್ಯ
preethi shettigar

|

Dec 28, 2020 | 6:26 PM

ಬೆಂಗಳೂರು: ಮನೆ ಮನೆಗೆ ಬಂದು ಕಸ ತೆಗೆದುಕೊಂಡು ಹೋಗುವ ಪೌರಕಾರ್ಮಿಕರ ಜೊತೆಗೆ ಸಭ್ಯವಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ. ಆದರೆ ಕಸ ತೆಗೆದುಕೊಂಡು ಹೋಗಲು ಬಂದವರ ಜೊತೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಯೊಬ್ಬರಿಗೆ ತಕ್ಕ ಶಾಸ್ತಿಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಹೌದು ಕಸ ತೆಗೆದುಕೊಂಡು ಹೋಗಲು ಬಂದ ಪೌರಕಾರ್ಮಿಕರ ಜೊತೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಮೊದಲನೆ ಮಹಡಿ ಮೇಲೆಯೇ ನಿಂತು ರಸ್ತೆಯಲ್ಲಿದ್ದ ಕಸದ ವಾಹನಕ್ಕೆ ಕಸದ ಬ್ಯಾಗ್ ಎಸೆದಿದ್ದ. ಆದರೆ ಇದರ ಪರಿಣಾಮ ಮಾತ್ರ ಆತನ ಊಹೆಗೆ ನಿಲುಕದಂತೆ ಇತ್ತು. ಕಾರಣ ಕಸದ ಬ್ಯಾಗ್​ ಜೊತೆಗೆ ಆ ಭೂಪ ಕೂಡ ಮೊದಲನೆ ಮಹಡಿಯಿಂದ ತಲೆ ಕೆಳಗಾಗಿ ಕಸದ ವಾಹನಕ್ಕೆ ಬಿದ್ದಿದ್ದು, ಕೊನೆಗೆ ಆತನನ್ನು ಹೊರ ತೆಗೆಯಲು ಇದೇ ಪೌರಕಾರ್ಮಿಕರು ಸಹಾಯ ಮಾಡಬೇಕಾಯಿತು. ಸದ್ಯ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋ ವೈರಲ್​ ಆಗಿದೆ.

ಮೊದಲನೆ ಮಹಡಿಯಿಂದ ಕಸ ಹಾಕುತ್ತಿರುವ ಚಿತ್ರಣ

ಕಸ ನಿರ್ವಹಣೆ ನಷ್ಟ ಭರಿಸಲು BBMP ಮಾಸ್ಟರ್​ ಪ್ಲಾನ್​, ಜನರ ಜೇಬಿಗೆ ಕತ್ತರಿ ಬೀಳಲಿದೆಯಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada