ಶಾಸಕ ಜಮೀರ್ ಅಹ್ಮದ್ ಸಹೋದರ ಶಕೀಲ್ ಅಹ್ಮದ್ ಖಾನ್​ ಇಡಿ ಅಧಿಕಾರಿಗಳ ವಶಕ್ಕೆ ಪಡೆದು ಬಿಡುಗಡೆ

ಜಮೀರ್ ಅಹ್ಮದ್ ನಿವಾಸ, ಕಚೇರಿ, ಫ್ಲ್ಯಾಟ್‌ನಲ್ಲಿ ಇ.ಡಿ. ಅಧಿಕಾರಿಗಳು ತಂಡೋಪಾದಿಯಲ್ಲಿ ದಾಖಲೆಗಳ ಪರಿಶೀಲನೆ, ಶೋಧ ನಡೆಸುತ್ತಿದ್ದಾರೆ. ಜಮೀರ್ ಅಹ್ಮದ್ ಗೆ ಸೇರಿದ ಮನೆ, ಯುಬಿ ಸಿಟಿಯಲ್ಲಿರುವ ಫ್ಲ್ಯಾಟ್, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ.

ಶಾಸಕ ಜಮೀರ್ ಅಹ್ಮದ್ ಸಹೋದರ ಶಕೀಲ್ ಅಹ್ಮದ್ ಖಾನ್​ ಇಡಿ ಅಧಿಕಾರಿಗಳ ವಶಕ್ಕೆ ಪಡೆದು ಬಿಡುಗಡೆ
ಜಮೀರ್ ಅಹ್ಮದ್ ಮತ್ತು ಶಕೀಲ್ ಅಹ್ಮದ್
Edited By:

Updated on: Aug 05, 2021 | 6:10 PM

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಮನೆಯಲ್ಲಿ ಸತತ 11 ಗಂಟೆಗಳ ಪರಿಶೀಲನೆ ನಡೆಸಿದ ಇ.ಡಿ ಅಧಿಕಾರಿಗಳು ಅವರ ಸಹೋದರ ಬಿ.ಝಡ್. ಶಕೀಲ್ ಅಹ್ಮದ್ ಖಾನ್​ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಾಸಕ ಜಮೀರ್ ಅಹ್ಮದ್‌ ಖಾನ್‌ ಅವರ 3ನೇ ತಮ್ಮ ಶಕೀಲ್ ಅಹ್ಮದ್ ಖಾನ್ ಆಗಿದ್ದು, ಇ.ಡಿ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಇ.ಡಿ. ಶಾಕ್:
ದೆಹಲಿಯಿಂದ ಬಂದಿರುವ 45  ಇ.ಡಿ.  (ED) ಅಧಿಕಾರಿಗಳ ತಂಡ ಶಾಸಕ ಜಮೀರ್ ಅಹಮದ್​ ನಿವಾಸಗಳ ಮೇಲೆ ದಾಳಿ ನಡೆಸಿದೆ. ವಸಂತನಗರದಲ್ಲಿರುವ ಜಮೀರ್ ಹಳೇ ನಿವಾಸ, ಬಂಬೂ ಬಜಾರ್ ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆ ಸೇರಿ 6 ಕಡೆ ದಾಳಿ ನಡೆದಿದೆ.

ಜಮೀರ್ ಅಹ್ಮದ್ ನಿವಾಸ, ಕಚೇರಿ, ಫ್ಲ್ಯಾಟ್‌ನಲ್ಲಿ ಇ.ಡಿ. ಅಧಿಕಾರಿಗಳು ತಂಡೋಪಾದಿಯಲ್ಲಿ ದಾಖಲೆಗಳ ಪರಿಶೀಲನೆ, ಶೋಧ ನಡೆಸುತ್ತಿದ್ದಾರೆ. ಜಮೀರ್ ಅಹ್ಮದ್ ಗೆ ಸೇರಿದ ಮನೆ, ಯುಬಿ ಸಿಟಿಯಲ್ಲಿರುವ ಫ್ಲ್ಯಾಟ್, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ: 

ಜಮೀರ್ ನಿವಾಸದ ಮುಂದೆ ಬೆಂಬಲಿಗರ ಕಣ್ಣೀರು; ಶಿವಮೊಗ್ಗದಲ್ಲಿ ಪ್ರತಿಭಟನೆ

‘ನಿಮ್ಮ ಮನೆ ವಾಚ್‌ಮನ್ ಮೇಲೆ ಇ.ಡಿ ದಾಳಿಯಾಗಿದೆ ಸರ್’ ಅಂದಿದ್ದಕ್ಕೆ ಬೆಚ್ಚಿಬಿದ್ದ ಮಾಜಿ ಸಿಎಂ ಯಡಿಯೂರಪ್ಪ!

(MLA Zameer Ahmed Khans brother Shakeel Ahmed Khan detained by ED officials)

Published On - 5:34 pm, Thu, 5 August 21

TV9 Web

TV9 Kannada

Read More
Loading...
Unable to load recommendations.
Follow Us