ಬಿಬಿಎಂಪಿ ವ್ಯಾಪ್ತಿಯಲ್ಲಿ 31 ಸಾವಿರ ರಸ್ತೆ ಗುಂಡಿಗಳು; ಮಧ್ಯಾಹ್ನದೊಳಗೆ ಮುಖ್ಯರಸ್ತೆಗಳ ಗುಂಡಿ ಮುಚ್ಚಲು ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸೂಚನೆ

TV9kannada Web Team

TV9kannada Web Team | Edited By: Ayesha Banu

Updated on: Nov 06, 2022 | 11:24 AM

ಕಳೆದ ಒಂದು ವಾರದ ಅಂತರದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹೊಸ ಗುಂಡಿ ಪತ್ತೆಯಾಗಿದ್ದು ಒಟ್ಟು ಗುಂಡಿಗಳ ಸಂಖ್ಯೆ 31 ಸಾವಿರಕ್ಕೆ ಏರಿಕೆಯಾಗಿದೆ. ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿ ಬಿಬಿಎಂಪಿ ಅಧಿಕಾರಿಗಳ ಜೊತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸಭೆ ನಡೆಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 31 ಸಾವಿರ ರಸ್ತೆ ಗುಂಡಿಗಳು; ಮಧ್ಯಾಹ್ನದೊಳಗೆ ಮುಖ್ಯರಸ್ತೆಗಳ ಗುಂಡಿ ಮುಚ್ಚಲು ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸೂಚನೆ
ಸುಮನಹಳ್ಳಿ ಫ್ಲೈಓವರ್​

ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯ ರಸ್ತೆ ಗುಂಡಿಗಳ(Potholes) ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದ ಅಂತರದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹೊಸ ಗುಂಡಿ ಪತ್ತೆಯಾಗಿದ್ದು ಒಟ್ಟು ಗುಂಡಿಗಳ ಸಂಖ್ಯೆ 31 ಸಾವಿರಕ್ಕೆ ಏರಿಕೆಯಾಗಿದೆ. ಕಳೆದ ನ.27ಕ್ಕೆ 25 ಸಾವಿರಕ್ಕೂ ಅಧಿಕ ಗುಂಡಿ ಪತ್ತೆ ಆಗಿದ್ದವು. ನ.5ರ ವೇಳೆಗೆ 31 ಸಾವಿರಕ್ಕೆ ಏರಿಕೆಯಾಗಿವೆ. ಬಿಬಿಎಂಪಿ ಮಾಹಿತಿ ಪ್ರಕಾರ ಇನ್ನೂ 7 ಸಾವಿರ ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದೆ.

ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿ ಬಿಬಿಎಂಪಿ ಅಧಿಕಾರಿಗಳ ಜೊತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸಭೆ ನಡೆಸಿದ್ದಾರೆ. ಬಿಬಿಎಂಪಿಯ ಎಲ್ಲಾ ವಲಯದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು ಅಧಿಕಾರಿಗಳು ರಸ್ತೆ ಗುಂಡಿಗಳು ಜಾಗದಿಂದಲೇ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಾಗೂ ಸಭೆಯಲ್ಲಿ ಇಂದು ಮಧ್ಯಾಹ್ನದೊಳಗೆ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿ

ನಗರದ ರಸ್ತೆ ಗುಂಡಿ ವಿವರ

  • ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 1,409 ಗುಂಡಿಗಳಿದ್ದು ಎಲ್ಲವನ್ನೂ ಮುಚ್ಚಲಾಗಿದೆ ಎಂದು ಮಾಹಿತಿ
  • ದಾಸರಹಳ್ಳಿ ವಲಯದಲ್ಲಿ 1,918 ರಸ್ತೆ ಗುಂಡಿಗಳಿದ್ದು 636 ಗುಂಡಿಗಳನ್ನು ಮಾತ್ರ ಮುಚ್ಚಬೇಕಿದೆ.
  • ಪೂರ್ವ ವಲಯದಲ್ಲಿ 5,776 ರಸ್ತೆ ಗುಂಡಿಗಳಿದ್ದು 5,364 ಮುಚ್ಚಲಾಗಿದೆ. ಹಾಗೂ 412 ಬಾಕಿ ಇವೆ.
  • ಮಹದೇವಪುರದಲ್ಲಿ 2,004 ರಸ್ತೆ ಗುಂಡಿಗಳಿದ್ದು 1,762 ಮುಚ್ಚಲಾಗಿದೆ. ಹಾಗೂ 242 ಬಾಕಿ ಇವೆ.
  • ರಾಜರಾಜೇಶ್ವರಿನಗರ ವಲಯದಲ್ಲಿ 3,196 ಗುಂಡಿಗಳಿದ್ದು 2,677 ಗುಂಡಿ ಮುಚ್ಚಲಾಗಿದೆ. 519 ಬಾಕಿ ಇವೆ.
  • ದಕ್ಷಿಣ ವಲಯದಲ್ಲಿ ಒಟ್ಟು 1,915 ರಸ್ತೆ ಗುಂಡಿಗಳಿದ್ದು ಈ ಪೈಕಿ 1,684 ಗುಂಡಿ ಮುಚ್ಚಲಾಗಿದೆ. ಹಾಗೂ 231 ಬಾಕಿ ಇವೆ.
  • ಯಲಹಂಕ ವಲಯದಲ್ಲಿ ಒಟ್ಟು 1,015, ಈ ಪೈಕಿ ಮುಚ್ಚಿದ್ದು 699, ಬಾಕಿ 316
  • ಒಟ್ಟು 31,211 ಗುಂಡಿಗಳ ಪೈಕಿ 23,957 ಗುಂಡಿಗಳನ್ನ ಮುಚ್ಚಿದ್ದು 7,254 ರಸ್ತೆ ಗುಂಡುಗಳು ಬಾಕಿ ಇವೆ.

ಕೆಜಿಎಫ್​ನಲ್ಲಿ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಿದ ಆಟೋ ಚಾಲಕರು

ಕೋಲಾರ ಜಿಲ್ಲೆ ಕೆಜಿಎಫ್​ನಗರದಲ್ಲಿ ಆಟೋ ಚಾಲಕರು ಗುಂಡಿ ಮುಚ್ಚಿದ್ದಾರೆ. ಸಲ್ಡಾನ ವೃತ್ತದಿಂದ ಚಾಂಪಿಯನ್ ಪ್ರದೇಶದವರೆಗೆ ರಸ್ತೆ ಹಾಳಾಗಿದ್ದು ಗುಂಡಿಬಿದ್ದ ರಸ್ತೆಯಲ್ಲಿ ಓಡಾಡಲು ವಾಹನ ಸವಾರರು ಪರದಾಡುತ್ತಿದ್ದರು. ಈ ಹಿನ್ನೆಲೆ ಆಟೋ ಚಾಲಕರಾದ ನಾಗರಾಜ್, ಜಾಬೀಸ್​ ಬೇರೆಡೆಯಿಂದ ಮಣ್ಣು ತಂದು ರಸ್ತೆ ಗುಂಡಿ ಮುಚ್ಚಿದ್ದಾರೆ. ಆಟೋ ಚಾಲಕರಾದ ನಾಗರಾಜ್, ಜಾಬೀಸ್ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada