
ಬೆಂಗಳೂರು, ಸೆಪ್ಟೆಂಬರ್ 20: ಸಂಗೀತ ಕಲಾವಿದೆ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಬೆಂಗಳೂರಿನ ರಸ್ತೆಯಲ್ಲಿ ಶಿವಶ್ರೀ ಅವರು ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಸವಾರಿ ಮಾಡಿರುವ ದೃಶ್ಯಗಳು ಅದರಲ್ಲಿದ್ದು, ಸಂಸದರ ಪತ್ನಿಯ ಈ ಪೋಸ್ಟ್ಗೆ ನೆಟ್ಟಿಗರಿಂದ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.
ನನ್ನ ಪತಿ ನನ್ನಿಂದ ಮಾಡಿಸುವ ಕೆಲಸಗಳು… ಮತ್ತು ಕೊನೆಗೆ ನಾನೂ ಅದನ್ನೇ ಮಾಡಿಬಿಡುತ್ತೇನೆ ಎಂಬ ಬರಹದ ಜೊತೆ ತಾವು ಬೈಕ್ ಸವಾರಿ ಮಾಡುತ್ತಿರುವ ವಿಡಿಯೋವನ್ನು ಶಿವಶ್ರೀ ಸ್ಕಂದಪ್ರಸಾದ್ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ನೂರಾರು ಕಾಮೆಂಟ್ಗಳು ಬಂದಿದ್ದು, ನೀವು ಹಲವು ಮಹಿಳೆಯರಿಗೆ ಸ್ಫೂರ್ತಿ ಎಂದು ಸಂಸದರ ಪತ್ನಿಯನ್ನು ಹಾಡಿ ಹೊಗಳಿದ್ದಾರೆ. ನೀವು ಬಹುಮುಖ ಪ್ರತಿಭೆ ಎಂದು ಇನ್ನೊಬ್ಬರು ಹೇಳಿದ್ದರೆ, ಹಾಡು ಹೇಳುವ ಜೊತೆಗೆ ನಿಮಗೆ ಬೈಕ್ ಚಲಾಯಿಸಲೂ ಬರುತ್ತಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಮ್ಯಾನ್ ಆಫ್ ಸ್ಟೀಲ್’: ಪತಿ, ಸಂಸದ ತೇಜಸ್ವಿ ಸೂರ್ಯ ಸಾಧನೆಗೆ ಪತ್ನಿ ಶಿವಶ್ರೀ ಹೇಳಿದ್ದೇನು?
ಗೋವಾದಲ್ಲಿ ನಡೆದಿದ್ದ ಐರನ್‌ಮ್ಯಾನ್ 70.3 ಓಟವನ್ನು ಸಂಸದ, ಪತಿ ತೇಜಸ್ವಿ ಸೂರ್ಯ ಜೊತೆ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕವೂ ಈ ಹಿಂದೆ ಶಿವಶ್ರೀ ಸ್ಕಂದಪ್ರಸಾದ್ ನೆಟ್ಟಿಗರಿಂದ ಭಾರಿ ಪ್ರಶಂಸೆ ಪಡೆದಿದ್ದರು. ಈ ವೇಳೆ 90 ಕಿ.ಮೀ. ಸೈಕ್ಲಿಂಗ್ ಕೂಡ ಮಾಡಿ ಅವರು ಗಮನ ಸೆಳೆದಿದ್ದರು. ತೇಜಸ್ವಿ ಸೂರ್ಯ ಜೊತೆ ಇವರ ವಿವಾಹವು 2025ರ ಮಾರ್ಚ್ 6ರಂದು ಬೆಂಗಳೂರಿನಲ್ಲಿ ನಡೆದಿತ್ತು.
Published On - 4:12 pm, Sun, 20 September 26