ಬೆಂಗಳೂರು: ಗಂಡ ಬಾತ್​ ರೂಮ್​ನಲ್ಲಿ.. ಹೆಂಡತಿ ಪ್ರಿಯತಮನ ಬೈಕ್​ನಲ್ಲಿ ಪರಾರಿ!

ಗಂಡ ಬಾತ್​ ರೂಮಿಗೆ ಹೋಗಿದ್ದಾಗ ಇತ್ತ ನವ ವಿವಾಹಿತೆ ಮಹಿಳೆ ಪ್ರಿಯತಮನ ಜೊತೆ ಬೈಕ್​ನಲ್ಲಿ ಪರಾರಿಯಾಗಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಮೇಶ್​, ಪತ್ನಿಯನ್ನು ಹುಡಿಕೊಡಿ ಎಂದು ಪೊಲೀಸ್​ ಮೆಟ್ಟಿಲೇರಿದ್ದಾರೆ.

ಬೆಂಗಳೂರು: ಗಂಡ ಬಾತ್​ ರೂಮ್​ನಲ್ಲಿ.. ಹೆಂಡತಿ ಪ್ರಿಯತಮನ ಬೈಕ್​ನಲ್ಲಿ ಪರಾರಿ!
ಸಾಂದರ್ಭಿಕ ಚಿತ್ರ
Edited By:

Updated on: Aug 20, 2023 | 4:21 PM

ಬೆಂಗಳೂರು, (ಆಗಸ್ಟ್ 20): ಬೆಂಗಳೂರಿನ (Bengaluru) ರಮೇಶ್ ಎನ್ನುವಾತ ಓರ್ವ ಯುವತಿಯನ್ನು ಇಷ್ಟಪಟ್ಟು ಎರಡು ತಿಂಗಳ ಹಿಂದೆ ಅಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದ (marriage). ಇನ್ನೇನು ಈಗಷ್ಟೇ ಸಂಸಾರದ ಬಂಡಿ ಶುರುವಾಗಿತ್ತು.  ಹೊಸ ಜೀವನ ಕನಸು ಕಂಡಿದ್ದ ರಮೇಶ್​ಗೆ ಹೆಂಡತಿ ಕೈಕೊಟ್ಟಿದ್ದಾಳೆ. ಹೌದು..ರಮೇಶನ ಪತ್ನಿ ಪ್ರಿಯತಮನೊಂದಿಗೆ (Lover) ಪರಾರಿಯಾಗಿದ್ದಾಳೆ. ಮೊನ್ನೇ ರಮೇಶ್ ಬಾತ್​ ರೂಮ್​ಗೆ ಹೋಗಿದ್ದಾಗ ಇತ್ತ ಹೆಂಡತಿ ಪ್ರಿಯತಮನ ಬೈಕ್ ಏರಿ ಎಸ್ಕೇಪ್ ಆಗಿದ್ದಾಳೆ. ಇದರಿಂದ ಕಂಗಾಲಾದ ರಮೇಶ್​ ಪೊಲೀಸ್​ ಮೆಟ್ಟಿಲೇರಿದ್ದು, ಹೆಂಡತಿಯನ್ನು ಹುಡುಕಿಕೊಡಿ ಎಂದು ರಾಜರಾಜೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಮೇಶ್ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ. ಆದ್ರೆ, ಮೊನ್ನೆ ರಮೇಶ್​ ಬಾತ್​ ರೂಮ್​ಗೆ ಹೋಗಿದ್ದಾಗ ಇತ್ತ ಹೆಂಡತಿ ಮನೆ ಬೀಗ ಹಾಕಿ ಲವರ್​ ಜೊತೆ ಪರಾರಿಯಾಗಿದ್ದಾಳೆ. ಇದರಿಂದ ದಿಕ್ಕುತೋಚಂದಾತ ರಮೇಶ್​ ಪತ್ನಿಯನ್ನು ಹುಡುಕೊಂಡಿ ಎಂದು ದೂರು ನೀಡಿದ್ದಾರೆ. ಕಾರ್ತಿಕ್ ಎಂಬುವನ ಜೊತೆ ಹೋಗಿದ್ದಾಳೆ ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಿಳೆ ಪತ್ತೆಗೆ ಕಾರ್ಯಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಡ್​​ ರೂಮ್​ನಲ್ಲಿ ಯುವಕನ ಜೊತೆ ಹೆಂಡ್ತಿ ಕಂಡು ಹೌಹಾರಿದ ಪತಿ, ಡೆತ್​ನೋಟ್ ನಲ್ಲಿ ಭಾವುಕ ನುಡಿ ಬರೆದಿಟ್ಟು ಬಿಬಿಎಂಪಿ ನೌಕರ ಆತ್ಮಹತ್ಯೆ

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us