ಸರ್ಕಾರಿ ಮಹಿಳಾ ನೌಕರರ ಹಿತರಕ್ಷಣೆಗಾಗಿ ಈ ಸಂಘ ಸ್ಥಾಪನೆ-ರೋಶಿನಿಗೌಡ

ಸರ್ಕಾರಿ ಮಹಿಳಾ ನೌಕರರಿಗೆ ಪದೋನ್ನತಿ, ಮುಂಬಡ್ತಿ, ಸಂಬಳ, ಪಿಂಚಣಿ, ವರ್ಗಾವಣೆ, ಖಾಲಿ ಹುದ್ದೆಗಳ ಭರ್ತಿ, ನಿವೃತ್ತಿ, ಪ್ರಕರಣ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ರೋಶನಿಗೌಡರವರು ಹೇಳಿದರು.

ಸರ್ಕಾರಿ ಮಹಿಳಾ ನೌಕರರ ಹಿತರಕ್ಷಣೆಗಾಗಿ ಈ ಸಂಘ ಸ್ಥಾಪನೆ-ರೋಶಿನಿಗೌಡ
ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸ್ಥಾಪನೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 2:37 PM

ಬೆಂಗಳೂರು, ಅ.18: ನೂತನ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ (State Government Women Employees Association) ಸ್ಥಾಪನೆಯಾಗುತ್ತಿದ್ದು, ಈ ವಿಷಯ ಕುರಿತು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು. ಈ ವೇಳೆ ಅಧ್ಯಕ್ಷರಾದ ಶ್ರೀಮತಿ ರೋಶನಿಗೌಡರವರು ಮಾತನಾಡಿ ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನದಲ್ಲಿ ಲಿಂಗ ಸಮಾನತೆ ಹಕ್ಕನ್ನು ಪ್ರತಿಪಾದಿಸಲಾಗಿದೆ .ದೇಶದಲ್ಲಿ ದೇಶದ ಮಹಿಳಾ ರಾಷ್ಟ್ರಪತಿ ಮತ್ತು ಮಹಿಳಾ ಪ್ರಧಾನಿಯಾಗಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಮಹಿಳೆಯರ ನೋವು ಸಂಕಷ್ಟಗಳಿಗೆ ಮಹಿಳೆಯೇ ಚೆನ್ನಾಗಿ ಅರ್ಥಮಾಡಿಕೊಳ್ಳುವಳು ಈ ನಿಟ್ಚಿನಲ್ಲಿ ಸರ್ಕಾರಿ ಮಹಿಳಾ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸ್ಪಾಪನೆಯಾಗಿದೆ ಎಂದರು.

ಈ ಸಂಘದ ಉದ್ದೇಶವೇನು?

ರಾಜ್ಯ ಸರ್ಕಾರದಲ್ಲಿ 2.50ಲಕ್ಷ ಮಹಿಳಾ ನೌಕರರು ಇದ್ದಾರೆ ಇಂದಿನಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು

ಹೌದು, ರಾಜ್ಯ ಸರ್ಕಾರದಲ್ಲಿ 2.50 ಲಕ್ಷ ಮಹಿಳಾ ನೌಕರರು ಇದ್ದಾರೆ. ಇಂದಿನಿಂದ ಅದರ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು. ಈ ಮೂಲಕ ನಮ್ಮ ಸಂಘವು ಸರ್ಕಾರಿ ಮಹಿಳಾ ನೌಕರರ ಕುಂದೂಕೂರತೆಗಳಿಗೆ ಸ್ಪಂದಿಸುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಇಲಾಖೆಗಳೊಡನೆ ಚರ್ಚಿಸಿ ನ್ಯಾಯ ಒದಗಿಸುವುದು.

ಮಹಿಳಾ ನೌಕರರಿಗೆ ಸಮಾನತೆ, ಜೇಷ್ಠತೆ, ಹಿತಾಸಕ್ತಿ ಸಹೋದರತೆ, ಸೌಹರ್ದತೆ ಭಾವನೆ ಬೆಳಸುವುದು

ಮಹಿಳಾ ನೌಕರರಿಗೆ ಅನ್ಯರಿಂದ ತೊಂದರೆಯಾದಲ್ಲಿ ಉಚಿತವಾಗಿ ಕಾನೂನು ನೆರವು, ಕೆ.ಸಿ.ಎಸ್.ಆರ್.ನಡತೆ ನಿಯಮಗಳ ಸೇರಿದಂತೆ ಸೇವಾ ವಿಷಯಗಳು ಕುಟುಂಬ ಕಲ್ಯಾಣ, ವಿಮಾ ಯೋಜನೆ, ಸಣ್ಣ ಉಳಿತಾಯ, ಶಿಶುಪಾಲನಾ ರಜೆ ಇನ್ನಿತರ ವಿಷಯಗಳಲ್ಲಿ ಮಹಿಳಾ ನೌಕರರಿಗೆ ಅರಿವು ಮೂಡಿಸುವುದು. ಜೊತೆಗೆ ಮಹಿಳಾ ನೌಕರರಿಗೆ ಸಮಾನತೆ, ಜೇಷ್ಠತೆ, ಹಿತಾಸಕ್ತಿ ಸಹೋದರತೆ, ಸೌಹರ್ದತೆ ಭಾವನೆ ಬೆಳಸುವುದು. ಇನ್ನು ಗಾಂಧಿ ಜಯಂತಿ , ಸ್ವಾತಂತ್ರ್ಯ ದಿನಾಚರಣೆ, ಅಂಬೇಡ್ಕರ್ ದಿನಾಚರಣೆ, ಕಾರ್ಮಿಕರ ದಿನಾಚರಣೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಚರಿಸುವುದು.

ಇದನ್ನೂ ಓದಿ:Womens Day 2023: ಮಹಿಳಾ ದಿನಾಚರಣೆಗೆ ವಿಶೇಷ ಸಾಂದರ್ಭಿಕ ರಜೆ ನೀಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಮಹಿಳಾ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು

ಸರ್ಕಾರಿ ಮಹಿಳಾ ನೌಕರರಲ್ಲಿ ಸ್ವಸಹಾಯ ಗುಂಪು ರಚನೆ ಮತ್ತು ಸಿ ಮತ್ತು ಡಿ ದರ್ಜೆ ಮಹಿಳಾ ನೌಕರರ ಹೆಣ್ಣು ಮಕ್ಕಳ ವ್ಯಾಸಂಗಕ್ಕಾಗಿ ಧನಸಹಾಯ ಮತ್ತು ಮಹಿಳಾ ನೌಕರರ ಮಕ್ಕಳಿಗೆ ಸಾಮೂಹಿಕ ಮದುವೆ ಮಾಡಿ ವಿವಾಹ ವೆಚ್ಚ ಕಡಿಮೆ ಮಾಡುವುದು. ಮಹಿಳಾ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು. ಪರಿಸರ ಜಾಗೃತಿ ಮೂಡಿಸಲು ಪರಿಸರ ದಿನಾಚರಣೆ ಮತ್ತು ಮಹಿಳಾ ನೌಕರರಿಗೆ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಹಿಳಾ ನೌಕರರ ಮಕ್ಕಳಿಗೆ ಅವಕಾಶ ನೀಡುವುದು ಮತ್ತು ಸಂಘದ ಸದಸ್ಯರಿಗೆ ರಿಕ್ರಿಯೋಷನ್ ಕ್ಲಬ್ ಮತ್ತು ಹೆಲ್ತ್ ಕ್ಲಬ್, ಜಿಮ್ ನಿಲಯಗಳನ್ನು ಸ್ಪಾಪಿಸಲಾಗುತ್ತದೆ ಎಂದು ಹೇಳಿದರು.

ಕೆಲಸ ಮಾಡುವ ಸ್ಥಳಗಳಲ್ಲಿ ನಿರ್ಭಿತಿಯಿಂದ ಕೆಲಸ ಮಾಡಲು ಉತ್ತಮ ವಾತಾವರಣ ನಿರ್ಮಾಣ

ಇನ್ನು ಸರ್ಕಾರಿ ಮಹಿಳಾ ನೌಕರರಿಗೆ ಪದೋನ್ನತಿ, ಮುಂಬಡ್ತಿ, ಸಂಬಳ, ಪಿಂಚಣಿ, ವರ್ಗಾವಣೆ, ಖಾಲಿ ಹುದ್ದೆಗಳ ಭರ್ತಿ, ನಿವೃತ್ತಿ, ಪ್ರಕರಣ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮಹಿಳಾ ನೌಕರರಿಗೆ ನೀಡುತ್ತಿರುವ ವೇತನ, ವಿವಿಧ ಯೋಜನೆಗಳ ಹಲವು ರೀತಿಯ ಅನುದಾನ ಬಗ್ಗೆ ಅರಿವು ಮೂಡಿಸುವುದು. ಮಹಿಳಾ ನೌಕರರ ಹಕ್ಕುಭಾದ್ಯತೆ ಅದ್ಯಯನ ಪ್ರವಾಸ ಹಾಗೂ ಲಿಂಗ ತಾರತಮ್ಯ ಮುಕ್ತಗೊಳಿಸುವುದು. ಉತ್ತಮ ಮಹಿಳಾ ನೌಕರರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವುದು , ತಾವು ಕೆಲಸ ಮಾಡುವ ಸ್ಥಳಗಳಲ್ಲಿ ನಿರ್ಭಿತಿಯಿಂದ ಕೆಲಸ ಮಾಡಲು ಉತ್ತಮ ವಾತಾವರಣ ನಿರ್ಮಿಸುವುದು.

ಇದನ್ನೂ ಓದಿ:Maternity Leave: ಈ ರಾಜ್ಯದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಸಿಗಲಿದೆ 1 ವರ್ಷದ ಹೆರಿಗೆ ರಜೆ

ಮಹಿಳಾ ನೌಕರರಿಗೆ ಗ್ರಂಥಾಲಯ, ವಾಚನಾಲಯ ಸ್ಪಾಪನೆ ಹಾಗೂ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶಿಷ್ಯವೇತನ, ಉನ್ನತ ವ್ಯಾಸಂಗಕ್ಕೆ ಮಕ್ಕಳಿಗೆ ಧನಸಹಾಯ ನೀಡುವುದು. ರಾಜ್ಯ ಸರ್ಕಾರಿ ಮಹಿಳಾ ನೌಕರರ ಹಿತರಕ್ಷಣೆಗಾಗಿ ನಮ್ಮ ಸಂಘ ಸ್ಪಾಪನೆಯಾಗಿದ್ದು, ಶೇಕಡ 50ರಷ್ಟು ಮಹಿಳಾ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಸಂಘದ ಕಾರ್ಯನಿರ್ವಹಣೆಗೆ ಸರ್ಕಾರದ ಕಟ್ಟಡ ಮೂಂಜೂರು ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಇನ್ನು ಈ ವೇಳೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ಗೀತಾಮಣಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಶಿಕಲಾ.ಕೆ, ಖಜಾಂಚಿ ಶ್ರೀಮತಿ ಜಯಶೀಲಾ ಎನ್ ಹಾಗೂ ರಾಜ್ಯ ಕಾರ್ಯದರ್ಶಿ ಬಿ.ಎ.ಚೈತ್ರರವರು ಭಾಗವಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ