NIA Raids: ದಾಳಿಗಾಗಿ ಮೂರು ತಿಂಗಳಿನಿಂದ ತನಿಖೆ ನಡೆಸಿದ್ದ ಎನ್​ಐಎ, ಹೀಗಿದೆ ಬಂಧಿತರ ವೃತ್ತಾಂತ

PFI Activists: ಕರ್ನಾಟಕದಲ್ಲಿ ದಾಳಿ ನಡೆಸಿದ ವೇಳೆ ಬಂಧಿತರಾದ ಪಿಎಫ್​ಐನ ಆರು ಮಂದಿಯ ವಿವರ ಹೀಗಿದೆ.

NIA Raids: ದಾಳಿಗಾಗಿ ಮೂರು ತಿಂಗಳಿನಿಂದ ತನಿಖೆ ನಡೆಸಿದ್ದ ಎನ್​ಐಎ, ಹೀಗಿದೆ ಬಂಧಿತರ ವೃತ್ತಾಂತ
ಎನ್​ಐಎ ಅಧಿಕಾರಿಗಳು (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 23, 2022 | 10:26 AM

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮತ್ತು ಎಸ್​ಡಿಪಿಐ ಕಚೇರಿಗಳು ಹಾಗೂ ಮುಖಂಡರ ಮನೆಗಳ ದಾಳಿ ನಡೆಸುವ ಮೊದಲು ರಾಷ್ಟ್ರೀಯ ತನಿಖಾ ದಳದ (National Investigation Agency – NIA) ಅಧಿಕಾರಿಗಳು ಸುಮಾರು 3 ತಿಂಗಳು ಆಂತರಿಕೆ ತನಿಖೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಪಿಎಫ್​ಐನ ಎಲ್ಲ ಪ್ರಮುಖರ ಮಾಹಿತಿ ಕಲೆ ಹಾಕಿದ್ದರು. ಯಾವ ಸಮಯದಲ್ಲಿ ಯಾರು ಮನೆಯಲ್ಲಿರುತ್ತಾರೆ? ಎಷ್ಟೊತ್ತಿಗೆ ಎಲ್ಲಿಗೆ ಹೋಗುತ್ತಾರೆ ಎಂಬ ಮಾಹಿತಿಯನ್ನು ವಿಶ್ಲೇಷಿಸಿದ್ದರು. ಪ್ರಮುಖ ಪದಾಧಿಕಾರಿಗಳ ಚಲನವಲನದ ಮೇಲೆ ಕಣ್ಣಿಟ್ಟ ನಂತರವೇ ಈ ದಾಳಿ ನಡೆದಿದೆ.

ಎನ್​ಐಎ ದಾಳಿಯು ಬಹಳ ಮೊದಲೇ ನಡೆಯಬೇಕಿತ್ತು. ಆದರೆ ಕೇರಳದ ಮಲಪ್ಪುರಂನಲ್ಲಿ ಪಿಎಫ್​ಐ ಸಭೆ ಇದ್ದ ಕಾರಣ ದಾಳಿಯ ದಿನಾಂಕವನ್ನು ಮುಂದೂಡಬೇಕಾಯಿತು. ಬಹುತೇಕ ನಾಯಕರು ಮೀಟಿಂಗ್​ಗೆ ತೆರಳಿದ್ದರು. ಆದರೆ ನಿನ್ನೆ ಬಹುತೇಕ ಎಲ್ಲ ಪ್ರಮುಖ ನಾಯಕರು ಬೆಂಗಳೂರಿನಲ್ಲಿಯೇ ಇದ್ದ ಕಾರಣ ಅದೇ ದಿನವನ್ನು ದಾಳಿಗೆ ಆರಿಸಿಕೊಳ್ಳಲಾಯಿತು.

ಕರ್ನಾಟಕದಲ್ಲಿ ದಾಳಿ ನಡೆಸಿದ ವೇಳೆ ಬಂಧಿತರಾದ ಪಿಎಫ್​ಐನ ಆರು ಮಂದಿಯ ವಿವರ ಹೀಗಿದೆ.

  1. ಅನೀಸ್ ಅಹಮದ್: ಪಿಎಫ್​ಐನ ರಾಜ್ಯಮಟ್ಟದ ನಾಯಕ ಅನೀಸ್ ಅಹಮದ್ ಬೆಂಗಳೂರಿನವರು. ಕಳೆದ 10 ದಿನಗಳಿಂದ ‘ಮಲಬಾರ್ ಕಾನ್ಫರೆನ್ಸ್’ ಹೆಸರಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
  2. ಅಫ್ಸರ್ ಪಾಷಾ: ರಾಜ್ಯಮಟ್ಟದ ನಾಯಕರಾದ ಅಫ್ಸರ್ ಪಾಷಾ ಅವರ ಮನೆಯ ಮೇಲೆ ಒಂದೂವರೆ ವರ್ಷದ ಹಿಂದೆ ಇಡಿ ರೇಡ್ ಆಗಿತ್ತು. ಆಗ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಪಾಷಾ ನಂತರ ಪಾದರಾಯನಪುರದ ಟೆಲಿಕಾಂ ಲೇಔಟ್​ನ ಬಾಡಿಗೆ ಮನೆಗೆ ಶಿಫ್ಟ್​ ಆಗಿದ್ದರು. ವಿಜಯನಗರದಲ್ಲಿ ಲಸ್ಸಿ ಶಾಪ್ ನಡೆಸುತ್ತಿದ್ದರು.
  3. ಅಬ್ದುಲ್ ವಹೀದ್​: ಜಯಮಹಲ್ ಪ್ಯಾಲೇಸ್ ಹತ್ತಿರ ವಾಸವಿರುವ ಅಬ್ದುಲ್ ವಹೀದ್ ತಮಿಳುನಾಡು ಮೂಲದವರು. ಪಿಎಫ್​ಐನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.
  4. ಯಾಸಿರ್ ಹಸನ್​​: ಮೂಲತಃ ಮಂಗಳೂರಿನವರಾದ ಯಾಸಿರ್​ ಹಸನ್ ಬೆಂಗಳೂರಲ್ಲಿ ಪಿಎಫ್​ಐ ಕಾರ್ಯಚಟುವಟಿಕೆ ನೋಡಿಕೊಳ್ಳುತ್ತಿದ್ದರು. ಕಾವವ್​ಬೈರಸಂದ್ರದ ಇವರ ಮನೆಯಿಂದಲೇ ಪಿಎಫ್​ಐನ ಕಚೇರಿ ಕೆಲಸಗಳನ್ನು ನಿರ್ವಹಿಸಲಾಗುತ್ತಿತ್ತು.
  5. ಮಹಮ್ಮದ್ ಶಕೀಬ್ (ಸಾಕಿಬ್): ತಮಿಳುನಾಡು ಮೂಲದ ಇವರು ರಿಚ್​ಮಂಡ್ ಟೌನ್ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು.
  6. ಶಾಹಿದ್ ನಸೀರ್​: ಬೆಂಗಳೂರು ಮೂಲದ ಶಾಹಿದ್​ ನಸೀರ್ ಪಿಎಫ್​ಐ ರಾಜ್ಯ ಘಟಕದ ಸೋಷಿಯಲ್ ಮೀಡಿಯಾ ಘಟಕದ ಉಸ್ತುವಾರಿಯಾಗಿದ್ದರು.

Published On - 10:25 am, Fri, 23 September 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್