BMS ಕಾಲೇಜಿನ ಜಮೀನು ಅಕ್ರಮ: ಎಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪಕ್ಕೆ ಉತ್ತರ ನೀಡಿದ ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ

BMS College Land Dealing: ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಉತ್ತರ ನೀಡಲು ಮುಂದಾದ ವೇಳೆ ಕುಮಾರಸ್ವಾಮಿ ಎದ್ದು ಮಾತನಾಡಲು ಮುಂದಾದರು. ನೀವು ಮಾತಾಡುವಾಗ ನಾನು ಮಧ್ಯೆ ಮಾತಾಡಿದ್ನಾ? ಸ್ವಲ್ಪ ತಾಳ್ಮೆ ಇರಬೇಕು ಎಂದು ಸಚಿವ ಅಶ್ವಥ್ ನಾರಾಯಣ ಕಿವಿಮಾತು ಹೇಳಿದರು.

BMS ಕಾಲೇಜಿನ ಜಮೀನು ಅಕ್ರಮ: ಎಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪಕ್ಕೆ ಉತ್ತರ ನೀಡಿದ ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ
BMS ಕಾಲೇಜಿನ ಜಮೀನು ಅಕ್ರಮ: ಎಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪಕ್ಕೆ ಉತ್ತರ ನೀಡಿದ ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 22, 2022 | 8:53 PM

ಬೆಂಗಳೂರು: ನಗರದ ಪ್ರತಿಷ್ಠಿತ ಬಿಎಂಎಸ್ ಕಾಲೇಜು ಟ್ರಸ್ಟ್, ಜಮೀನು ಅಕ್ರಮದಲ್ಲಿ (BMS College Land Dealing) ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ್ (Dr Ashwathnarayan CN) ಶಾಮೀಲು ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ಅವರು ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಹೆಚ್​​ಡಿಕೆ ಆರೋಪಕ್ಕೆ ಸಚಿವ ಡಾ. ಅಶ್ವತ್ಥ್​ ನಾರಾಯಣ ಸದನದಲ್ಲಿಯೇ ಉತ್ತರ ನೀಡಿದ್ದಾರೆ.

ಕುಮಾರಸ್ವಾಮಿ ಆರೋಪ ಅಲ್ಲಗಳೆದ ಶಿಕ್ಷಣ ಸಚಿವ ಡಾ. ಅಶ್ವಥ್

ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಉತ್ತರ ನೀಡಲು ಮುಂದಾದ ವೇಳೆ ಕುಮಾರಸ್ವಾಮಿ ಎದ್ದು ಮಾತನಾಡಲು ಮುಂದಾದರು. ನೀವು ಮಾತಾಡುವಾಗ ನಾನು ಮಧ್ಯೆ ಮಾತಾಡಿದ್ನಾ? ಸ್ವಲ್ಪ ತಾಳ್ಮೆ ಇರಬೇಕು ಎಂದು ಸಚಿವ ಅಶ್ವಥ್ ನಾರಾಯಣ ಕಿವಿಮಾತು ಹೇಳಿದರು.

ಕಾನೂನು ಚೌಕಟ್ಟಿನಲ್ಲಿಯೇ ಎಲ್ಲ ಪ್ರಕ್ರಿಯೆಗಳು ನಡೆದಿವೆ. ಕುಮಾರಸ್ವಾಮಿ ಅವರ ಆರೋಪಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಉತ್ತರ ಹೀಗಿದೆ:

2020 ರಲ್ಲಿ ದಯಾನಂದ ಪೈ ಅವರನ್ನ ಅಜೀವ ಟ್ರಸ್ಟಿಯಾಗಿ ನೇಮಕ ಮಾಡಲು ಟ್ರಸ್ಟ್ ಪ್ರೋಪಸಲ್ ಕೊಡುತ್ತದೆ. ಅವರ ಹತ್ತು ವರ್ಷಗಳ ಸೇವೆ ಆಧರಿಸಿ ಅಜೀವ ಟ್ರಸ್ಟಿಯಾಗಿ ನೇಮಕ ಮಾಡಲು ನಿರ್ಧಾರ. ನಾನು ಸಚಿವನಾಗಿದ್ದಾಗ ಇದನ್ನು ಆದೇಶ ಮಾಡಿ ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಿದ್ದೆ. ಈ ಆದೇಶದಿಂದ ಸರ್ಕಾರಕ್ಕೆ ಸಮಸ್ಯೆ ಆಗಲ್ಲ. ಸರ್ಕಾರ ಡೋನರ್ ಟ್ರಸ್ಟಿ ಆದ ಬಳಿಕ ಯಾವುದೇ ತಿದ್ದುಪಡಿ ತರಲು ಅಧಿಕಾರ ಇರುತ್ತದೆ. ಕುಮಾರಸ್ವಾಮಿ ಸಿಎಂ ಆಗಿದ್ದ ಕಾಲದಲ್ಲಿ ಕಡತ ಬಂದಿದೆ. ಆದ್ರೆ ದಾಖಲೆ ಪರಿಶೀಲನೆ ನಡೆಸಿ ವಾಪಸು ಕಳಿಸಿರುತ್ತಾರೆ. ನಾವು ಅಡ್ವೋಕೇಟ್ ಜನರಲ್ ಸಲಹೆ ಪಡೆದು ಮುಂದುವರೆದಿದ್ದೇವೆ. ಲೈಫ್ ಟ್ರಸ್ಟಿ ಆದ ಮಾತ್ರಕ್ಕೆ ಅವರಿಗೆ ಇತರೆ ಸದಸ್ಯರಿಗಿಂತ ವಿಭಿನ್ನ ಅಧಿಕಾರ ಇಲ್ಲ. ಟ್ರಸ್ಟ್ 1949 ರಲ್ಲಿ ಮೈಸೂರು ಸರ್ಕಾರದಿಂದ ಜಮೀನು ಖರೀದಿ ಮಾಡಿದ್ದಾರೆ. 1962 ವರೆಗೂ ಕಾಲ ಕಾಲಕ್ಕೆ ಟ್ರಸ್ಟ್ ಜಮೀನು ಖರೀದಿ ಮಾಡಿದೆ. ಯಲಹಂಕದ ಬಳಿ 21 ಎಕರೆ ಜಮೀನು ಖರೀದಿ ಮಾಡಿದೆ. ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಸಂಸ್ಥೆ. ಸರ್ಕಾರ, ಕಾಮೆಡ್-ಕೆ, ಮ್ಯಾನೇಜ್ಮೆಂಟ್ ಅವರಿಗೆ ಸೀಟ್ ಹಂಚಿಕೆ ಇದೆ. ಈಗ ಸಂಸ್ಥೆಗೆ 86 ಎಕರೆ ಜಮೀನು ಇದೆ. ಇದಕ್ಕೆ ಬೆಲೆ ಕಟ್ಟಲು ಇದು ಕಮರ್ಷಿಯಲ್ ಬಿಲ್ಡಿಂಗ್ ಅಲ್ಲ. ಸಾರ್ವಜನಿಕ ಉದ್ದೇಶಕ್ಕಾಗಿ ಇರುವ ಸಂಸ್ಥೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ ಉತ್ತರಿಸಿದರು.

BMS ಶಿಕ್ಷಣ ಸಂಸ್ಥೆ ಕುರಿತು ಚರ್ಚೆ ವೇಳೆ ಏಕವಚನದಲ್ಲಿ ವಾಗ್ವಾದ

ಈ ಹಂತದಲ್ಲಿ ವಿಧಾನಸಭೆಯಲ್ಲಿ ಸಚಿವ ಅಶ್ವತ್ಥ್‌ ಮತ್ತು ಕುಮಾರಸ್ವಾಮಿ ಏಕವಚನದಲ್ಲಿ ವಾಗ್ವಾದಕ್ಕೆ ಇಳಿದರು. ನನ್ನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇದೆಯಾ? ಯೋಗ್ಯತೆ ಇದೆಯಾ ಎಂದು ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ನನ್ನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲವೆಂದ ಹೆಚ್‌ಡಿಕೆಗೆ ನಿಮಗೂ ನನ್ನ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲವೆಂದು ಡಾ. ಅಶ್ವತ್ಥ್‌ ಉತ್ತರಿಸಿದರು. ಆ ವೇಳೆ ಸ್ಪೀಕರ್ ಕಾಗೇರಿ ಅವರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.

ನಾವು ಯಾರೂ ರಾಜಕೀಯಕ್ಕೆ ಬಂದಿರೋದು ಜೀವನಾಂಶಕ್ಕೆ ಅಲ್ಲ. ಒಂದು ದ್ವೇಷದ ರಾಜಕಾರಣ ಇಟ್ಟುಕೊಂಡು ಬಂದು ನಾನು ಎಲ್ಲಿದ್ದೀರಿ ಅಂತಾ ಕೇಳ್ತೀರಲ್ಲ ಎಂದು ಸಚಿವ ಅಶ್ವತ್ಥ್ ಹೇಳಿದರು. ಈ ವೇಳೆ ಎದ್ದು ನಿಂತು ಮಾತಾಡಲು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿದರು. ರಮೇಶ್ ಕುಮಾರ್ ಕುಳಿತುಕೊಳ್ಳಿ. ನಿಮ್ಮ ಬೆಂಬಲ ನನಗೆ ಬೇಡ ಎಂದು ಅಶ್ವಥ್ ನಾರಾಯಣ್ ಹೇಳಿದರು. ರೀ ನಾನು ನಿಮ್ಮ ಬೆಂಬಲಕ್ಕೆ ಬರ್ತೀದ್ದೀನಿ ರೀ ಎಂದು ರಮೇಶ್ ಕುಮಾರ್ ಹೇಳಿದರೂ ಬೇಡ ಬೇಡ ನನಗೆ ನಿಮ್ಮ ಬೆಂಬಲ ಬೇಡ, ನಾನು ಎಮೋಷನಲ್ ಆಗಿ ಮಾತಾಡುವಾಗ ನೀವು ಮಧ್ಯ ಬರಬೇಡಿ ಎಂದು ಅಶ್ವಥ್ ನಾರಾಯಣ್ ಹೇಳಿದರು. ಅಶ್ವಥ್ ನಾರಾಯಣ್ ಮಾತಿಗೆ ರಮೇಶ್ ಕುಮಾರ್ ಕೊನೆಗೆ ಸುಮ್ಮನೆ ಕುಳಿತರು.

ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ ಅಭಿನಂದಿಸಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್!

ಇಂತಹ ದಕ್ಷ ವ್ಯಕ್ತಿಯನ್ನು ಯಡಿಯೂರಪ್ಪ ಡಿಸಿಎಂ ಮಾಡಿದ್ದರು. ಅದಕ್ಕಾಗಿ ಯಡಿಯೂರಪ್ಪ ಅವರಿಗೆ ನಾನು ಅಭಿನಂದಿಸುತ್ತೇನೆ. ಈಗ ಅವರನ್ನು ಬರಿ ಮಂತ್ರಿ ಮಾಡಿದ್ದೀರಿ. ಇಂದು ಅವರ ದಿಟ್ಟತನ ನೋಡಿದಾಗ ಅವರನ್ನು ಮತ್ತೆ ಡಿಸಿಎಂ ಮಾಡಿ ಎಂದು ಮನವಿ ಮಾಡುತ್ತೇನೆ ಎಂದು ಸದನದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅಭಿನಂದಿಸಿ ಮಾತನಾಡಿದರು.

ಬಳಿಕ ಮಾತು ಮುಂದುವರಿಸಿದ ಅಶ್ವಥ್ ನಾರಾಯಣ ನಾವು ಯಾವುದೇ ಮನೆ ಹಾಳು ಮಾಡಿದವರು ಅಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು. ದ್ವೇಷದ ರಾಜಕಾರಣ ಮಾಡಬೇಡಿ. 2 ದಿನದ ಹಿಂದೆ ಸಿನಿಮಾ ಟೀಸರ್ ಬಿಟ್ಟಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ನೀವು ಹೆದರಿಸಲು ಸಾಧ್ಯವಿಲ್ಲ. ಸದನಕ್ಕೆ ಬಾರದೇ ಇದ್ದಿದ್ದಕ್ಕೆ ಕೇಳಿದ್ದೇನೆ. ನಾವು ಮಾತನಾಡಲೇಬಾರದಾ? ನಮ್ಮ ಬಾಯಿ ಮುಚ್ಚಿಕೊಳ್ಳಬೇಕಾ? ಇಂಜಿನಿಯರ್ ಕಾಲೇಜುಗಳಲ್ಲಿ ಅಡ್ಮಿಷನ್ ಆಗ್ತಿಲ್ಲ. ಇದರ ಬಗ್ಗೆ ಮಾತನಾಡಲ್ಲ. ಬರೀ ರಾಜಕೀಯ ಮಾಡ್ತಾರೆ. ಸದನ ಅಂದ್ರೆ ರಾಜಕೀಯ ‌ಮಾತ್ರನಾ? ಬೇರೆ ಒಳ್ಳೆಯ ಕೆಲಸಕ್ಕೂ ಬಳಸಿಕೊಳ್ಳಿ ಎಂದರು.

ಸಚಿವ ಅಶ್ವಥ್ ನಾರಾಯಣ್ ಹೇಳಿಕೆ:

ಯಾವ ಉದ್ದೇಶಕ್ಕಾಗಿ ಈ ವಿಷಯ ತಗೊಂಡಿದ್ದು? ನಾವು ಮಾಡೋಕೆ ಆಗದೇ ಇದ್ದಾಗ ಈ ಸಂಸ್ಥೆ ಒಳ್ಳೆಯ ಕೆಲಸ ಮಾಡ್ತಿದೆ. ಒಳ್ಳೆಯ ಸಂಸ್ಥೆಯನ್ನು ನಾಶ ಮಾಡೋಕೆ ಬಹಳ ಹೊತ್ತು ಏನೂ ಬೇಕಿಲ್ಲ. ಸರ್ಕಾರ ಏನು ಬೇಕಾದರೂ ಮಾಡಬಹುದು. ಆದರೆ ನಾವು ಆ ರೀತಿ ಮಾಡಿಲ್ಲ. ಸರ್ಕಾರ ಮಾಡದ ಗುಣಮಟ್ಟದ ಶಿಕ್ಷಣವನ್ನು ಸಂಸ್ಥೆ ಕೊಡ್ತಿದೆ. ಅಂತಹ ಸಂಸ್ಥೆಯನ್ನು ನಾವು ಮುಗಿಸಿಬಿಡುವುದಾ? ಏನು ಬಂತು? ಏನು ಬಿಡ್ತು ಅಂತಾ ಸುಮ್ಮನೆ ರಾಜಕಾರಣ ಮಾಡೋದಾ? ಎಂದು ಕುಮಾರಸ್ವಾಮಿಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದರು.

ಈ ಸ್ಟೋರಿ ನಾನು ತೆಗೆದಿದ್ದು ಅಲ್ಲ. ನೀವು ಕ್ರಿಯೇಟ್ ಮಾಡಿಕೊಂಡಿರುವ ಸ್ಟೋರಿ ಇದು. ಕೆಜಿಎಫ್ ಅಲ್ಲ ಇದು ಎಂದು ಸಚಿವ ಅಶ್ವಥ್ ನಾರಾಯಣಗೆ ಕುಮಾರಸ್ವಾಮಿ ಈ ವೇಳೆ ಹೇಳಿದರು.

ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಜೆಡಿಎಸ್ ನಿರ್ಧಾರ

BMS ಶಿಕ್ಷಣ ಟ್ರಸ್ಟ್‌ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಲು ಜೆಡಿಎಸ್ ನಿರ್ಧಾರ ಮಾಡಿದೆ. ಕಲಾಪ ಮುಂದೂಡಿಕೆ ಬಳಿಕವೂ ಸದನದಲ್ಲೇ ಇರುವ JDS ಸದಸ್ಯರು ಸಚಿವ ಅಶ್ವತ್ಥ್‌ ವಿರುದ್ಧ ಆಕ್ರೋಶವ್ಯಕ್ತಪಡಿಸ್ತಿದಾರೆ. ಇನ್ನು, ಸಿಎಂ ಬಸವರಾಜ ಬೊಮ್ಮಾಯಿ, ಸ್ಪೀಕರ್ ಕಾಗೇರಿ ಅವರ ಕಡೆಯಿಂದ ಅಹೋರಾತ್ರಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಕೆ ಯತ್ನ ನಡೆದಿದೆ. ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಸಚಿವ ಮಾಧುಸ್ವಾಮಿ, ಸಚಿವ ಶ್ರೀರಾಮುಲು ಸಹ ಜೆಡಿಎಸ್ ಶಾಸಕರ ಮನವೊಲಿಸುತ್ತಿದ್ದಾರೆ. ಸ್ಪೀಕರ್ ಕಚೇರಿಯಲ್ಲಿ ಹೆಚ್.ಡಿ.ರೇವಣ್ಣ ಜೊತೆ ಸ್ಪೀಕರ್‌ ಕಾಗೇರಿ, ಕಾನೂನು ಸಚಿವ ಮಾಧುಸ್ವಾಮಿ ಸಂಧಾನ ಸಭೆ ನಡೆಸಿದ್ದಾರೆ.

Published On - 7:31 pm, Thu, 22 September 22

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್