ಫುಟ್​ಪಾತ್ ಅತಿಕ್ರಮಣ ತೆರವು ಆದೇಶ ಪಾಲಿಸದ ಅಧಿಕಾರಿಗಳಿಗೆ ಕೋರ್ಟ್ ವಿನಾಯಿತಿ

ಫುಟ್​ಪಾತ್ ಅತಿಕ್ರಮಣ ತೆರವು ಆದೇಶ ಪಾಲಿಸದ ಅಧಿಕಾರಿಗಳಿಗೆ ಕೋರ್ಟ್ ವಿನಾಯಿತಿ
ಕರ್ನಾಟಕ ಹೈಕೋರ್ಟ್

ಏಪ್ರಿಲ್ 21, 2021 ರಂದು, ಮೋಟಾರು ವಾಹನ ಕಾಯ್ದೆ, ಕರ್ನಾಟಕ ಸಂಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಫುಟ್ ಪಾತ್ ಅತಿಕ್ರಮಣಕಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ನ್ಯಾಯಾಲಯವು ಅಧಿಕಾರಿಗಳಿಗೆ ಸೂಚಿಸಿತ್ತು.

TV9kannada Web Team

| Edited By: Ayesha Banu

Aug 05, 2021 | 2:11 PM

ಬೆಂಗಳೂರು: ನಗರದಲ್ಲಿ ಫುಟ್ಪಾತ್ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸುವ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಪಾಲಿಸದ ಅಧಿಕಾರಿಗಳಿಗೆ ಕೋರ್ಟ್ ವಿನಾಯಿತಿ ನೀಡಿದೆ.

ಏಪ್ರಿಲ್ 21, 2021 ರಂದು, ಮೋಟಾರು ವಾಹನ ಕಾಯ್ದೆ, ಕರ್ನಾಟಕ ಸಂಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಫುಟ್ ಪಾತ್ ಅತಿಕ್ರಮಣಕಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ನ್ಯಾಯಾಲಯವು ಅಧಿಕಾರಿಗಳಿಗೆ ಸೂಚಿಸಿತ್ತು.

ಉತ್ತಮವಾದ, ಒಳ್ಳೆಯ ಫುಟ್ ಪಾತ್ಗಳನ್ನು ಹೊಂದಿರುವುದು ಮೂಲಭೂತ ಹಕ್ಕಾಗಿದ್ದರೂ, ಫುಟ್ ಪಾತ್ಗಳು ಮತ್ತು ಸಾರ್ವಜನಿಕ ಬೀದಿಗಳಿಗೆ ಸಂಬಂಧಿಸಿದ ಶಾಸನಬದ್ಧ ಕಾನೂನುಗಳನ್ನು ವಿರಳವಾಗಿ ಜಾರಿಗೊಳಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಹಲವಾರು ಕಾಯಿದೆಗಳು, ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ಯಾವುದೇ ವಾಹನಗಳನ್ನು ಫುಟ್‌ಪಾತ್‌ಗಳಲ್ಲಿ ನಿಲ್ಲಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುವುದನ್ನು ನ್ಯಾಯಾಲಯವು ಗಮನಿಸಿದೆ.

ಬೆಂಗಳೂರು ಮೂಲದ ಎನ್ಜಿಒ ಲೆಟ್ಕಿಟ್ ಫೌಂಡೇಶನ್ ಪ್ರತ್ಯೇಕ ಪಿಐಎಲ್ ಅರ್ಜಿಯನ್ನು ಸಲ್ಲಿಸಿದ್ದು, ಪೊಲೀಸರು, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿದಂತೆ ಸರ್ಕಾರಿ ಸಂಸ್ಥೆಗಳು ಫುಟ್ ಪಾತ್ ಗಳನ್ನು ಹೇಗೆ ಅತಿಕ್ರಮಿಸಿವೆ ಎಂಬುದನ್ನು ಎತ್ತಿ ತೋರಿಸಿದೆ. ಅರ್ಜಿದಾರರು ಜಯನಗರ ಪೊಲೀಸ್ ಠಾಣೆ ಎದುರು ಸೇರಿದಂತೆ ಫುಟ್ ಪಾತ್ ಮೇಲೆ ನಿಲ್ಲಿಸಿದ ವಾಹನಗಳ ಇತ್ತೀಚಿನ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಮಂಗಳವಾರ ಅರ್ಜಿಯನ್ನು ಆಲಿಸಿದ, ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠವು ಯಾವುದೇ ಸರ್ಕಾರಿ ಸಂಸ್ಥೆ, ಜಯನಗರ ಪೊಲೀಸರು ಕೂಡ ಕೋರ್ಟ್ ಏಪ್ರಿಲ್ನಲ್ಲಿ ನೀಡಿದ್ದ ಆದೇಶವನ್ನು ಪಾಲಿಸಿಲ್ಲ ಎಂಬುದರ ಬಗ್ಗೆ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಾಲಯವು ಟ್ರಾಫಿಕ್ ಪೋಲಿಸ್ ಮತ್ತು ಬಿಬಿಎಂಪಿಗೆ ತಕ್ಷಣವೇ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದು ಮತ್ತು ಆಗಸ್ಟ್ 23 ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಬಿಬಿಎಂಪಿಯ ವಕೀಲರು ನ್ಯಾಯಾಲಯದ ಏಪ್ರಿಲ್ ಆದೇಶದ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದಕ್ಕೆ ಪತ್ರಿಕೆ ಜಾಹೀರಾತುಗಳನ್ನು ಮಾಡಿರುವುದರ ಬಗ್ಗೆ ಸಾಕ್ಷ್ಯ ತೋರಿಸುವ ಮೆಮೊವನ್ನು ಸಲ್ಲಿಸಿದರು. ಆದೇಶವನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೆಮೊ ಹೇಳಿದೆ.

ಆದರೆ ನ್ಯಾಯಾಲಯವು ಬಿಬಿಎಂಪಿಯ ಈ ಕ್ರಮಕ್ಕೆ ತೃಪ್ತಿ ಹೊಂದಿಲ್ಲ. ಏಪ್ರಿಲ್ ಆದೇಶಕ್ಕೆ ಅನುಸಾರವಾಗಿ ಫುಟ್ ಪಾತ್ ಅತಿಕ್ರಮಣದಾರರ ವಿರುದ್ಧ ಕ್ರಿಮಿನಲ್ ಕಾನೂನನ್ನು ಜಾರಿಗೊಳಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಮೆಮೊನಲ್ಲಿ ದಾಖಲಿಸಿಲ್ಲವೆಂದು ಪ್ರಶ್ನಿಸಿದೆ.

ಇದನ್ನೂ ಓದಿ: ತ್ರಿಪುರಾ ಗಡಿ ಭಾಗದಲ್ಲಿ ಉಗ್ರರ ಗುಂಡಿನ ದಾಳಿಗೆ ಕಲಬುರಗಿ ಯೋಧ ಹುತಾತ್ಮ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ

Follow us on

Related Stories

Most Read Stories

Click on your DTH Provider to Add TV9 Kannada