HMP ವೈರಸ್​ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಮುಂಜಾಗ್ರತೆ ಅಗತ್ಯ: ಸಚಿವ ಗುಂಡೂರಾವ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 06, 2025 | 2:55 PM

ಕರ್ನಾಟಕದಲ್ಲಿ ಹೆಚ್‌ಎಂಪಿವಿ ವೈರಸ್ ಪ್ರಕರಣಗಳು ವರದಿಯಾಗಿವೆ ಆದರೆ ಆತಂಕಕ್ಕೆ ಕಾರಣವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ವೈರಸ್ ಹೊಸದಲ್ಲ ಮತ್ತು ಜೀವಕ್ಕೆ ಅಪಾಯಕಾರಿಯಲ್ಲ. ರಾಜ್ಯದಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯ ಮತ್ತು ಚಿಕಿತ್ಸೆ ಲಭ್ಯವಿದೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

HMP ವೈರಸ್​ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಮುಂಜಾಗ್ರತೆ ಅಗತ್ಯ: ಸಚಿವ ಗುಂಡೂರಾವ್
HMP ವೈರಸ್​ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಮುಂಜಾಗ್ರತೆ ಅಗತ್ಯ: ಸಚಿವ ಗುಂಡೂರಾವ್
Follow us on

ಬೆಂಗಳೂರು, ಜನವರಿ 06: ಕೊರೊನಾ ಕೊಟ್ಟ ಹೊಡೆತದಿಂದ ಜನರು ಇನ್ನೂ ಹೊರಬಂದಿಲ್ಲ. ಹೀಗಿರುವಾಗಲೇ ಚೀನಾದಲ್ಲಿ ಮತ್ತೊಂದು ವೈರಸ್ ರಣಕೇಕೆ ಹಾಕುತ್ತಿದೆಯಂತೆ. ಹೀಗಿರುವಾಗ ಬೆಂಗಳೂರಿನಲ್ಲೂ ಹೆಚ್​​ಎಂಪಿ ವೈರಸ್ (HMPV) ಪತ್ತೆಯಾಗಿದ್ದು, ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಚ್ಎಂಪಿ ವೈರಸ್ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ, ಆದರೆ ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ.

ಆರೋಗ್ಯಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಹೆಚ್​​ಎಂಪಿ ವೈರಸ್​ ಇದು ಹೊಸದೇನಲ್ಲ. ಬಹಳ ವರ್ಷಗಳಿಂದ ಹೆಚ್​​ಎಂಪಿ ವೈರಸ್ ವಿಶ್ವದಾದ್ಯಂತ ಇದೆ. ಹೆಚ್​​ಎಂಪಿ ವೈರಸ್​​ನಿಂದ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹೆಚ್ಎಂಪಿವಿ ಸೋಂಕಿತ ಮಗುವಿನ ಅರೋಗ್ಯ ಸ್ಥಿರವಾಗಿದೆ, ಆತಂಕಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

ಚೀನಾದಲ್ಲಿ ಮ್ಯೂಟೆಟ್​ ಆಗಿದೆಯೋ ಏನೋ ನನಗೆ ಗೊತ್ತಿಲ್ಲ. ಚೀನಾದಲ್ಲಿನ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು. ದೇಶದಲ್ಲಿ ಹೆಚ್​​ಎಂಪಿ ವೈರಸ್​ ರೀತಿ ನೂರಾರು ವೈರಸ್​ಗಳಿವೆ. 2001ರಲ್ಲಿ ಪ್ರಥಮ ಬಾರಿಗೆ ಹೆಚ್ಎಂಪಿ ವೈರಸ್ ಪತ್ತೆಹಚ್ಚಲಾಗಿದೆ. 8 ತಿಂಗಳ ಮಗು ನಾರ್ಮಲ್ ಆಗಿದೆ. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಮಗು ಡಿಸ್ಚಾರ್ಜ್​ ಆಗಲಿದೆ ಎಂದು ಹೇಳಿದ್ದಾರೆ.

ಈ ಆರೋಗ್ಯ ಲಕ್ಷಣಗಳು ಹೆಚ್ಎಂಪಿವಿ ಪ್ರಕರಣವಲ್ಲ

ಕರ್ನಾಟಕದಲ್ಲಿ 2 ಲಕ್ಷ 36 ಸಾವಿರ ಐಎಲ್ಐ ಕೇಸ್​ಗಳಿವೆ. ಐಎಲ್ಐ ಕೇಸ್​ನಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಪುದುಚೆರಿ, ಗುಜರಾತ್​ನಲ್ಲಿ ಹೆಚ್ಎಂಪಿ ವೈರಸ್ ಪ್ರಕರಣವಿದೆ. ಕೇಂದ್ರ ಸರ್ಕಾರದ ಮಾಹಿತಿ ಅನ್ವಯ ಐಎಲ್​​ಐ ಕೇಸ್ ಹೆಚ್ಚಾಗಿಲ್ಲ. ಚಳಿಗಾಲದಲ್ಲಿ ಸಹಜವಾಗಿ ಶೀತ, ಕೆಮ್ಮು, ಕಫ ಇದ್ದೇ ಇರುತ್ತೆ. ಆದರೆ ಇಂತಹ ಆರೋಗ್ಯ ಲಕ್ಷಣ ಹೆಚ್ಎಂಪಿವಿ ಪ್ರಕರಣವಲ್ಲ. ರಾಜ್ಯ ಆರೋಗ್ಯ ಇಲಾಖೆಯಲ್ಲಿ ಹಣಕಾಸಿನ ಕೊರತೆಯಿಲ್ಲ. ವೈದ್ಯಕೀಯ ಪರಿಕರ ಖರೀದಿ ಸಹಜವಾಗಿಯೇ ನಡೆಯುತ್ತಿದೆ. ಆಯಾ ಆಸ್ಪತ್ರೆಗಳಿಂದಲೇ ವೈದ್ಯಕೀಯ ಸಾಮಗ್ರಿ ಖರೀದಿ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಈ ಸರ್ಕಾರ ಅಧಿಕಾರದಲ್ಲಿದ್ದರೆ ಹೆಚ್ಎಂಪಿವಿಯಿಂದ ಭಗವಂತನೇ ಜನರನ್ನು ಕಾಪಾಡಬೇಕು: ಡಾ ಸಿಎನ್ ಅಶ್ವಥ್ ನಾರಾಯಣ

ಕೇಂದ್ರ ಸರ್ಕಾರ ಐಸಿಎಂಆರ್ ಸರ್ವಲೆನ್ಸ್ ಮಾಡುತ್ತಿದೆ. ಐಸಿಎಂಆರ್ ಪ್ರಕಾರ ಶೇ 1ರಷ್ಟು ಹೆಚ್​​​​ಎಂಪಿವಿ ಬರುತ್ತದೆ. ಈ ವೈರಸ್​​ನಿಂದ ಮರಣ ಪ್ರಮಾಣ ಕಡಿಮೆ. ಬಂದ ಬಳಿಕ ಗುಣಮುಖರಾಗುತ್ತಾರೆ. ಹೆಚ್​​​​ಎಂಪಿವಿ
ಬಂದ ಎರಡು ಮಕ್ಕಳು ಗುಣಮುಖರಾಗಿದ್ದಾರೆ. ಮಾಸ್ಕ್ ಹಾಕಬೇಕು, ಲಾಕ್ ಡೌನ್ ಮಾಡಬೇಕು ಅಂತಾ ಯಾವುದು ಇಲ್ಲ. ಎಚ್ಚರಿಕೆಯಿಂದ ಇರಬೇಕು ಅಷ್ಟೇ. ಈಗಾಗಲೇ ನಾವು ಕೂಡ ಮಾರ್ಗಸೂಚಿ ಹೇಳಿದ್ದೇವೆ. ಏನು ಮಾಡಬೇಕು, ಏನು ಮಾಡಬಾರದು ಅಂತಾ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.