AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ 203 ಮಾದರಿಗಳಲ್ಲಿ ಒಮಿಕ್ರಾನ್ ರೂಪಾಂತರದ XBB ಪತ್ತೆ, ರಾಜ್ಯದಲ್ಲಿ ಇಂದಿನ ಕೋವಿಡ್ ಸ್ಥಿತಿಗತಿ ಹೀಗಿದೆ

ಕರ್ನಾಟಕ ಆರೋಗ್ಯ ಇಲಾಖೆಯು ಕಳುಹಿಸಿದ ಆರ್​ಟಿ-ಪಿಸಿಆರ್ ಮಾದರಿಗಳ ವರದಿ ಇಲಾಖೆಯ ಕೈ ಸೇರಿದೆ. ಅದರಂತೆ 203 ಮಾದರಿಗಳಲ್ಲಿ ಕೋವಿಡ್​ನ ಒಮಿಕ್ರಾನ್ ರೂಪಾಂತರದ ಹೊಸ ಎಕ್ಸ್​​ಬಿಬಿ ಉಪವರ್ಗ ಪತ್ತೆಯಾಗಿದೆ.

ಕರ್ನಾಟಕದಲ್ಲಿ 203 ಮಾದರಿಗಳಲ್ಲಿ ಒಮಿಕ್ರಾನ್ ರೂಪಾಂತರದ XBB ಪತ್ತೆ, ರಾಜ್ಯದಲ್ಲಿ ಇಂದಿನ ಕೋವಿಡ್ ಸ್ಥಿತಿಗತಿ ಹೀಗಿದೆ
ಸಾಂದರ್ಭಿಕ ಚಿತ್ರImage Credit source: AFP Photo
TV9 Web
| Edited By: |

Updated on:Jan 14, 2023 | 8:57 PM

Share

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆಯು ಡಿಸೆಂಬರ್​ ತಿಂಗಳಲ್ಲಿ ಕಳುಹಿಸಿದ್ದ 232 ಆರ್​ಟಿ-ಪಿಸಿಆರ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ವರದಿ ಇಲಾಖೆಯ ಕೈ ಸೇರಿದೆ. ಈ ವರದಿಯಲ್ಲಿ 232 ಮಾದರಿಗಳ ಪೈಕಿ 203 ಮಾದರಿಗಳಲ್ಲಿ ಕೋವಿಡ್​​ನ ಒಮಿಕ್ರಾನ್ ರೂಪಾಂತರದ ಹೊಸ ಎಕ್ಸ್​​ಬಿಬಿ (Omicron variant XBB) ಉಪವರ್ಗ ಪತ್ತೆಯಾಗಿದೆ. INSACOG (Indian SARS-CoV-2 Consortium on Genomics) ಇದನ್ನು ದೃಢಪಡಿಸಿದೆ. 26 ಮಾದರಿಗಳಲ್ಲಿ ಒಮಿಕ್ರಾನ್ ರೂಪಾಂತರ ಬಿಎ 2ನ ಉಪ-ಶ್ರೇಣಿಗಳನ್ನು ದೃಢಪಡಿಸಲಾಗಿದೆ ಎಂದು ವರದಿಗಳು ಬಹಿರಂಗಪಡಿಸಿವೆ. 2 ಮಾದರಿಗಳಲ್ಲಿ ಬಿಎ5 ದೃಢಪಟ್ಟಿದ್ದು, ಒಂದು ಮಾದರಿಯಲ್ಲಿ BA1.1.529 ಕಂಡುಬಂದಿದೆ.

BF.7 ವೈರಸ್ ಭೀತಿ ನಡುವೆಯೂ ಗುಜರಾತ್ ಬಳಿಕ ಕರ್ನಾಟಕದಲ್ಲೂ ಮೊದಲ ಒಮಿಕ್ರಾನ್ ಉಪತಳಿ XBB.1.5 ವೈರಸ್ ಜನವರಿ 4ರಂದು​ ಪತ್ತೆಯಾಗಿತ್ತು. ಚೀನಾ ಅಮೇರಿಕಾದಲ್ಲಿ ಆರ್ಭಟಿಸುತ್ತಿರುವ ಹೊಸ ರೂಪಾಂತರಿ ಕೊವಿಡ್ XBB 1.5 ದೇಶದಲ್ಲಿ ಮೊದಲ ಬಾರಿಗೆ ಗುಜರಾತ್​ನಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಕರ್ನಾಟಕದಲ್ಲೂ ಪತ್ತೆಯಾಗಿದೆ. ಒಮಿಕ್ರಾನ್ ರೂಪಾಂತರಿ BF.7ಕ್ಕಿಂತ XBB.1.5 ರೂಪಾಂತರಿ ವೈರಸ್ ಅತಿವೇಗವಾಗಿ ಜನರಿಗೆ ಹರಡುವ ವೈರಸ್ ಆಗಿದೆ.

ಇದನ್ನೂ ಓದಿ: Omicron subvariant XBB.1.5: ವಿಶ್ವದಲ್ಲಿ ಹೆಚ್ಚುತ್ತಿದೆ XBB.1.5, WHO ಕಳವಳ; ಭಾರತದಲ್ಲಿ 0.01% ಕೋವಿಡ್ ಪಾಸಿಟಿವಿಟಿ

ಕರ್ನಾಕಟದಲ್ಲಿ ಇಂದು ಪತ್ತೆಯಾದ ಕೋವಿಡ್ ಪ್ರಕರಣಗಳು

ರಾಜ್ಯದಲ್ಲಿ ಇಂದು ಒಟ್ಟು 23 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 9 ಕೋವಿಡ್ ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ 5 ಪ್ರಕರಣಗಳು ಪತ್ತೆಯಾದರೆ, ಗದಗ, ಹಾವೇರಿ, ಕೊಪ್ಪಳದಲ್ಲಿ ತಲಾ 2 ಪ್ರಕರಣಗಳು, ಬೆಳಗಾವಿ, ಕೊಡಗು, ಕೋಲಾರ ಜಿಲ್ಲೆಯಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ಸದ್ಯ ರಾಜ್ಯದಲ್ಲಿ 146 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ನಿನ್ನೆ ರಾಜ್ಯದಲ್ಲಿ 34 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:57 pm, Sat, 14 January 23

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ